ಅಥವಾ

ಒಟ್ಟು 5 ಕಡೆಗಳಲ್ಲಿ , 1 ವಚನಕಾರರು , 3 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉಂಬಲ್ಲಿ ಉಡುವಲ್ಲಿ ಕ್ರೀಯಳಿಯಿತ್ತೆಂಬರು, ಕೊಂಬಲ್ಲಿ ಕೊಡುವಲ್ಲಿ ಕುಲವನರಸುವರು, ಏನೆಂಬೆನಯ್ಯ ಒಚ್ಚೊಚ್ಚಿ ಭಕ್ತರಳ ಏನೆಂಬೆನಯ್ಯ ಒಚ್ಚೊಚ್ಚಿ ಭವಿಗಳ? ಇದು ಕಾರಣ ಕೂಡಲಚೆನ್ನಸಂಗಯ್ಯನಲ್ಲಿ ಭಕ್ತಕಾಯ ಮಮಕಾಯವೆಂತೆಂಬರು?
--------------
ಚನ್ನಬಸವಣ್ಣ
ಶಿಷ್ಯನೆಂಬ ಪ್ರತಿಭಾವವಿಲ್ಲದ ಗುರು, ಗುರುವೆಂಬ ಪ್ರತಿಭಾವವಿಲ್ಲದ ಶಿಷ್ಯ, ಏನೆಂಬೆನಯ್ಯ ಎರಡಿಲ್ಲದ ಘನವ ? ಏನೆಂಬೆನಯ್ಯ ಎರಡೊಂದಾದ ಘನವ ! ಕೂಡಲಚೆನ್ನಸಂಗನಲ್ಲಿ ಗುರುಶಿಷ್ಯಸಂಬಂಧವಪೂರ್ವ.
--------------
ಚನ್ನಬಸವಣ್ಣ
ಏನೆಂಬೆನಯ್ಯ ? ಕಲ್ಪಿತ ಬಂಧನ ಬಿಡದು, ಪ್ರಸಾದಕ್ಕೆಂತೊ ? ಗಮನಶಂಕೆ ಬಿಡದು, ಪ್ರಾಣಲಿಂಗಕ್ಕೆಂತೊ ? ನಿಜತುಂಬಿ ನಿಕ್ಷೇಪವಾಗದು- ಇದು ಕಾರಣ, ಅರ್ಪಿತವುಳ್ಳನ್ನಕ್ಕ ಪ್ರಸಾದಿಯಲ್ಲ. ಅವಧಾನವುಳ್ಳನ್ನಕ್ಕ ಪ್ರಾಣಲಿಂಗಿಯಲ್ಲ, ಕೂಡಲಚೆನ್ನಸಂಗಯ್ಯ.
--------------
ಚನ್ನಬಸವಣ್ಣ
-->