ಅಥವಾ

ಒಟ್ಟು 8 ಕಡೆಗಳಲ್ಲಿ , 3 ವಚನಕಾರರು , 5 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತನುವಬೇಡಿದಡೆ ತನುವಕೊಟ್ಟು ಶುದ್ಧವಪ್ಪೆ. ಮನವ ಬೇಡಿದಡೆ ಮನವಕೊಟ್ಟು ಶುದ್ಧವಪ್ಪೆ. ಧನವ ಬೇಡಿದಡೆ ಧನವ ಕೊಟ್ಟು ಶುದ್ಧವಪ್ಪೆ. ನೀನಾವುದ ಬೇಡಿದಡೂ ಓಸರಿಸಿದಡೆ, ಕೈವಾರಿಸಿದಡೆ ಹಿಡಿದು ಮೂಗ ಕೊಯಿ. ಎನ್ನ ಕಲಿತನದ ಬಿನ್ನಪವ ಕಡೆತನಕ ನಡೆಸದಿರ್ದಡೆ ತಲೆದಂಡ ಕಾಣಾ ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ಧನ ಹೋಯಿತ್ತೆಂದಡೆ, ಮನಸು ಬೆದರಿದಡೆ, ಚಿತ್ತ ಹೆದರಿದಡೆ, ತನು ತೆರಳಿದಡೆ, ಭಾವ ಓಸರಿಸಿದಡೆ, ಆಣೆ, ನಿಮ್ಮಾಣೆ, ನಿಮ್ಮ ಪ್ರಮಥರಾಣೆ. ತನುಮನಧನವನಲ್ಲಾಡಿಸಿ ನೋಡುವ ಒಡೆಯನು ನೀನೆ, ಹರಣದ ಮೇಲೆತ್ತಡೆ ಕಳವಳವೆ, ಕೂಡಲಸಂಗಮದೇವಾ
--------------
ಬಸವಣ್ಣ
ಪ್ರಾಣಲಿಂಗ ಓಸರಿಸಿತ್ತು ಓಸರಿಸಿತ್ತು ಎಂಬಿರಯ್ಯಾ ಪ್ರಾಣಲಿಂಗ ಓಸರಿಸಿದಡೆ ಕಾಯವೇಕೆ ಬೀಳದು ಹೇಳಿರೆ ? ಪ್ರಾಣಲಿಂಗ ಓಸರಿಸಬಲ್ಲುದೆ ಸರ್ವಭುವನದೊಡೆಯನು ? ಈ ಪ್ರಾಣಲಿಂಗ ಓಸರಿಸಿದುದೆಂದು ಸಮಾಧಿಯ ಹೊಗುವ[ರ] ಮುಸುಡ ನೋಡಲಾಗದು ಕಾಣಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ನೀನಿಕ್ಕಿದ ಬೀಯದಲ್ಲಿ ವಂಚನೆಯುಳ್ಳಡೆ ಸಂಗಾ, ನಿಮ್ಮ ತೊತ್ತುತನಕ್ಕೆ ದೂರವಯ್ಯಾ. ಕದ್ದು ತಿಂದಡೆ ಕೈಹಿಡಿದೊಮ್ಮೆ ಬಡಿದು ತುಡುಗುಣಿತನವ ಬಿಡಿಸಯ್ಯಾ. ಜಂಗಮ ಮನೆಗೆ ಬಂದಲ್ಲಿ ಓಸರಿಸಿದಡೆ ಹಿಡಿದು ಮೂಗ ಕೊಯ್ಯಯ್ಯಾ ಕೂಡಲಸಂಗಮದೇವಾ. 434
--------------
ಬಸವಣ್ಣ
ಎಂತು ಜೀವಿಸಬಹುದು, ಗುರುಪ್ರಾಣಿಗೆ ಗುರು ಓಸರಿಸಿದಡೆ ? ಎಂತು ಜೀವಿಸಬಹುದು, ಲಿಂಗಪ್ರಾಣಿಗೆ ಲಿಂಗ ಓಸರಿಸಿದಡೆ ? ಎಂತು ಜೀವಿಸಬಹುದು, ಜಂಗಮಪ್ರಾಣಿಗೆ ಜಂಗಮ ಓಸರಿಸಿದಡೆ ? ಎಂತು ಜೀವಿಸಬಹುದು, ಪ್ರಸಾದಪ್ರಾಣಿಗೆ ಕೂಡಲಚೆನ್ನಸಂಗಯ್ಯಾ ಪ್ರಸಾದ ಓಸರಿಸಿದಡೆ ?
--------------
ಚನ್ನಬಸವಣ್ಣ
-->