ಒಟ್ಟು 6 ಕಡೆಗಳಲ್ಲಿ , 2 ವಚನಕಾರರು , 3 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಗುರುವೆಂಬ ಪ್ರತಿಭಾವವಿಲ್ಲದ ಶಿಷ್ಯ;ಶಿಷ್ಯನೆಂಬ ಪ್ರತಿಭಾವವಿಲ್ಲದ ಗುರು;ಏನೆಂಬೆನೇನೆಂಬೆ ಎರಡಿಲ್ಲದ ಘನವನೇನೆಂಬೆನೇನೆಂಬೆ !ಉಭಯವಳಿದು ಒಂದಾದುದನೇನೆಂಬೆನೇನೆಂಬೆ:ಕೂಡಲಚೆನ್ನಸಂಗಯ್ಯನಲ್ಲಿಗುರುಶಿಷ್ಯಸಂಬಂಧವಪೂರ್ವ
ಹುಸಿಯೆಂಬ ಅಲಗಿಂಗೆ ಒಡಲೆ ಗುರಿಯಾಯಿತ್ತುಏನೆಂಬೆನೇನೆಂಬೆ ವಿಧಿ ಮಾಡಿತ್ತ.ಸಮೆದ ಮಾಡಿಗಳು ನೆಲೆಗೊಳ್ಳದೆ ಹೋದವು.ಮಹಾಲಿಂಗ ತ್ರಿಪುರಾಂತಕನ ಶರಣರೆಎನ್ನೊಡೆಯರೆಂದರಿಯದೆ ಇದ್ದ ಕಾರಣತೆರಹು ಮರಹಿನಲ್ಲಿ ತಾವೆಡೆಗೊಂಡವು.
ಏನೆಂಬೆನೇನೆಂಬೆ ಆಶ್ರಯವಿರಹಿತವ,ಏನೆಂಬೆನೇನೆಂಬೆ ನಾಮ ನಿರ್ನಾಮವ,ಏನೆಂಬೆನೇನೆಂಬೆ ಸಾರಾಯ ಸನುಮತವಲ್ಲದುದ,ಏನೆಂಬೆನೇನೆಂಬೆ ದೇವಾ ಕ್ರೀಯ ಮೀರಿದ ಸಂಬಂಧವ,ಕೂಡಲಚೆನ್ನಸಂಗಮದೇವಾ.ಆನೆಂಬುದಿಲ್ಲದುದನೇನೆಂದುಪಮಿಸುವೆ.