ಅಥವಾ

ಒಟ್ಟು 4 ಕಡೆಗಳಲ್ಲಿ , 2 ವಚನಕಾರರು , 3 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅರತುದಯ್ಯಾ ಅಂಗಗುಣ, ಒರತುದಯ್ಯಾ ಭಕ್ತಿರಸ, ಆವರಿಸಿತ್ತಯ್ಯಾ ಲಿಂಗವಂಗವನು, ಏನೆಂದರಿಯೆನಯ್ಯಾ ಲೋಕ¯õ್ಞಕಿಕವ. ಲಿಂಗಭ್ರಾಂತನಾದೆನಯ್ಯಾ ಕೂಡಲಸಂಗಯ್ಯಾ, ನಿಮ್ಮ ಕರುಣವೆನ್ನನೆಡೆಗೊಂಡಿತ್ತಾಗಿ.
--------------
ಬಸವಣ್ಣ
ಕತ್ತಲೆಯನೊಳಕೊಂಡ ಬೆಳಗಿನಂತೆ ಪಕ್ಷಿಯನೊಳಕೊಂಡ ತತ್ತಿಯಂತೆ ಮುತ್ತನೊಳಕೊಂಡ ಚಿಪ್ಪಿನಂತೆ ಸಾಗರವನೊಳಕೊಂಡ ಶಶಿಯಂತೆ ಜಗವನೊಳಕೊಂಡ ಆಕಾಶದಂತೆ ಎನ್ನ ನೀವು ಒಳಕೊಂಡಿರಿಯಾಗಿ ನಾನೋ ನೀನೋ ಏನೆಂದರಿಯೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ವಾರವೆಂದರಿಯೆ, ದಿನವೆಂದರಿಯೆ, ಏನೆಂದರಿಯೆನಯ್ಯಾ. ಇರುಳೆಂದರಿಯೆ, ಹಗಲೆಂದರಿಯೆ, ಏನೆಂದರಿಯೆನಯ್ಯಾ. ನಿಮ್ಮ ಪೂಜಿಸಿ ಎನ್ನುವ ಮರೆದೆ ಕೂಡಲಸಂಗಮದೇವಾ. 490
--------------
ಬಸವಣ್ಣ
-->