ಅಥವಾ
(4) (1) (1) (0) (1) (0) (0) (0) (0) (1) (0) (0) (0) (0) ಅಂ (0) ಅಃ (0) (1) (0) (1) (0) (0) (0) (0) (2) (0) (0) (0) (0) (0) (0) (0) (1) (0) (2) (0) (1) (0) (0) (0) (3) (3) (0) (0) (0) (1) (1) (0) (0) (0) (2) (0)

ಪದದಿಂದ ಪ್ರಾರಂಭವಾಗುವ ವಚನಗಳು:

ನಡೆದವರುಂಟೆ ಕೈಲಾಸಕ್ಕೆ ದಾಳಿಯ ? ನುಡಿದವರುಂಟೆ ಶಿವಲಾಂಛನಕ್ಕೆ ವೇಳೆಯ ? ಕುಡಿದವರುಂಟೆ ಕಾಳಕೂಟವಿಷವನಮೃತವ ಮಾಡಿ ? ಮಡದಿಯ ಜಂಗಮಕ್ಕೆ ಕೊಟ್ಟು ನೋಡಿದವರುಂಟೆ ? ಹಡೆದ ಮಕ್ಕಳ ಕೊಂದು ಜಂಗಮಕ್ಕೆ ಉಣಲಿಕ್ಕಿದರುಂಟೆ ? ನೀವು ಕೊಡುವುದು ಕೌತುಕವಲ್ಲ ? ಶಂಭುಜಕ್ಕೇಶ್ವರಾ, ಎನ್ನೊಡೆಯನ ಸಾತ್ವಿಕ ಸದ್ಭಕ್ತರ ಮಹಿಮೆಗೆ ನಾನು ನಮೋ ನಮೋ ಎಂಬೆನು.
--------------
ಸತ್ಯಕ್ಕ