ಅಥವಾ
(8) (4) (5) (0) (3) (0) (0) (0) (4) (1) (0) (0) (0) (0) ಅಂ (2) ಅಃ (2) (16) (0) (7) (1) (0) (2) (0) (5) (0) (0) (0) (0) (0) (0) (0) (14) (0) (7) (0) (15) (8) (1) (7) (2) (9) (1) (0) (0) (2) (7) (4) (0) (13) (10) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಅನಲನ ಬಣ್ಣದ ಉಲುಹಿನ ರೂಹಿನ ತೋರಿಕೆ ನಿಶ್ಚಯ ದಿಟವೆಂದು ಎಳೆಯ ಕತ್ತಲೆ ಹಳೆಯ ಬಣ್ಣದ ಬಳಿ ವಿಡಿದಾಡುವಿರಲ್ಲಾ! ಭವಲೇಪ ಲೋಪವಿಲ್ಲವಾಗಿ ಪುಣ್ಯಪಾಪ ಜನಿತರು ಹಿರಿಯರು ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗದ ಹೆಸರಲ್ಲಿ ಸಂತುಷ್ಟರಿವರು.
--------------
ಚಂದಿಮರಸ
ಅಶನದಲಾಯಷ್ಯ ವ್ಯಸನದ ಬೀಜ ನಟನೆಯನೇನುವ ನಟಿಸದಿರಾ! ಆದುದೆ ಜನನ, ಮಾದುದೆ ಮರಣ, ತೋರುವುದೆಲ್ಲವು ದಿವಸದ ವಿಸ್ತಾರ. ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗ ಸಂಭ್ರಮ ಜೀವರಿಗೆಲ್ಲಿಯದೊ?
--------------
ಚಂದಿಮರಸ
ಅರಿವುದೊಂದೆ ಎರಡಾಗಬಲ್ಲುದೊಂದೆ, ಬೇರೆ ತೋರಬಲ್ಲುದದೊಂದೆ, ತನ್ನ ಮರೆಯಬಲ್ಲುದದೊಂದೆ, ತಾನಲ್ಲದನ್ಯವಿಲ್ಲೆಂದರಿದ ಅರಿವು ನೀನೆ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ಅರ್ಪಿತಂಗಳನಾರು ಮುಖದಲ್ಲಿ ಮಾಡಬಲ್ಲಡೆ ಕಲ್ಪಿತಂಗಳು ಹೊದ್ದಲಮ್ಮವು. ಅರ್ಪಿತವಳವಡದ ಭೇದ ಮರಳಿತ್ತು [ಸಿ] ಮ್ಮಲಿಗೆಯ ಚೆನ್ನರಾಮನೆಂಬ ಲಿಂಗದಲ್ಲಿ.
--------------
ಚಂದಿಮರಸ
ಅಂಗದೊಳಗೆ ಲಿಂಗನಾಗಿ ಬಂದ ಲಿಂಗವನೆಂತು ಪೂಜಿಸಿ ಮುಕ್ತಿಯ ಪಡೆವೆನಯ್ಯಾ! ಸೃಷ್ಟಿಯಲ್ಲಿ ಹುಟ್ಟಿ ನಷ್ಟವಹ ಲಿಂಗವನೆಂತು ಮುಟ್ಟಿ ಪೂಜಿಸಿ ಮುಕ್ತಿಯ ಪಡೆವೆನಯ್ಯಾ! ಕಿಚ್ಚು ಕಿಚ್ಚ ಸುಡುವುದೆ ಅಯ್ಯಾ? ಈ ಕಷ್ಟವ ಕಂಡು ಮುಟ್ಟಲಂಜಿ ನಿಮ್ಮಲ್ಲಿಯೇ ನಿಂದೆ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ಅರಿಯದ ಗುರು ಅರಿಯದ ಶಿಷ್ಯಂಗೆ ಅನುಗ್ರಹವ ಮಾಡಿದಡೇನಪ್ಪುದೆಲವೋ ಅಂಧಕನ ಕೈಯ ಅಂಧಕ ಹಿಡಿದಂತೆ, ಮುಂದೇನಪ್ಪುದು ಹೇಳೆಲೆ ಮರುಳೆ? ಬರುಮಾತಿನ ರಂಜನೆಯನಾಡದಿರು ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗವು ಹುಸಿಯ ಹಸರದವನಲ್ಲ.
--------------
ಚಂದಿಮರಸ
ಅಂಗದ ಮೇಲೆ ಶ್ರೀಗುರು ಲಿಂಗ ಸಂಬಂಧವ ಮಾಡಿ ಅಂಗಾಶ್ರಯವನಳಿದು ಲಿಂಗಾಶ್ರಯವ ಮಾಡಿದ ಬಳಿಕ ಅಂಗಭೋಗಂಗಳ ಬಿಟ್ಟು, ಲಿಂಗ ಕ್ರಿಯೆಗಳನುಳ್ಳವರಾಗಿ ಅಂಗಾರ್ಚನೆಯನತಿಗಳೆದು ಲಿಂಗಾರ್ಚನೆಯ ಮಾಡುತ್ತ, ಅಂಗ ಮುಂತಲ್ಲವೆಂದು ಲಿಂಗ ಮುಂತಾಗಿಯೆ ಎಲ್ಲ ಕ್ರೀಗಳನು ಗಮಿಸಿ ಸದ್‍ವ್ರತವನಾಚರಿಸುತ್ತ, ನಿಜವೀರಶೈವ ಸಂಪನ್ನರಪ್ಪ ಭಕ್ತಜಂಗಮಾರಾಧ್ಯ ಸ್ಥಳಂಗಳನುಳ್ಳವರಾಗಿರ್ದು ಮತ್ತೆ ಮರಳಿ, ಅಂಗವನೆ ಆಶ್ರಯಿಸಿ, ಅಂಗಭೋಗಂಗಳನು, ಅಂಗಾರ್ಪಿತ ಭುಂಜನೆಗಳನು ಭಕ್ತ ಜಂಗಮಾರಾಧ್ಯ ಸ್ಥಳಂಗಳನ್ನುಳ್ಳವರಾಗಿರ್ದು ಮತ್ತೆ, ಮರಳಿ, ಅಂಗವನೆ ಆಶ್ರಯಿಸಿ ಅಂಗಭೋಗಂಗಳನು, ಅಂಗಕ್ರೀಗಳನು, ಅಂಗದರ್ಚನೆಗಳನು, ಅಂಗ ಮುಂತಾದ ಗಮನಂಗಳನು, ಅಂಗಾರ್ಪಿತ ಭುಂಜನೆಗಳನು, ಭಕ್ತ ಜಂಗಮಾರಾಧ್ಯರುಗಳು ಲಿಂಗವಿರಹಿತರಾಗಿ ಮಾಡಿದಡೆ ಲಿಂಗವಿಲ್ಲ, ಲಿಂಗಾರ್ಚನೆಯಿಲ್ಲ, ಲಿಂಗಪ್ರಸಾದವಿಲ್ಲ. ಲಿಂಗ ಮುಂತಾದ ಮುಕ್ತಿಗಮನ, ಇಹಪರದಲ್ಲಿಯೂ ಇಲ್ಲ. ಇದನರಿದು, ಲಿಂಗಭೋಗವೇ ಭೋಗ, ಲಿಂಗಾರ್ಚನೆಯೇ ಪೂಜೆ, ಲಿಂಗಾರ್ಪಿತವಾದುದೇ ಪ್ರಸಾದ, ಲಿಂಗಮುಂತಾಗಿಯೇ ಎಲ್ಲ ಕ್ರೀಗಳನು ಮಾಡುವುದಯ್ಯಾ, ಸಿಮ್ಮಲಿಗೆಯ ಚಿನ್ನರಾಮಾ.
--------------
ಚಂದಿಮರಸ
ಅಳಿವ ತೋರಿಕೆಗಾದಿಯಿಲ್ಲ, ಕಳಿವ ಭ್ರಾಂತಿಗೆ ಲಕ್ಷ ್ಯವಿಲ್ಲ. ತಿಳಿವೆನಿನ್ನೇನ ಹೇಳಾ! ಬೆಳಗ ತೋರಿಸುವ ಬೆಳಗೊಂದಿಲ್ಲವಾಗಿ ಸ್ವಯಂಪ್ರಕಾಶ ಪರಿಪೂರ್ಣವಾದ ನಿಜವು ನೀನೇ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ