ಅಥವಾ

ಒಟ್ಟು 11 ಕಡೆಗಳಲ್ಲಿ , 3 ವಚನಕಾರರು , 5 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂಜದಿರಂಜದಿರು ಹಂದೆ, ಓಡದಿರು ಓಡದಿರು ಹೇಡಿ, ಆಳಿನಾಳು ಕೀಳಾಳು ಬಹರೆ ಹೋಗದಿರು, ಹೋಗದಿರು, ಕೂಡಲಸಂಗಮದೇವಾ.
--------------
ಬಸವಣ್ಣ
ಕಟ್ಟಿದೆನೊರೆಯ, ಬಿಟ್ಟೆ ಜನ್ನಿಗೆಯರ, ಮುಟ್ಟಿ ಬಂದಿರಿದಡೆ ಓಸರಿಸುವನಲ್ಲ. ಓಡದಿರು ಓಡದಿರು, ನಿಮ್ಮ ಶರಣರ ಮನೆಯ ಬಿರಿದಿನ ಅಂಕಕಾರ. ಓಡದಿರು, ಓಡದಿರು, ಎಲೆ ಎಲೆ ದೇವಾ, ಎಲೆ ಎಲೆ ಸ್ವಾಮಿ, ಎಲೆ ಎಲೆ ಹಂದೆ ಕೂಡಲಸಂಗಮದೇವಾ.
--------------
ಬಸವಣ್ಣ
ಓಡದಿರು, ಓಡದಿರು ನಿನ್ನ ಬೇಡುವಾತ ನಾನಲ್ಲ ಶಿವನೆ, ನೋಡುವೆನು ಕಣ್ಣ ತುಂಬ, ಆಡಿ ಪಾಡಿ ನಲಿದಾಡುವೆ. ಬೇಡೆನ್ನ ಕೂಡೆ ಮಾತಾಡಲಾಗದೆ, ಎಲೆ ಶಿವನೆ. ಕೂಡಲಸಂಗಮದೇವಾ, ನೀನಾಡಿಸುವ ಬೊಂಬೆ ನಾನು.
--------------
ಬಸವಣ್ಣ
ಮಾಚಿತಂದೆಯ ಕೈಯಲಾಗದು. ಹೋಚಿತಂದೆಯ ಕೈಯಲಾಗದು. ಇಚ್ಫೆಗೆಟ್ಟಂತೆ ಇರಲಾಗದು. ಅಚ್ಚೊತ್ತಿದಂತೆ ಇರಬೇಕು ಅತಿ ಚೋದ್ಯವಾಗಿ. ಎಚ್ಚರಿಕೆಯ ಮುಚ್ಚುಮರಹಿಲ್ಲದೆ ಬೆಚ್ಚಂತಿರಬೇಕು. ಮಚ್ಚು ಪಲ್ಲಟವಾಗದೆ ಅಚ್ಚರಿಯ ಭಕ್ತಿಭರಿತನಾಗಿರಬೇಕು. ಕಲಿ ಕರುಳನೊತ್ತಿ ಮುಂದಕ್ಕೆ ನಡೆವನಲ್ಲದೆ, ಎಡೆಗೋಲನಾಸೆ ಮಾಡುವನೆ ಹೇಳಾ ? ಕಲಿದೇವರದೇವನ ಅಂಕೆಗೆ ಝಂಕೆಗೆ, ಬೆಚ್ಚಿ ಬೆದರಿ ಓಡದಿರು. ವೀರಕಂಕಣವ ಕಟ್ಟಾ, ಸಂಗನಬಸವಣ್ಣ.
--------------
ಮಡಿವಾಳ ಮಾಚಿದೇವ
ಬೇಡುವೆನೆ ದೇವೇಂದ್ರನ ಪದವಿಯನಿನ್ನು ? ಮೂಡುವ ಸೂರ್ಯನ ಪ್ರಭೆಯಂತೆ ಓಡದಿರು. ಓಡದಿರು ಎನ್ನ ಮುಂದೆ ಮಾಣಿಕ್ಯದ ಬೆಳಗಿನಂತೆ. ನೋಡು, ಮಾತಾಡು. ಕೃತಕದ ಪರಿಯ (ಪದವಿಯ?) ಬೇಡುವ, ಲಿಂಗವೆನ್ನಲಿದ್ದುದೆ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
-->