ಅಥವಾ

ಒಟ್ಟು 2 ಕಡೆಗಳಲ್ಲಿ , 2 ವಚನಕಾರರು , 2 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂಗ ಮನ ಪ್ರಾಣಂಗಳೆಂಬಲ್ಲಿ ಘನಲಿಂಗವಿಪ್ಪೆಡೆ ಯಾವುದು ? ಪಂಕಕ್ಕೆ ಜಲ ಒಳಗೋ, ಹೊರಗೋ ? ಅಂಗಕ್ಕೂ ಮನಸ್ಸಿಂಗೂ ಆತ್ಮಂಗೂ ಲಿಂಗವ ಹಿಂಗಿ ಅರಿವ ಠಾವಿನ್ನಾವುದು ? ಬೀಜದೊಳಗಾದ ವೃಕ್ಷ, ವೃಕ್ಷದೊಳಗಾದ ಬೀಜ ಈ ಉಭಯವ ಮೀರಿ ಬೆಳೆವ ಠಾವಿನ್ನಾವುದೊ ? ಮೊನೆಗೂಡಿಯೆ ಗ್ರಹಿಸುವ ಅಲಗಿನ ತೆರದಂತೆ ಅದು ಲಿಂಗಾಂಗಸಂಯೋಗಸಂಬಂಧ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.
--------------
ಪ್ರಸಾದಿ ಭೋಗಣ್ಣ
ವಾಯು ಹಸಿದು ಆಪೋಶನವ ಮಾಡುವಲ್ಲಿ ಬಡಿಸುವ ತೆರಪಿನ್ನಾವುದು ? ಆಕಾಶ ಉರಿಗಂಜಿದಡೆ, ಸೇರುವ ನೆಳಲಿನ್ನಾವುದು ? ಭೂಮಿ ಭಯಕಂಜಿ ಓಡಿದಡೆ, ಸೇರುವ ಠಾವಿನ್ನಾವುದು ? ಇಂತಿವೆಲ್ಲವು ಪರಿಪೂರ್ಣ ತನ್ನಲ್ಲಿಯೆ ತೋರಿದುದು, ತನ್ನಲ್ಲಿಯೆ ಲಯವಲ್ಲದೆ ಬೇರೆ ಭಿನ್ನಭಾವವಿಲ್ಲ. ಈ ತೆರ ಶರಣನಿರವು. ಆತನೇತರಲ್ಲಿದ್ದರೂ ಅಜಾತಮಯನೆಂದೆ. ಗೂಡಿನ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ, ತೋರಿಯೂ ತೋರದ ನಿಲವು.
--------------
ಮನುಮುನಿ ಗುಮ್ಮಟದೇವ
-->