ಅಥವಾ

ಒಟ್ಟು 3 ಕಡೆಗಳಲ್ಲಿ , 3 ವಚನಕಾರರು , 3 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶರಣನ ನೋಟ ಭವಕ್ಕೆ ಓಟ ನೋಡಯ್ಯಾ. ಶರಣನ ದೃಷ್ಟಿ ಶಿವದೃಷ್ಟಿ ನೋಡಯ್ಯಾ. ಶರಣನ ದೇಹ ಶಿವದೇಹ ನೋಡಯ್ಯಾ. ಶರಣನ ಪಾದುಕೆ ಎಮ್ಮ ಕಪಿಲಸಿದ್ಧಮಲ್ಲಿಕಾರ್ಜುನನ ಚಮ್ಮಾವುಗೆ ನೋಡಾ, ಮಡಿವಾಳ ಮಾಚಣ್ಣಾ.
--------------
ಸಿದ್ಧರಾಮೇಶ್ವರ
ಅಷ್ಟತನುಮೂರ್ತಿಯೆಂಬ ಮಾತಿನ ಪಾತಕವ ಕೇಳಲಾಗದು. ಪೃಥ್ವಿಯಂತೆ ಕಠಿಣವುಳ್ಳಾತನೆ? ಅಪ್ಪುವಿನಂತೆ ಓಟ ಭರತವುಳ್ಳಾತನೆ? ತೇಜದಂತೆ ತೃಣಕಾಷ*ವಿಲ್ಲದಿರೆ ನಂದುವಾತನೆ? ವಾಯುವಿನಂತೆ ಚಲನೆವುಳ್ಳಾತನೆ? ಆಕಾಶದಂತೆ ಬಯಲಾದಾತನೆ? ಸೋಮಸೂರ್ಯರಂತೆ ದಿವಾರಾತ್ರಿಯ ನಡೆಸುವಾತನೆ? ಜೀವಾತ್ಮನಂತೆ ಜನನ ಮರಣವುಳ್ಳಾತನೆ? ಇದು ಕಾರಣ ಕೂಡಲಚೆನ್ನಸಂಗಯ್ಯಾ ನೀ ನಿನ್ನಂತೆ ಇವರೆಲ್ಲರೂ (ಇವೆಲ್ಲವೂ) ನೀನಿರಿಸಿದಂತೆ.
--------------
ಚನ್ನಬಸವಣ್ಣ
ನಾನಾ ಸ್ಥಲಂಗಳ ಮಾತಿನ ಮಾಲೆಯಲ್ಲಿ, ನಿತ್ಯ ಅನಿತ್ಯವೆಂಬ ಮಾತ ಬಣ್ಣಿಸಿ ನುಡಿವಲ್ಲಿ, ಅದೇತರ ಸ್ಥಲ ? ಕಾಮದಲ್ಲಿ ಕಂದಿ, ಕ್ರೋಧದಲ್ಲಿ ಬೆಂದು, ನಾನಾ ಲೋಭ ಮೋಹಂಗಳಲ್ಲಿ ಸಲೆಸಂದು ಸಾವುತ್ತ, ಭಾವದ ಭ್ರಮೆಯಡಗದೆ, ಜೀವವಿಕಾರ ಹಿಂಗದೆ, ಕೂರಲಗಿನ ಒಪ್ಪದಂತೆ, ಕಣ್ಣಿಗೆ ನೋಟ, ಘಟ ಅಸುವಿಂಗೆ ಓಟ. ಆ ಅಸಿಯ ಘಾತಕತನದಂತೆ, ಇವರ ಭಾವಕ್ಕೆ ಭಕ್ತರೆನಲಾರೆ, ಜ್ಞಾನಕ್ಕೆ ಗುರುವೆನಲಾರೆ, ಸದ್ಭಾವಕ್ಕೆ ಜಂಗಮವೆನಲಾರೆ. ಎಂದಡೆ ಎನಗದು ಬಂಧನವಲ್ಲ, ಅದು ಕಾಯ ಜೀವದ ಭೇದ. ಅದು ಸ್ಥಾಣು ರಜ್ಜು, ಎಣ್ಣೆ ಉರಿಯೋಗದ ಕೂಟ. ಆ ಗುಣ ಒಂದೂ ತೋರದೆ, ಬೆಳಗೆಂಬ ನಾಮವಡಗಿತ್ತು. ಇಂತೀ ಉಭಯ ಭಿನ್ನವಾದಲ್ಲಿ, ಎನ್ನ ಮರವೆ ನಿನ್ನ ಕೇಡು, ನಿನ್ನ ಮಲ ಎನ್ನ ಕೇಡು. ಅದು ದೃಕ್ಕು ಬೊಂಬೆಯಂತೆ, ನಿಶ್ಚಯವಾದಲ್ಲಿ ನೀನೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
-->