ಅಥವಾ

ಒಟ್ಟು 2 ಕಡೆಗಳಲ್ಲಿ , 1 ವಚನಕಾರರು , 1 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರಣಂಗಳೆಂಬ ಕತ್ತಲೆಗವಿದು ಕಾಮುಕಾತುರದಿಂ ವಿಷಯಾಂಬುಧಿಯೊಳಗೆ ಮುಳುಗಿ ಯತೀಶ್ವರನು ಯತೀಶ್ವರನು ಎಂದು ಹಿತಗೆಟ್ಟು ನುಡಿದುಕೊಂಡು ನಡೆವ ಮತಿಹೀನ ಮಾನವರನೇನೆಂಬೆ ಶಿವನೇ? ಈಶ್ವರ ಶರಣಂಗೆ ವಿಕಾರ ಹೊದ್ದಿದಡೆ ಮೀಸಲ, ನಾಯಿ ಮುಟ್ಟಿದಂತಾಯಿತ್ತು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
-->