ಅಥವಾ

ಒಟ್ಟು 3 ಕಡೆಗಳಲ್ಲಿ , 3 ವಚನಕಾರರು , 3 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತನ್ನನರಿದು ಹಿಡಿದು ಬಂದ ಶರಣ ಎಂಟರಲ್ಲಿ ನಿಂದು, ಏಳರಲ್ಲಿ ನಡೆದು, ಒಂದರಲ್ಲಿ ನಿಂದು, ಎಂಟರಲ್ಲಿ ನಡೆದು, ಒಂದರಲ್ಲಿ ನಿಂದು, ಆರರಲ್ಲಿ ನಡೆದು, ಒಂದರಲ್ಲಿ ನಿಂದು, ನಾಲ್ಕರಲ್ಲಿ ನಡೆದು, ಒಂದರಲ್ಲಿ ನಿಂದು ಮೂರರಲ್ಲಿ ನಡೆದು ಒಂದರಲ್ಲಿ ನಿಂದು, ಮೂರರಲ್ಲಿ ನಡೆದುಡುಗಿದ ಮತ್ತೆ ಒಂಬತ್ತರಲ್ಲಿ ತನುಮನಭಾವವೆರೆದು ಬಂದು, ಮತ್ತೊಂಬತ್ತರಲ್ಲಿ ತನುಮನಭಾವವೆರೆದು ಬಂದು, ಮತ್ತೊಂಬತ್ತರಲ್ಲಿ ತನುಮನಭಾವವೆರೆದು ಬಂದು, ಮತ್ತೊಂಬತ್ತರಲ್ಲಿ ತನುಮನಭಾವವೆರೆದು ಬಂದು, ಮತ್ತೊಂಬತ್ತರಲ್ಲಿ ತನುಮನಭಾವವೆರೆದು ಬಂದು, ಮತ್ತೊಂಬತ್ತರಲ್ಲಿ ತನುಮನಭಾವವೆರೆದು ಬಂದು, ಮತ್ತೊಂಬತ್ತರಲ್ಲಿ ತನುಮನಭಾವವೆರೆದು ಬಂದು, ಮತ್ತೆ ಮೂರರಲ್ಲಿ ತನುಮನಭಾವವೆರೆದು ನಿಂದ ಮಹಿಮಂಗೆ ಗುರುನಿರಂಜನ ಚನ್ನಬಸವಲಿಂಗ ಕರತಳಾಮಳಕ ಕಡೆಗಿಲ್ಲ.
--------------
ದೇಶಿಕೇಂದ್ರ ಸಂಗನಬಸವಯ್ಯ
ಎರಡು ಕೊಟ್ಟು ಒಂದು ಕೊಂಡೆ, ಒಂದು ಕೊಟ್ಟು ಏನೂ ಕೊಳ್ಳಲಿಲ್ಲ. ಮೂರುಹಣವ ಕೊಟ್ಟು ಮೂರುರತ್ನವ ಕೊಂಡೆ. ಮೂರು ಕೊಂದು ಆರುಮಂದಿಗೆ ಹೇಳದೆ ಏಳರಲ್ಲಿ ಸತ್ತು ಸಂಸಾರ ಮಾಡುತಿರ್ದ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಹತ್ತರ ಹಸುಗೆಯಲಚ್ಚಾದ ಪರಿಗಳ ನೀವೆತ್ತ ಬಲ್ಲಿರೊ! ಗಣಿತದ ಗುಣತವ ನಾಲ್ಕು ಬಂದಡೆ ಖಳ ಐದು ಬಂದಡೆ ನಂದಿ, ಆರಾದಡೆ ಜಾಗರ, ಏಳರಲ್ಲಿ ತಿಗ, ಇದು ಜಾಣರೆಂಬವರಿಗೆ ಕನ್ನಡ, ಸಿಮ್ಮಲಿಗೆಯ ಚೆನ್ನರಾಮನೆಂಬ ಅಂಗದಲ್ಲಿ ಜೂಜುಕೊಳ್ಳದು.
--------------
ಚಂದಿಮರಸ
-->