ಅಥವಾ

ಒಟ್ಟು 6 ಕಡೆಗಳಲ್ಲಿ , 4 ವಚನಕಾರರು , 5 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಓಂಕಾರವೇ ಶಿವ, ಯಕಾರವೇ ಸದಾಶಿವ, ವಾಕಾರವೇ ಈಶ್ವರ, ಶಿಕಾರವೇ ಮಹೇಶ್ವರ, ಮಃಕಾರವೇ ಈಶ್ವರ, ನಕಾರವೇ ಈಶಾನ. ಈ ಷಡಕ್ಷರವೆ ಷಡ್ವಿಧಮಂತ್ರಮೂರ್ತಿಯಾಗಿ ಒಪ್ಪುತಿಪ್ಪುದಯ್ಯ, ಮತ್ತೆ-ನಕಾರವೇ ಮೂರ್ತಿಬ್ರಹ್ಮ, ಮಃಕಾರವೇ ಪಿಂಡಬ್ರಹ್ಮ, ಶಿಕಾರವೇ ಕಲಾಬ್ರಹ್ಮ, ವಾಕಾರವೇ ಆನಂದಬ್ರಹ್ಮ, ಯಕಾರವೇ ವಿಜ್ಞಾನಬ್ರಹ್ಮ, ಓಂಕಾರವೇ ಪರಬ್ರಹ್ಮ, ಈ ಷಡಕ್ಷರವೆ ಷಡ್ವಿಧಬ್ರಹ್ಮವೆಂದು ಹೇಳಲ್ಪಟ್ಟಿತ್ತು ನೋಡಾ. ಮತ್ತೆ-ನಕಾರವೇ ಕ್ರಿಯಾಶಕ್ತಿ:ಮಕಾರವೇ ಜ್ಞಾನಶಕ್ತಿ, ಶಿಕಾರವೇ ಇಚ್ಛಾಶಕ್ತಿ, ವಾಕಾರವೇ ಆದಿಶಕ್ತಿ, ಯಕಾರವೇ ಪರಶಕ್ತಿ, ಓಂಕಾರವೇ ಚಿಚ್ಛಕ್ತಿ, ಇಂತಿವು ಮಂತ್ರಶಕ್ತಿಸ್ವರೂಪೆಂದರಿವುದು ನೋಡಾ. ಮತ್ತೆ-ನಕಾರವೇ ಕರ್ಮಸಾದಾಖ್ಯ, ಮಃಕಾರವೇ ಕರ್ತೃಸಾದಾಖ್ಯ, ಶಿಕಾರವೇ ಮೂರ್ತಿಸಾದಾಖ್ಯ, ವಾಕಾರವೇ ಅಮೂರ್ತಿಸಾದಾಖ್ಯ; ಯಕಾರವೇ ಶಿವಸಾದಾಖ್ಯ, ಓಂಕಾರವೇ ಮಹಾಸಾದಾಖ್ಯ ನೋಡ. ಮತ್ತೆ-ನಕಾರವೇ ಪೀತವರ್ಣ, ಮಃಕಾರವೇ ನೀಲವರ್ಣ, ಶಿಕಾರವೇ ಕುಂಕುಮವರ್ಣ, ವಾಕಾರವೇ ಶ್ವೇತವರ್ಣ, ಯಕಾರವೇ ಸ್ಫಟಿಕವರ್ಣ, ಓಂಕಾರವೇ ಜ್ಯೋತಿರ್ಮಯಸ್ವರೂಪು ನೋಡಾ. ಇಂತಿವು ಮಂತ್ರಮೂರ್ತಿಯ ವರ್ಣಭೇದವೆಂದರಿವುದಯ್ಯ. ಮತ್ತೆ-ನಕಾರವೇ ಸದ್ಯೋಜಾತಮಂತ್ರಮೂರ್ತಿ. ಮಃಕಾರವೇ ವಾಮದೇವಮಂತ್ರಮೂರ್ತಿ. ಶಿಕಾರವೇ ಅಘೋರಮಂತ್ರಮೂರ್ತಿ. ವಾಕಾರವೇ ತತ್ಪುರುಷಮಂತ್ರಮೂರ್ತಿ. ಯಕಾರವೇ ಈಶಾನ್ಯಮಂತ್ರಮೂರ್ತಿ. ಓಂಕಾರವೇ ಮಹಾಮಂತ್ರಮೂರ್ತಿ. ಇಂತಿವು ಮಂತ್ರಮೂರ್ತಿಯ ವದನಭೇದವೆಂದರಿವುದು ನೋಡಾ. ಮತ್ತೆ-ನಕಾರವೇ ಸತ್ತು, ಮಃಕಾರವೇ ಚಿತ್ತು, ಶಿಕಾರವೇ ಆನಂದ ವಾಕಾರವೇ ನಿತ್ಯ, ಯಕಾರವೇ ಪರಿಪೂರ್ಣ, ಓಂಕಾರವೇ ನಿರಂಜನಸ್ವರೂಪವೆಂದರಿವುದಯ್ಯ. ಮತ್ತೆ-ನಕಾರವೇ ಆಚಾರಲಿಂಗ, ಮಃಕಾರವೇ ಗುರುಲಿಂಗ, ಶಿಕಾರವೇ ಶಿವಲಿಂಗ, ವಾಕಾರವೇ ಜಂಗಮಲಿಂಗ, ಯಕಾರವೇ ಪ್ರಸಾದಲಿಂಗ, ಓಂಕಾರವೇ ಮಹಾಲಿಂಗ ಇಂತಿವು ಷಡಕ್ಷರ ಮಂತ್ರಲಿಂಗವೆಂದರಿವುದಯ್ಯ. ಇಂತಿವು ಲಿಂಗಷಡಕ್ಷರವೆಂದು ಹೇಳಲ್ಪಟ್ಟವು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಬಳಿಕ್ಕ, ಭೂತಾಂತಮನುದ್ಧರಿಸಿ ತ್ರಯೋದಶಾಂತ ಸ್ವರದೊಳದಂ ಬೆರಸಿ ಕಾರ್ಯಕಾರಣಮನೊಂದಿಸೆ ಹೌಂ ಎಂಬ ಮೊದಲ ಬೀಜವಾಯ್ತು. ಮತ್ತವಿೂ ಶವರ್ಗದ ಮೊದಲಕ್ಕರಮಾದ ಶಕಾರವ್ಯಂಜನದೊಳ್ತ್ರಿ ಕಲೆ- ಯೆನಿಪಿಕಾರಮಂ ಕೂಡೆ ಶಿ ಯೆನಿಸಲ್ ಸೋಮಸಂಜ್ಞ ಕುಬೇರವರ್ಗದ ಕಡೆಯ ವಕಾರಮಂ ದ್ವಿಕಲೆವೆಸರ ಆಕಾರದೊಡವೆರಸೆ ವಾಯೆಂದಾಯ್ತು. ಮತ್ತಂ, ಸೋಮವರ್ಗದಾದಿಯ ಯ್‍ಕಾರ ವ್ಯಂಜನಮನಾದಿ ಸ್ವರದೊಳ್ಕೂಡೆ ಯ ಎಂದೆನಿಸಿತ್ತು. ವರುಣವರ್ಗದ ಕಡೆಯ ನ್ ಎಂಬ ವ್ಯಂಜನಮನಾದಿ ಸ್ವರದೊಳ್ಕೂಡೆ ನ ಎಂದೆನಿಸಿತ್ತು. ವಾಯುವರ್ಗದ ಕಡೆಯ ಮ್ ಎಂಬ ವ್ಯಂಜನದೊಳ್ ಸ್ವರಾದಿಯಂ ಕೂಡೆ ಮ ಎಂದೆನಿಸಿತ್ತು. ಈ ಹೌಂ `ಸ ಶಿವಾಯ ನಮಃ' ಎಂಬೀ ಷಡಕ್ಷರವೆ ಅಬ್ಥಿವ್ಯದ್ಧಿಯೆಂಬ ಮಂತ್ರವೆಂದರಿಪಿದೆಯಯ್ಯಾ, ಪರಮಶಿವಲಿಂಗ ಪ್ರಮಥಾಂತರಂಗ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಚರಿಸಿ ವರ್ತಿಸುವುದೆ ಆಚಾರವಾದ ಕಾರಣ, ಇಡಾಪಿಂಗಳನಾಡಿಯಂ ರೇಚಕಪೂರಕಂಗಳು ಚರಿಸಿ ವರ್ತಿಸುವ ದೆಸೆಯಿಂ ನಾಸಿಕಕ್ಕೆ ಆಚಾರಲಿಂಗವಾಗಬೇಕಾಯಿತ್ತು. ಮಂತ್ರಮೂರ್ತಿಯೆ ಗುರುವಾದ ಕಾರಣ, ಷಡಕ್ಷರವೆ ಷಡುರುಚಿಯಾಗಿ ತೋರಿಹುದಾಗಿ ಅಂತಪ್ಪ ಷಡುರುಚಿ ಜಿಹ್ವೆಯ ಮುಖಕ್ಕೆ ಸಲುವ ದೆಸೆಯಿಂ ಜಿಹ್ವೆಗೆ ಗುರುಲಿಂಗವಾಗಬೇಕಾಯಿತ್ತು. ಸ್ವಯಂಪ್ರಕಾಶವೆ ಶಿವನಾದ ಕಾರಣ, ಆ ಮಹಾಪ್ರಕಾಶವೆ ನೇತ್ರಂಗಳೊಳು ನೆಲೆಗೊಂಡು, ಸಕಲಪದಾರ್ಥಂಗಳ ಕಾಣಿಸಿ ತೋರ್ಪ ದೆಸೆಯಿಂ ನೇತ್ರಕ್ಕೆ ಶಿವಲಿಂಗವಾಗಬೇಕಾಯಿತ್ತು. ಚರವೆ ಜಂಗಮವಾದ ಕಾರಣ, ತ್ವಕ್ಕು ಸರ್ವಾಂಗದಲ್ಲಿ ನೆಲೆಗೊಂಡು, ಅಲ್ಲಿಗಲ್ಲಿ ಪರುಶನವನರಿವುತ್ತಿಹ ದೆಸೆಯಿಂ ತ್ವಕ್ಕಿಂಗೆ ಜಂಗಮಲಿಂಗವಾಗಬೇಕಾಯಿತ್ತು. ನಾದಸುನಾದಮಹಾನಾದವೆ ಪ್ರಸಾದವಾದ ಕಾರಣ, ಪ್ರಸಾದವಪ್ಪ ಶಬ್ದಶ್ರೂೀತ್ರಮುಖಕ್ಕೆ ಸಲುವ ದೆಸೆಯಿಂ ಶ್ರೂೀತ್ರಕ್ಕೆ ಪ್ರಸಾದಲಿಂಗವಾಗಬೇಕಾಯಿತ್ತು. ಇಂತೀ ಪಂಚೇಂದ್ರಿಯಕ್ಕೆ ಪಂಚಲಿಂಗಂಗಳಾಗಬೇಕಾಯಿತ್ತು. ಆತ್ಮನು ನಿರವಯ ನಿರ್ಗುಣ ನಿಃಕಲ ನಿರ್ಭಿನ್ನ ನಿರುಪಮ್ಯನಾದ ದೆಸೆಯಿಂ ಗೋಪ್ಯವಾದ ಆತ್ಮಂಗೆ ಘನಕ್ಕೆ ಘನತೆಯುಳ್ಳ ಮಹಾಲಿಂಗವಾಗಬೇಕಾಯಿತ್ತು. ಇಂತೀ ಷಡುಸ್ಥಲಂಗಳಾದ ದೆಸೆಯಿಂದ ಸೌರಾಷ್ಟ್ರ ಸೋಮೇಶ್ವರನೊರ್ವ ಷಡುಲಿಂಗವಾಗಬೇಕಾಯಿತ್ತಯ್ಯಾ.
--------------
ಆದಯ್ಯ
ಗುದದಲ್ಲಿ ಆಧಾರಚಕ್ರ, ಪೃಥ್ವಿಯೆಂಬ ಮಹಾಭೂತ, ಚತುಃಷ್ಕೋಣ, ಚೌದಳಪದ್ಮ, ಅಲ್ಲಿಯ ಅಕ್ಷರ ವಶಷಸವೆಂಬ ನಾಲ್ಕು ಅಕ್ಷರ, ಅದರ ವರ್ಣ[ಪೀತ], ಅದಕ್ಕೆ ಅಧಿದೇವತೆ[ಬ್ರಹ್ಮ], ಭಕ್ತ ಮುಖ, ಕ್ರಿಯಾಶಕ್ತಿ, ಆಚಾರಲಿಂಗ, ನಕಾರ ಸ್ವಾಯತ. ಲಿಂಗಸ್ಥಾನದಲ್ಲಿ ಸ್ವಾಧಿಷಾ*ನಚಕ್ರ, ಅಪ್ಪುವೆಂಬ ಮಹಾಭೂತ, ಧನುರ್ಗತಿ, ಷಡುದಳಪದ್ಮ, ಅಲ್ಲಿಯ ಅಕ್ಷರವಾರು ಬ ಭ ಮ ಯ ರ ಲ ; ಅದರ ವರ್ಣ [ಶ್ವೇತ], ಅಧಿದೇವತೆ [ವಿಷ್ಣು], ಮಹೇಶ ಮುಖ, ಜ್ಞಾನಶಕ್ತಿ, ಗುರುಲಿಂಗ, ಅಲ್ಲಿ ಮಕಾರ ಸ್ವಾಯತ. ನಾಭಿಸ್ಥಾನದಲ್ಲಿ ಮಣಿಪೂರಕಚಕ್ರ, ತೇಜವೆಂಬ ಮಹಾಭೂತ, ತ್ರಿಕೋಣ, ದಶದಳಪದ್ಮ, ಅಲ್ಲಿಯ ಅಕ್ಷರ ಹತ್ತು ; ಡಢಣ ತಥದಧನ ಪಫ, ಅದಕ್ಕೆ [ಹರಿತ]ವರ್ಣ, ಅಧಿದೇವತೆ [ರುದ್ರ], ಪ್ರಸಾದಿ ಮುಖ, ಇಚ್ಚಾಶಕ್ತಿ , ಶಿವಲಿಂಗ, ಶಿಕಾರ ಸ್ವಾಯತ. ಹೃದಯಸ್ಥಾನದಲ್ಲಿ ಅನಾಹತಚಕ್ರ, ವಾಯುವೆಂಬ ಮಹಾಭೂತ, ಷಟ್ಕೋಣ, ದ್ವಿದಶದಳಪದ್ಮ, ಅಲ್ಲಿಯ ಅಕ್ಷರ ಹನ್ನೆರಡು : ಕ ಖ ಗ ಘ ಙ ಚ ಛ ಜ ಝ ಞ ಟ ಠ ಅದರ ವರ್ಣ [ಮಾಂಜಿಷ್ಟ], ಅದಕ್ಕೆ ಅಧಿದೇವತೆ [ಈಶ್ವರ], ಪ್ರಾಣಲಿಂಗಿ ಮುಖ, Wಆದಿಘೆಶಕ್ತಿ, ಜಂಗಮಲಿಂಗ, ಅಲ್ಲಿ ವಕಾರ ಸ್ವಾಯತ. ಕಂಠಸ್ಥಾನದಲ್ಲಿ ವಿಶುದ್ಧಿಚಕ್ರ, ಆಕಾಶವೆಂಬ ಮಹಾಭೂತ, ವರ್ತುಳಾಕಾರ, ಷೋಡಷದಳಪದ್ಮ, ಅಲ್ಲಿಯ ಅಕ್ಷರ ಹದಿನಾರು :ಅ ಆ ಇ ಈ ಉ ಊ ಋ Iೂ ಲೃ ಲೃೂ ಏ ಐ ಓ ಔ ಅಂ ಅಃ, ಅದಕ್ಕೆ ವರ್ಣ [ಕಪೋತ], ಅಧಿದೇವತೆ ಸದಾಶಿವನು, ಶರಣ ಮುಖ, [ಪರಾ]ಶಕ್ತಿ , [ಪ್ರಸಾದಲಿಂಗ, ಯಕಾರ ಸ್ವಾಯತ. ಭ್ರೂಮಧ್ಯದಲ್ಲಿ ಆಜ್ಞಾಚಕ್ರ, ಮನವೆಂಬ ಮಹಾಭೂತ, ದ್ವಿದಳಪದ್ಮ,] ಅಲ್ಲಿಯ ಅಕ್ಷರವೆರಡು :ಹ ಷ ವೆಂಬ [ಅಕ್ಷರ], ಮಾಣಿಕ್ಯ ವರ್ಣ, [ಅದಕ್ಕೆ ಅಧಿದೇವತೆ ಮಹೇಶ್ವರ], ಐಕ್ಯ ಮುಖ, ಕ್ರಿಯಾಶಕ್ತಿ, ಮಹಾಲಿಂಗ, ಓಂಕಾರ ಸ್ವಾಯತ. ಇಂತೀ ಷಡುಚಕ್ರದ, ಷಡುಸ್ಥಳದ, ಷಡುಲಿಂಗದ, ಷಡುಶಕ್ತಿಯರಿಗೆ ಷಡಕ್ಷರವೆ ಪ್ರಾಣವಾಗಿ ವಿರಾಜಿಸುತ್ತಿದ್ದಿತಯ್ಯ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಮತ್ತಮೀ, ಪತ್ತೊಂಬತ್ತಕ್ಕೆ ತರದಿಂದೊಂದಕ್ಕೆ ವಿಭಾಗೆಯಂ ಪೇಳ್ವೆನೆಂತೆನೆ- ಅಕಾರಾನ್ವಿತವಾದ ಶುದ್ಧ ಮಂತ್ರವೆ ಆದಿವಾಲವೆನಿಕು- ಮಷ್ಟಬೀಜಾನ್ವಿತ ಮಂತ್ರವೆ ಸವಾಲವೆನಿಕುಂ. ಪಂಚಸ್ವರಾನ್ವಿತ ಮಂತ್ರವೆ ಕೌಮಾರವೆನಿಕುಂ. ಸರ್ವದೇವತಾ ಮಂತ್ರಜಾತವೆ ಯೌವನಮೆನಿಕುಂ. ಶಿವಾಕ್ಷರವೆ ಬ್ರಹ್ಮಣನೆನಿಕುಂ. ಪಂಚಾಕ್ಷರವೆ ಕ್ಷತ್ರಿಯನೆನಿಕುಂ. ಷಡಕ್ಷರವೆ ವೈಶ್ಯನೆನಿಕುಂ. ಮತ್ತೆಯುಮದೆ ಶೂದ್ರನೆನಿಕುಂ. ಸ್ವಾಹಾ ಪಲ್ಲವಾಂತವೆ ಸ್ತ್ರೀಯೆನಿಕುಂ. ನಮಃ ಪಲ್ಲವಾಂತವೆ ಪುರುಷನೆನಿಕುಂ. ಷಟ್ಕಾರವಷಟ್ಕಾರ ಪಲ್ಲವಾಂತಗಳೆ ನಪುಂಸಕವೆನಿಕುಂ. ಮತ್ತಂ, ಸ್ವಾಹಾ ಪಲ್ಲವಾಂತವಾದೀ ಕ್ಷತ್ರಿಯ ವೈಶ್ಯ ಶೂದ್ರ ಸಹಿತ ವಿಪ್ರಮಂತ್ರವು ಇಂದ್ರಾದಿ ಶಯನಸ್ಥಾ [ನ] ಮುಂ ಕೂಡಿ ಮಂತ್ರಜಾತವೆನಿಕು- ಮೇಕಾಕ್ಷರ ಮಂತ್ರವೆ ಶುದ್ಧಮೆನಿಕುಂ. ಚತುರಕ್ಷರ ಮಂತ್ರವೆ ಮಿಶ್ರಮೆನಿಕುಂ. ಬವಿದಾಕ್ಷರಮಂತ್ರವೆ ಸಂಕೀರ್ಣವೆನಿಕುಂ. ಇಂತೀಯಾದಿವಾಲವೊಂದು, ಸವಾಲವೆರಡು, ಕೌಮಾರಂ ಮೂರು, ಯೌವನಂ ನಾಲ್ಕು, ಬ್ರಹ್ಮಣನೈದು, ಕ್ಷತ್ರಿಯನಾರು, ವೈಶ್ಯನೇಳು, ಶೂದ್ರನೆಂಟು, ಸ್ತ್ರೀಯೊಂಬತ್ತು ಪುರುಷಂ ಪತ್ತು, ನಪುಂಸಕಂ ಪನ್ನೊಂದು, ಮಂತ್ರಜಾತಂ ಪನ್ನೆರಡು, ಶುದ್ಧಂ ಪದಿಮೂರು, ಮಿಶ್ರಂ ಪದಿನಾಲ್ಕು, ಸಂಕೀರ್ನಂ ಪದಿನೈದುಮಿವರ ವಿವರಮಂ ನಿರೂಪಿಸಿದೆಯಯ್ಯಾ, ಪರಶಿವಲಿಂಗಯ್ಯ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
-->