ಅಥವಾ
(4) (1) (1) (0) (1) (0) (0) (0) (0) (1) (0) (0) (0) (0) ಅಂ (0) ಅಃ (0) (1) (0) (1) (0) (0) (0) (0) (2) (0) (0) (0) (0) (0) (0) (0) (1) (0) (2) (0) (1) (0) (0) (0) (3) (3) (0) (0) (0) (1) (1) (0) (0) (0) (2) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಜನನ ಮರಣಂಗಳಲ್ಲಿ ಬರಿಸಬಾರದ ಭಾಷೆ, ನಿತ್ಯ ನೀನೆಂದು ಮರೆಹೊಕ್ಕ ಕಾರಣ. ಇಹದಲ್ಲಿ ಪರದಲ್ಲಿ ಇರಿಸಬಾರದ ಭಾಷೆ, ತನ್ನಲ್ಲಿ ತನಗೆ ವಿವರಣೆ ಇಲ್ಲದ ಕಾರಣ. ಪುಣ್ಯಪಾಪಂಗಳ ಉಣಿಸಬಾರದ ಭಾಷೆ, ತನ್ನ ಪಾದೋದಕ ಪ್ರಸಾದಜೀವಿಯಾಗಿ. ತಾ ಸಹಿತ ನಾನಿಪ್ಪೆ, ನಾ ಸಹಿತ ತಾನಿಪ್ಪ ಕಾರಣ, ವಂಚನೆ ಬಾರದು ಎನಗೆ ತನಗೆ. ಶಂಭುಜಕ್ಕೇಶ್ವರದೇವಾ, ಸದ್ಗುರು ಅಪ್ಪಣೆಯಿಂದ ನೀನೊಲಿದು ಸಲಹು ಎನ್ನ ಪ್ರಾಣಲಿಂಗವಾಗಿ.
--------------
ಸತ್ಯಕ್ಕ
ಜಾಣಾನುಭಾವಿಯೆಂಬ ಪಿನಾಕಿಯ ಮಾತ ಕೇಳಿ ಬಂದೆ. ಹಿರಿದು ಆರತದಿಂದ ಕಾಣಿಸುವನ್ನಕ್ಕರ ತವಕ, ನುಡಿಗೆಡೆಗೊಡನೆಲಗೆ ! ಪ್ರಾಣಕ್ಕಾಧಾರ ಶಿವಶಿವಾ ಎಂಬ ಶಬುದ. ಆತನ ಕಂಡಡೆ ಕಡೆಯದ ಕೀಲು ಕಳೆದಂತೆ ಶಂಭುಜಕ್ಕೇಶ್ವರನ ಬೆರಸಲೊಡನೆ ಬೆರಗಾದೆನು.
--------------
ಸತ್ಯಕ್ಕ