ಅಥವಾ

ಒಟ್ಟು 4 ಕಡೆಗಳಲ್ಲಿ , 3 ವಚನಕಾರರು , 3 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಲೋಕದ ಡೊಂಕ ನೀವು ತಿದ್ದುವಿರಯ್ಯ ನಿಮ್ಮ (ತನುಮನದ) ಡೊಂಕ ತಿದ್ದಿ ತೀಡಿಕೊಳಲರಿಯದೆ. ಪುರಾತನರು, ನುಡಿದಂತೆ ನಡೆಯದವರೆಲ್ಲ, ಕಡು ಓದಿದ ಗಿಳಿ ತನ್ನ ಮಲವ ತಾ ತಿಂದಂತೆ. ನೆರೆಮನೆಯವರ ದುಃಖವ ಕೇಳಿ, ಗಡ್ಡ ಮೀಸೆ ಮುಂಡೆಯ ಬೋಳಿಸಿಕೊಂಡು (ಕಡೆಯಲ್ಲಿ) ಹೋಗಿ ಅಳುತಿಪ್ಪವರ ಕಂಡರೆ ಕೂಡಲಚೆನ್ನಸಂಗನ ಶರಣರು ನಗುತಿಪ್ಪರಯ್ಯಾ.
--------------
ಚನ್ನಬಸವಣ್ಣ
ಗರುಡನ ಗರಿಯ ಮುರಿದು, ಉರಗನ ಸಪ್ತ ಡೊಂಕ ತಿದ್ದಿ, ಅಷ್ಟಪ್ರಕೃತಿ ಗುಣವ ನಷ್ಟವ ಮಾಡಿ, ಕುಂಡಲಿಯನಂಡಲೆದು, ಬಲಿದೆತ್ತಿ ಮದ್ಯಮಾರ್ಗದಲ್ಲಿ ನಡೆಸಿ, ಊಧ್ರ್ವಸ್ಥಾನದಲ್ಲಿ ನಿಲಿಸಿದಡೆ, ಒಂದು ಮಾತು ಕೇಳಬಹುದು. ಆ ಮಾತಿನ ಬೆಂಬಳಿಯಲ್ಲಿ; ಜ್ಯೋತಿರ್ಲಿಂಗವ ಕಂಡು ಕೂಡಿದರು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣರು.
--------------
ಸ್ವತಂತ್ರ ಸಿದ್ಧಲಿಂಗ
ಲೋಕದ ಡೊಂಕ ನೀವೇಕೆ ತಿದ್ದುವಿರಿ ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ; ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ. ನೆರೆಮನೆಯ ದಃಖಕ್ಕೆ ಅಳುವವರ ಮೆಚ್ಚ ಕೂಡಲಸಂಗಮದೇವ. 124
--------------
ಬಸವಣ್ಣ
-->