ಅಥವಾ
(0) (0) (0) (0) (1) (0) (0) (0) (2) (0) (0) (1) (0) (0) ಅಂ (0) ಅಃ (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (1) (1) (0) (0) (0) (0) (0) (0) (0) (0) (0) (0) (0) (4) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಎಲ್ಲವನರಿದಲ್ಲಿ, ಕಡೆಯಲ್ಲಿ ಕೊಲ್ಲಬೇಕೆಂಬುದೊಂದು ವೇದ ಉಂಟೆ? ಶಾಸ್ತ್ರವನೆಲ್ಲವ ಕಲಿತಲ್ಲಿ ಗೆಲ್ಲ ಸೋಲಕ್ಕೆ ಹೋರಬೇಕೆಂದು ಕಡೆಯಲ್ಲಿ ಒಂದು ಸೊಲ್ಲುಂಟೆ? ಪುರಾಣವನ್ನೆಲ್ಲವನೋದಿದಲ್ಲಿ ಸರ್ವಜೀವವ ಕೊಲ್ಲು ಕೊರೆ ಎಂಬುದೊಂದು ದಳ್ಳುರಿಯುಂಟೆ? ಶ್ರುತಿಯ ಕೇಳುವಲ್ಲಿ ಸ್ಮೃತಿಯನಂಗೀಕರಿಸುವಲ್ಲಿ ಸರ್ವಹತವ ಮಾಡಬೇಕೆಂಬುದೊಂದು ಗತಿಯುಂಟೆ? ಇಂತೀ ಆತ್ಮನಲ್ಲಿ ಸರ್ವಭೂತ ಹಿತವುಳ್ಳಂಗೆ ಆತ ಅತೀತ ಸ್ವಯವಸ್ತು ದಸರೇಶ್ವರಲಿಂಗವು.
--------------
ದಸರಯ್ಯ
ಎಲು ನರ ಚರ್ಮ ಮಜ್ಜೆ ಮಾಂಸದೊಳಗಾದ ಕ್ರಿಮಿ ಎನ್ನಂಗದೊಳು ಹುಟ್ಟಿ, ಮಲ ಹುಣ್ಣು ಉಗುಳುಗಳಲ್ಲಿ ಬೀಳುವುದ ಕಂಡು ಅವ ನಾ ರಕ್ಷಿಸಿದೆನೆ? ಅವು ಬೀಳಬೇಕೆಂದು ನಾ ಶಿಕ್ಷಿಸಿದೆನೆ? ಇಂತೀ ಜೀವದ ದೃಷ್ಟವ ಕಂಡು ಎನಗಿದೆತ್ತಣ ಸರ್ವ ಜೀವದಯ ಈ ರಕ್ತದ ಲೇಪವ ಬಿಡಿಸಾ, ಕಲ್ಲು ಮಣ್ಣು ಮರನಂತೆ ಚೆನ್ನ ದಸರೇಶ್ವರಲಿಂಗಾ.
--------------
ದಸರಯ್ಯ