ಅಂಗವು ಲಿಂಗದಲ್ಲಿ ಸಂಬಂಧವಾದವರ ಲಿಂಗವೆಂದೇ ಕಾಂಬುದು,
`ಕೀಟೋ[s]ಪಿ ಭ್ರಮರಾಯತೇ ಎಂಬ ನ್ಯಾಯದಂತೆ.
ಅಂಗವು ಲಿಂಗ ಸೋಂಕಿ ಲಿಂಗವಾಯಿತ್ತಾಗಿ
ಲಿಂಗವೆಂದೇ ಕಾಂಬುದು
ಅಂಗೇಂದ್ರಿಯಂಗಳೆಂಬುವಿಲ್ಲ, ಅವೆಲ್ಲವೂ ಲಿಂಗೇಂದ್ರಿಯಂಗಳಾದ ಕಾರಣ,
ಲಿಂಗವೆಂದೇ ಕಾಂಬುದು.
ಸರ್ಪದಷ್ಟಸ್ಯ ಯದ್ದೇಹಂ ತದ್ದೇಹಂ ವಿಷದೇಹವತ್
ಲಿಂಗದಷ್ಟಸ್ಯ ಯದ್ದೇಹಂ ತದ್ದೇಹಂ ಲಿಂಗದೇಹವತ್ ಎಂದುದಾಗಿ
ಸರ್ವಾಂಗಲಿಂಗಿ ಕೂಡಲಚೆನ್ನಸಂಗಾ ನಿಮ್ಮ ಶರಣ !