ಅಥವಾ

ಒಟ್ಟು 5 ಕಡೆಗಳಲ್ಲಿ , 5 ವಚನಕಾರರು , 5 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೆಲವಿಲ್ಲದ ಭೂಮಿಯ ಮಣ್ಣನ್ನು ತಂದು, ಲದ್ದಿ ಉಸುಕವ ಬೆರೆಸದೆ ಮಡಿಕೆಯ ಮಾಡಿ, ಸುಡದೆ ಮಾರಿ ಹಣವಕೊಂಡು ಯಾರಿಗೂ ಕೊಡದೆ ಉಂಡು ಸುಖದಿಂದ ಕಾಯಕವ ಮಾಡುತಿರ್ಪರು ನೋಡೆಂದ ಶ್ರೀಗುರು. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಭ್ರಮಣವಿಡಿದ ಭ್ರಮಿತರು ಕಮಳದ ಎಸಳ ಅಕ್ಷರದ ವರ್ಣವ ಕಂಡೆಹೆನೆಂಬರಯ್ಯಾ. ಕಾಬ ಕಾಣಿಕೆ ಯಾರಿಗೂ ಸಾಧ್ಯವಲ್ಲ, ಕಂಡ ಕಂಡ ನಮ್ಮ ಕಪಿಲಸಿದ್ಧಮಲ್ಲಿನಾಥನಲ್ಲಿ ಚೆನ್ನಬಸವಣ್ಣ.
--------------
ಸಿದ್ಧರಾಮೇಶ್ವರ
ಪಟ್ಟಣ ಪಾಳೆಯದೊಳಗೆ ವ್ಯವಹರಿಸುತ್ತಿಪ್ಪ ಸೆಟ್ಟಿಕಾರಿತಿಗೆ ಒಬ್ಬ ಹುಟ್ಟುಗರುಡ ಗಂಡನಾಗಿಪ್ಪನು ನೋಡಾ. ಪಟ್ಟಣ ಬೆಂದು, ಪಾಳಯವಳಿದು, ಸೆಟ್ಟಕಾತಿಯ ಮನವಾರ್ತೆ ಕೆಟ್ಟು, ಹುಟ್ಟುಗುರುಡಂಗೆ ಕಣ್ಣು ಬಂದಲ್ಲದೆ ಮುಂದಣ ಬಟ್ಟೆ ಯಾರಿಗೂ ಕಾಣಬಾರದು ನೋಡಾ. ಸೂಕ್ಷ ್ಮ ಶಿವಪಥದ ಹಾದಿ ಎಲ್ಲರಿಗೆ ಸಾಧ್ಯವೇ? ಸಾಧ್ಯವಲ್ಲ ಕಾಣಾ ಶಿವಜ್ಞಾನ ಸಂಪನ್ನಂಗಲ್ಲದೆ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಕರ್ಮಕಾಂಡಿ[ಗಳಿ]ಗೆ ಕತ್ತಲೆಕರ್ಮಿಗಳೆಂದು ನುಡಿವರು ನೋಡಾ. ಅವರು ಮಾಯಾಮೋಹಕ್ಕೆ ಸಿಲ್ಕಿ ಕೆಟ್ಟರು ಕಾಣಾ ಎಂದು ನುಡಿವರು ಕೇಳಾ. ಸಗುಣಸ್ಥಲದ ಮನೋಜ್ಞಾನಿಗಳವರು ಕೆಟ್ಟಂತೆ ನಾವು ಕೆಡಬಾರದು. ತಮ್ಮ ಮನಕ್ಕೆ ಬುದ್ಧಿಯಂ ಕೊಟ್ಟು ಆಸೆಯಂ ಬಿಟ್ಟು ತನುವೆಂಬ ಬಿಲ್ಲಿಗೆ ಮನವೆಂಬ [ಹೆದೆ]ಯನೇರಿಸಿ, ಉರಿನರಿಯಂಬ ಅಳವಡಿಸಿ ವಾರಿ ಮೋರೆಯನೆ ತಿದ್ದಿಕೊಂಡು ಗುರುಕೊಟ್ಟ ಬಿಲ್ಲ ದೃಢವಾಗಿ ಹಿಡಿದು ಶ್ರೀಗಿರಿಯೆಂಬ ಗುರಿಯ ನೋಡಿ ಎಸೆವಾಗ, ಭವ ಹರಿಯಿತ್ತು, ಕಾಲಕರ್ಮವೆಂಬ ಶಿರ ಹರಿಯಿತ್ತು. ಅರಸು ಪ್ರಧಾನಿ ಪ್ರಜೆ ಪರಿವಾರ ಓಡಿ ಹೋಯಿತ್ತು. ಪೃಥ್ವಿ ಅಪ್ಪು ತೇಜ ವಾಯು ಆಕಾಶ ಅಂದೇ ಬೆಳಗಾಯಿತ್ತು. ಇಂತಪ್ಪ ಪ್ರಸಾದ ಆ ಗುರು ಲಿಂಗ ಜಂಗಮ ತಮ್ಮೊಳಗಾಯಿತ್ತು. ಇಂತಪ್ಪ ಪ್ರಸಾದವು ಯಾರಿಗೂ ಅಳವಡದು. ಪ್ರಭುವಿನೊಳ್ ಐಕ್ಯವಾದ ಬಸವಸಂಪತ್ತಿಗಲ್ಲದೆ ಮಿಕ್ಕ ಪ್ರಪಂಚಿಗಳಿಗೆ ಅಳವಡದೆಂದು ಹೇಳುವ ಸಗುಣದ ಭ್ರಮಿತರು ಅವರು ಕೆಟ್ಟ ಕೇಡಿಂಗೆ ಕಡೆಯಿಲ್ಲ ಮೊದಲಿಲ್ಲ ನೋಡಾ. ಮುಂದೆ ಇಷ್ಟವ ಕಂಡು ಮುಳುಗಿದವರಿಗೆ ಮುಕ್ತಿ ಎಂದೆಂದಿಗೂ ಇಲ್ಲ ಕಾಣಾ. ಇನ್ನು ಕೈವಲ್ಯಾನ್ವಯ ಪ್ರವರ್ತಕ ನಿಸ್ಸೀಮಾಂಬುಧಿ ನಿರ್ಲೇಪ ತಾನಾದಂಥ ದೇವ ವರನಾಗನ ಗುರುವೀರನೆ ಪರಂಜ್ಯೋತಿ ಮಹಾವಿರಕ್ತಿ.
--------------
ಪರಂಜ್ಯೋತಿ
ಮಹಾಕರ್ತನು ತನ್ನ ಶಕ್ತಿಯ ವಿನೋದಕ್ಕೀ ಜಗವ ನಿರ್ಮಿಸಿದ ಅನಂತ ಲೋಕಂಗಳನು. ಚಂದ್ರಸೂರ್ಯ ನಕ್ಷತ್ರ ಸಿಡಿಲು ಮಿಂಚುಗಳನು. ತತ್ತ್ವ ವಿತತ್ತ್ವ ಕಾಲ ಕರ್ಮ ಪ್ರಳಯಂಗಳನು. ಹೆಣ್ಣು ಗಂಡು ಜಾತಿ ವಿಜಾತಿಗಳಾದ ನರಸುರ ತಿರ್ಯಗ್ಜಾತಿ ಸ್ಥಲ ಭೋಗಾಯುಷ್ಯ ನಿದ್ರೆ ಮೊದಲಾದ ಸಮಸ್ತ ಪ್ರಪಂಚುಗಳನು. ಎಂಬತ್ತುನಾಲ್ಕು ಲಕ್ಷ ಜೀವರಾಶಿಗಳನು, ಹುಟ್ಟಿಸಿದ ತನ್ನ ವಿನೋದಕ್ಕೆ, ಮಂತ್ರವಾಹಕನು ಮಾಡಿದ ಕಟ್ಟಳೆ, ಯಾರಿಗೂ ತಿಳಿಯಬಾರದು ನೋಡಾ, ಸರ್ವಾತ್ಮರು ಮಲಪಾಶದಿಂದ ಬಂಧಿಸಿಕೊಂಬ ಪಶುಗಳಾದರು, ತಾ ಪಶುಪತಿಯಾದ, ನಮ್ಮ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
-->