ಅಥವಾ
(0) (3) (1) (0) (0) (0) (0) (0) (2) (0) (0) (0) (0) (0) ಅಂ (0) ಅಃ (0) (2) (0) (0) (0) (0) (1) (0) (0) (0) (0) (0) (0) (0) (0) (0) (1) (0) (1) (0) (1) (0) (0) (0) (0) (1) (0) (0) (0) (0) (0) (0) (0) (0) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಆವಾವಸ್ಥಾನದಲ್ಲಿಯು ಉಗ್ರಮೂರ್ತಿ ನಯನ ಕರುಣದಿಂದ ಶಿವಲೀಲಾನಂದವಾಗಿ ಇರುವ ಶರಣರು ಲೌಕಿಕದ ಜಡರು ಮಂಕು ಮರುಳರು ಕಳ್ಳರು ಸುಳ್ಳರು ಆಹಾರಗಳ್ಳರು ಇತ್ಯಾದಿಕರು ಅರಿಯಬಲ್ಲರೆ ? ಅಂತಪ್ಪ ಮಹಿಮರ ಶಿವಲಿಂಗನಿಷಾ*ಪರರ ಏಕದಾರ್ಚನೆಯರ ಮಹಿಮೆಯೆ ನೋಡಲ್ಕೆ ಯರಳು ಇದ್ದಲ್ಲಿಗೆ ಸಕ್ಕರೆಯು ಬಂದ ಪರಿಯಾಯಿತ್ತು ಕಾಣಾ ಕುವರ ಚೆನ್ನಬಸವೇಶ್ವರಾ.
--------------
ಮಾದಾರ ಚೆನ್ನಯ್ಯ
ಆರಾರು ಅರಿದುದಿಲ್ಲ, ತಾನಾರಿಗೆ ಸಾಧ್ಯನಲ್ಲ. ಧಾರುಣಿಗೆ ಮಿಗಿಲಾದೆಲ್ಲ ಊರೂರಿ ತಾನಿಂತಾಗದಲ್ಲ ತೋರಿ ನಯಕ್ಕೆ ಸಿಕ್ಕದಲ್ಲ ಧೀರತನದಲ್ಲಿ ಕಂಡು ಎಸೆದನಲ್ಲ ಸರ್ವರನುಳುಹಿ ರಕ್ಷಿಸಿದನಲ್ಲಿ ನಮ್ಮ ಘನಗುರು ಸದಾಶಿವಮೂರ್ತಿ ಕಾಣಾ ಕುವರ ಚೆನ್ನಬಸವೇಶ್ವರಾ.
--------------
ಮಾದಾರ ಚೆನ್ನಯ್ಯ
ಆದಿ ಪರಶಿವನ ಜಟಾಮಗುಟದಲ್ಲಿ ಫಣಿಯ ತ್ರಿಪುರ ಸಂಗ್ರಾಮದಲ್ಲಿ ರೌದ್ರವು ಪುಟ್ಟಿ ತ್ರಿಪುರವನೆಸೆವಲ್ಲಿ ರಾಕ್ಷಸರ ಸಂಹರಿಸಲ್ಪಟ್ಟಂಥ ಶೇಷನ ನಯನವು ಸಸಿಯನು ವಿವರಿಸಿ ಪೇಳಾ ಚೆನ್ನಬಸವೇಶ್ವರಾ.
--------------
ಮಾದಾರ ಚೆನ್ನಯ್ಯ