ಅಥವಾ

ಒಟ್ಟು 10 ಕಡೆಗಳಲ್ಲಿ , 3 ವಚನಕಾರರು , 5 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒಲ್ಲೆನಯ್ಯಾ, ಒಲ್ಲೆನಯ್ಯಾ, ನಿಮ್ಮವರಲ್ಲದವರ, ಒಲ್ಲೆನಯ್ಯಾ, ಒಲ್ಲೆನಯ್ಯಾ, ಜಗವೆಲ್ಲರಿಯಲು, ಒಲ್ಲೆನಯ್ಯಾ, ಒಲ್ಲೆನಯ್ಯಾ, ನೀ ಮುನಿದಡೆ ಮುನಿ. ಕೂಡಲಸಂಗಮದೇವಾ, ನಿಮ್ಮಾಣೆ, ನಿಮ್ಮ ಪ್ರಮಥರಾಣೆ.
--------------
ಬಸವಣ್ಣ
ಕೊಲ್ಲೆನಯ್ಯಾ ಪ್ರಾಣಿಗಳ, ಮೆಲ್ಲೆನಯ್ಯಾ ಬಾಯಿಚ್ಛೆಗೆ, ಒಲ್ಲೆನಯ್ಯಾ ಪರಸತಿಯರ ಸಂಗವ, ಬಲ್ಲೆನಯ್ಯಾ ಮುಂದೆ ತೊಡಕುಂಟೆಂಬುದ. ಬಳ್ಳದ ಬಾಯಂತೆ ಒಂದೆ ಮನ ಮಾಡಿ ನಿಲ್ಲೆಂದು ನಿಲಿಸಯ್ಯಾ, ಕೂಡಲಸಂಗಮದೇವಾ.
--------------
ಬಸವಣ್ಣ
ಕೂಡುವ ತವಕವೆ ನಿಮ್ಮ್ಲ ನೀ ಕೂಪನಾಗಿದ್ದ ಕೂಪೆ ನೋಡಯ್ಯಾ. ನೀನೊಲ್ಲದಿದ್ದರೆ ಒಲ್ಲೆನಯ್ಯಾ. ಎನ್ನರಿವು ಮರವೆ ಇಬ್ಬರಿಗೂ ಸಮ ನೋಡಯ್ಯಾ. ಎನ್ನ ಬಯಕೆಯೊಳಗಣ ಬಯಕೆಯ ನಿಧಾನವು ನೀನೆಂದು ಕಂಡ ಬಳಿಕ ಬಯಸುವಾತ ನೀನೆ ಕಾಣಾ, ಕಪಿಲಸಿದ್ಧಮಲ್ಲಿನಾಥಯ್ಯಾ.
--------------
ಸಿದ್ಧರಾಮೇಶ್ವರ
ಲಿಂಗಪ್ರಸಾದವನುಂಬರೆ ಎಂಜಲೆಂಬರು, ಲಿಂಗವನೆಂತೊಲಿಸುವರು? ತನುಭಾವವೆಂಜಲಾದರೇನು, ಪ್ರಸಾದವನೆಂಜಲೆಂತೆನಬಹುದು? ಜನ್ಮವುಂಟೆಂಬರು ಪಾವನವಿಡಿದು, ಮುನ್ನೊಂದು ಮೃಗದ ಮುಖದಲ್ಲಿ! ಅನ್ಯರಿಗುಂಟೆ ಶಿವಪಥವು? ಮನ್ನಿಸಲೇಕೆ ಒಲ್ಲೆನಯ್ಯಾ. ಶ್ವಪಚ್ಯೋಪಿ ಶಿವಭಕ್ತಾನಾಂ ಲಿಂಗಾರ್ಚನಪರಃ ಪದಂ ಅನ್ಯದೇವಂ ತು ಜಿಹ್ವಾಗ್ರೇ ಪರಜನ್ಮವಿಮೋಕ್ಷಣಂ ಪರಬ್ರಹ್ಮ ವೇದಶಾಸ್ತ್ರೇಭ್ಯೋ ಶಿವಶಾಸ್ತ್ರಂತು ಶಾಂಕರಿ ಎಂದುದಾಗಿ, ಕರ್ಮಾದಿಗುಣಂಗಳಂ ಕಳೆವ ಸಾಮಥ್ರ್ಯವೆನ್ನ ಲಿಂಗಕ್ಕಲ್ಲದೆ ಬೇರುಂಟೆ? ಇಂತೆಂದುದು ದೃಷ್ಟ. ಕೂಡಲಚೆನ್ನಸಂಗನ ಶರಣರಿಗಲ್ಲದಿಲ್ಲ.
--------------
ಚನ್ನಬಸವಣ್ಣ
ಶರಣಸನ್ನಿಹಿತ ಐಕ್ಯವಹಲ್ಲಿ ಹರಿಬ್ರಹ್ಮಾದಿಗಳು ಮೊದಲಾದ ತೆತ್ತೀಸಾದಿ ದೇವರ್ಕಳುಘೇ ಉಘೇ ಎನ್ನುತ್ತಿರಲು ಐಕ್ಯ ಬಸವಣ್ಣಂಗೆಠಾವಾವುದಯ್ಯಾ ಎಂದಡೆ; ಅಂಗದ ಬಲದಲ್ಲಿ ಬ್ರಹ್ಮನ ಸ್ಥಾನ, ಎಡದಲ್ಲಿ ನಾರಾಯಣನ ಸ್ಥಾನ, ಒಲ್ಲೆನಯ್ಯಾ. ಕೊರಳು ಗರಳದ ಸ್ಥಾನ, ಬಾಯಿ ಅಪ್ಪುವಿನ ಸ್ಥಾನ, ನಾಸಿಕ ವಾಯುವಿನ ಸ್ಥಾನ, ಕಣ್ಗಳು ಅಗ್ನಿಯ ಸ್ಥಾನ, ಜಡೆ ಗಂಗೆಯ ಸ್ಥಾನ, ನೊಸಲು ಚಂದ್ರನ ಸ್ಥಾನ, ಹಿಂದು ಸೂರ್ಯನ ಸ್ಥಾನ, ಚರಣಂಗಳು ಅಷ್ಟದಿಕ್ಪಾಲಕರ ಸ್ಥಾನ, ಗುಹ್ಯ ಕಾಮನ ಸ್ಥಾನ, ಹಸ್ತಂಗಳು ಕಪಾಲ ಖಟ್ವಾಂಗ ತ್ರಿಶೂಲ ಡಮರುಗ ಸ್ಥಾನ, ದೇಹ ರುಂಡಮಾಲೆಯ ಸ್ಥಾನ, ಕರ್ಣ ನಾಗೇಂದ್ರನ ಸ್ಥಾನ, ಇಂತೀ ಸ್ಥಾನಂಗಳ ನಾನೊಲ್ಲೆನಯ್ಯಾ. ಹೃದಯಮಧ್ಯದ ಅಂತರಾಳದ ಏಕಪೀಠದ ಸಿಂಹಾಸನವ ತೆರಪ ಕೊಡು ಕೂಡಲಸಂಗಮದೇವಾ.
--------------
ಬಸವಣ್ಣ
-->