ಅಥವಾ
(4) (1) (1) (0) (1) (0) (0) (0) (0) (1) (0) (0) (0) (0) ಅಂ (0) ಅಃ (0) (1) (0) (1) (0) (0) (0) (0) (2) (0) (0) (0) (0) (0) (0) (0) (1) (0) (2) (0) (1) (0) (0) (0) (3) (3) (0) (0) (0) (1) (1) (0) (0) (0) (2) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಮಂತ್ರ ಭಿನ್ನವಾಯಿತ್ತೆಂದು ಕಂಥೆಯ ಬಿಡುವರೆ ಅರಿವುಳ್ಳವರು ? ಅದು ದ್ವೇಷವಲ್ಲದೆ ಅರಿವಿಂಗೆ ಸಂಬಂಧವಲ್ಲ. ಮಂತ್ರಮಧ್ಯೇ ಭವೇಲ್ಲಿಂಗಂ ಲಿಂಗಮಧ್ಯೇ ಭವೇನ್ಮಂತ್ರಂ ಮಂತ್ರಲಿಂಗದ್ವಯೋರೈಕ್ಯಂ ಇಷ್ಟಲಿಂಗಂತು ಶಾಂಕರಿ || ' ಎಂದುದಾಗಿ, ಆ ಮಂತ್ರ ಸರ್ವರ ಆಧಾರ, ಸರ್ವರ ಆತ್ಮಬೀಜವೆಂದರಿಯದೆ ಕೇಸರಿಯ ಕನಸ ಕಂಡ ವಾರಣದಂತೆ, ಈ ಭಾಷೆಹೀನರಿಗೇಕೆ ಶಂಭುಜಕ್ಕೇಶ್ವರನು ?
--------------
ಸತ್ಯಕ್ಕ
ಮೊಲೆ ಮುಡಿ ಇದ್ದುದೆ ಹೆಣ್ಣೆಂದು ಪ್ರಮಾಣಿಸಲಿಲ್ಲ. ಕಾಸೆ ಮೀಸೆ ಕಠಾರವಿದ್ದುದೆ ಗಂಡೆಂದು ಪ್ರಮಾಣಿಸಲಿಲ್ಲ. ಅದು ಜಗದ ಹಾಹೆ; ಬಲ್ಲವರ ನೀತಿಯಲ್ಲ. ಏತರ ಹಣ್ಣಾದಡೂ ಮಧುರವೆ ಕಾರಣ, ಅಂದವಿಲ್ಲದ ಕುಸುಮಕ್ಕೆ ವಾಸನೆಯೆ ಕಾರಣ. ಇದರಂದವ ನೀನೇ ಬಲ್ಲೆ ಶಂಭುಜಕ್ಕೇಶ್ವರಾ.
--------------
ಸತ್ಯಕ್ಕ
ಮಚ್ಚಿ ಗ್ರಾಹಿಗೊಂಡೆನು ನಿಮಗಾನು, ನಲ್ಲನೆ, ಒಚ್ಚತವೋದವಳನುಳಿವರೆ ? ವಿಕಳಗೊಂಡೆನು ಶಿವಶಿವಾ, ಪ್ರಾಣಪದವಲ್ಲದೆ ಮತ್ತೊಂದನರಿಯೆನು ಮನ ವಚನ ಕಾಯದಲ್ಲಿ. ಉಚಿತವೆ ನಿಮಗೆ ?ಪುರುಷಲಕ್ಷಣವೆ ? ಅತಃಪರಗಂಡರ ನಾನು ಬಲ್ಲಡೆ ಕರ್ತು ನಿಮ್ಮಾಣೆಯಯ್ಯಾ ಶಂಭುಜಕ್ಕೇಶ್ವರಾ.
--------------
ಸತ್ಯಕ್ಕ