ಅಥವಾ

ಒಟ್ಟು 3 ಕಡೆಗಳಲ್ಲಿ , 2 ವಚನಕಾರರು , 3 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುಸ್ಥಲದ ಗಂಭೀರವಸ್ತುವ ಕೂಡಬಲ್ಲಡೆ ಗುರುಸ್ಥಲದವರೆಂಬೆನು. ಚರಸ್ಥಲದ ಚಿನ್ಮಯಶಿವನ ಕೂಡಬಲ್ಲಡೆ ಚರಸ್ಥಲದವರೆಂಬೆನು. ಪರಸ್ಥಲದ ಪರಾತ್ಪರ ಪರಬ್ರಹ್ಮವ ಕೂಡಬಲ್ಲಡೆ ಪರಸ್ಥಲದವರೆಂಬೆನು. ಇಂತೀ ಭೇದವನರಿಯದೆ ಹರನ ವೇಷವ ಧರಿಸಿ ನರನ ಓಲೈಸುವ ಬರಿ ಮೂರ್ಖರನೇನೆಂಬೆನಯ್ಯಾ ಅಖಂಡೇಶ್ವರಾ ?
--------------
ಷಣ್ಮುಖಸ್ವಾಮಿ
ಕಲ್ಯಾಣವೆಂಬ ಪಟ್ಟಣದೊಳಗೆ ಛತ್ತೀಸಪುರದ ಮಹಾಗಣಂಗಳು. ಒಂದು ಪುರದವರು ಅಗ್ಘಣಿಯ ತಹರು. ಎರಡು ಪುರುದವರು ಸಮ್ಮಾರ್ಜನೆ ರಂಗವಾಲಿಯ ಮಾಡುವರು. ಮೂರು ಪುರದವರು ಲಿಂಗಾರ್ಚನೆಗೆ ನೀಡುವರು. ನಾಲ್ಕು ಪುರದವರು ಲಿಂಗಕ್ಕೆ ಬೋನವ ಮಾಡುವರು. ಐದು ಪುರದವರು ಅರ್ಪಿತಕ್ಕೆ ನೀಡುವರು. ಆರು ಪುರದವರು ಪ್ರಸಾದದಲ್ಲಿ ತದ್ಗತರಾಗಿಹರು. ಏಳು ಪುರದವರು ಧ್ಯಾನಾರೂಢರಾಗಿಹರು. ಮುಂದಣ ಪುರದವರು ನಿಶ್ಚಿಂತನಿವಾಸಿಗಳಾಗಿಹರು. ಈ ಪುರದ ಗಣಂಗಳು ಓಲೈಸುವ ಬಸವನ ಮಹಾಮನೆಯ ಮಡಿವಾಳ ನಾನು ಕಾಣಾ, ಕಲಿದೇವರದೇವಾ.
--------------
ಮಡಿವಾಳ ಮಾಚಿದೇವ
ನಂದಿವಾಹನನಾಗಿ, ಚಂದ್ರಸೂರ್ಯಾಗ್ನಿ ನೇತ್ರದ ಅಂದ ಉಳ್ಳಾತನಾಗಿ, ಸಂದಣಿಯಾಗಿ ನೆರೆದ ಪ್ರಮಥಗಣವೃಂದ ಉಳ್ಳಾತನಾಗಿ, ನಿಂದು ಓಲೈಸುವ ದೇವಸಭೆಯ ಮುಂದೆ ಉಳ್ಳಾತನಾಗಿ, ದುಂದುಭಿಯ ನಾದ ಮೊಳಗುತ್ತ ಕೋಟಿಕಂದರ್ಪನ ಸೌಂದರ್ಯವನೊಳಕೊಂಡು ಬಂದಿರಯ್ಯ ಎನ್ನ ಕರಸ್ಥಲಕ್ಕೆ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
-->