ಅಥವಾ

ಒಟ್ಟು 14 ಕಡೆಗಳಲ್ಲಿ , 3 ವಚನಕಾರರು , 4 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆಯತ ಒಂದೆಡೆಯಲ್ಲಿ ತೆರನನರಿಯರಾಗಿ ನೋಡಬಾರದು, ನೋಡಿ ನುಡಿಸಬಾರದು. ಅದು. ತಿದ್ದಬಾರದ ಡೊಂಕು ಕೂಡಲಸಂಗನ ಭಕ್ತಿ.
--------------
ಬಸವಣ್ಣ
ಲಿಂಗಜಂಗಮ ಒಂದೇ ಎಂದು ಕಂದೊಳಲುಗೊಂಡಿರಲ್ಲಾ! ಮೂರೆಡೆಯ ಮುಟ್ಟಿತ್ತು ತ್ರಿವಿಧಾಚಾರ;_ ಲಿಂಗ ಒಂದೆಡೆಯಲ್ಲಿ, ಜಂಗಮ ಒಂದೆಡೆಯಲ್ಲಿ, ಪ್ರಸಾದ ಒಂದೆಡೆಯಲ್ಲಿ. _ಇಂತು ಎಲ್ಲಿಯ ಪ್ರಸಾದವೊ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಕಾಯಪ್ರಸಾದ ಒಂದೆಡೆಯಲ್ಲಿ, ಜೀವಪ್ರಸಾದ ಒಂದೆಡೆಯಲ್ಲಿ, ವ್ಯಾಪಾರ ಪ್ರಸಾದ ಒಂದೆಡೆಯಲ್ಲಿ, ನಿತ್ಯಪ್ರಸಾದ ಒಂದೆಡೆಯಲ್ಲಿ, ವಚನಪ್ರಸಾದ ಒಂದೆಡೆಯಲ್ಲಿ, ಅರ್ಥ ಪ್ರಾಣ ಅಭಿಮಾನ ಒಂದೆಡೆಯಲ್ಲಿ, ಅಖಂಡಿತವೆನಿಸಿ ತಾ ಲಿಂಗಪ್ರಸಾದ ಒಂದೆಡೆಯಲ್ಲಿ. ಇಂತಿವೆಲ್ಲವೂ ಏಕವಾದ ಪ್ರಸಾದಿಯ ಪ್ರಸಾದದಿಂದ ಕೂಡಲಚೆನ್ನಸಂಗಾ ನಿಮ್ಮ ಪ್ರಸಾದಿಯಾದೆನಯ್ಯಾ.
--------------
ಚನ್ನಬಸವಣ್ಣ
ಕಾಯ ಪ್ರಸಾದ ಒಂದೆಡೆಯಲ್ಲಿ, ಜೀವ ಪ್ರಸಾದ ಒಂದೆಡೆಯಲ್ಲಿ, ವ್ಯಾಪಾರ ಪ್ರಸಾದ ಒಂದೆಡೆಯಲ್ಲಿ, ಪ್ರಸಾದಿ ಪ್ರಸಾದವನೆ ಪತಿಕರಿಸಿಕೊಂಡಿಪ್ಪ. ಓಗರ ಪ್ರಸಾದವೆಂಬ ಸಂಕಲ್ಪವಿರಹಿತ ಪ್ರಸಾದಿ, ಭ್ರಾಂತು ಸೂತಕವಳಿದುಳಿದ ಪ್ರಸಾದಿ, ಕೂಡಲಚೆನ್ನಸಂಗನಲ್ಲಿ ತಾನೆ ಪ್ರಸಾದಿ
--------------
ಚನ್ನಬಸವಣ್ಣ
-->