ಅಥವಾ

ಒಟ್ಟು 8 ಕಡೆಗಳಲ್ಲಿ , 2 ವಚನಕಾರರು , 2 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

`ಯದ್ಭಾವಂ ತದ್ಭವತಿ' ಎಂಬರಲ್ಲದೆ ತದ್ಭಾವದ ಸದ್ಗತಿಯನೆತ್ತಬಲ್ಲರಯ್ಯ? ಬುದ್ಭುದಾಕಾರ ಭೂಮಿಯೊಳು ಹುಟ್ಟುಹೊಂದುಯಿಲ್ಲವೆ ? ಅದ್ವೈತ ಪರಬ್ರಹ್ಮವನಾಡುವರಿಗೆ ಆತ್ಮನ ತಿಳುಹುಂಟೆ ? ಯದ್ಭಾವ ಏಕೋದೇವ ಏಕಮನ ಏಕಚಿತ್ತವಾದರೆ ಸಿದ್ಧಿಯಪ್ಪುದು ತಪ್ಪದು ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.
--------------
ವೀರಸಂಗಯ್ಯ
ಯದ್ಭಾವಂ ತದ್ಭವತಿಯೆಂಬ ಭಾವವುಂಟಾಗಿ ಗುರುವಾಯಿತ್ತು, ಯದ್ಭಾವಂ ತದ್ಭವತಿಯೆಂಬ ಭಾವವುಂಟಾಗಿ ಶಿಷ್ಯನಾದ. ಯದ್ಭಾವಂ ತದ್ಭವತಿಯೆಂಬ ಭಾವವುಂಟಾಗಿ ಲಿಂಗವಾಯಿತ್ತು, ಯದ್ಭಾವಂ ತದ್ಭವತಿಯೆಂಬ ಭಾವವುಂಟಾಗಿ ಭಕ್ತನಾದ. ಯದ್ಭಾವಂ ತದ್ಭವತಿಯೆಂಬ ಭಾವವುಂಟಾಗಿ ಪ್ರಸಾದವಾಯಿತ್ತು, ಯದ್ಭಾವಂ ತದ್ಭವತಿಯೆಂಬ ಭಾವವುಂಟಾಗಿ ಪ್ರಸಾದಿಯಾದ. ಯದ್ಭಾವಂ ತದ್ಭವತಿಯೆಂಬ ಭಾವವುಂಟಾಗಿ ಕೂಡಲಚೆನ್ನಸಂಗ ತಾನಾದ.
--------------
ಚನ್ನಬಸವಣ್ಣ
-->