ಅಥವಾ
(0) (3) (1) (0) (0) (0) (0) (0) (2) (0) (0) (0) (0) (0) ಅಂ (0) ಅಃ (0) (2) (0) (0) (0) (0) (1) (0) (0) (0) (0) (0) (0) (0) (0) (0) (1) (0) (1) (0) (1) (0) (0) (0) (0) (1) (0) (0) (0) (0) (0) (0) (0) (0) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಕಂಡುದ ಕಡೆಗಿಡುವರಲ್ಲದೆ ಕಾಣದುದ ಸ್ಥಿರವೆನಿಸಿ ಪಾಡಿ ಮಾರ್ಗವ ಹಚ್ಚಿ ಸಚರಾ[ಚರ]ಕ್ಕೆಲ್ಲ ಕಾಣ್ಕೆಯ ಮಾಡಿ ಭರದಿಂದ ಗೃಹವ ಪೊಗದೆ ಪರವೆಯ ನೋಡದೆ ವಾಲ್ಮೀಕಿ ನಿಳಯಕ್ಕೆ ಬಂದು ನಯನವಂ ಪಡಕೊಂಡು ಪರವೆಯ ಸಂಗಸುಖಸಮರಸದಲ್ಲಿ ಇರುತ ಸಂಕಿಲೆಯ ಕರಸಿ ಸುಖಮಿರ್ದರು ಕಾಣಾ ಚೆನ್ನಬಸವೇಶ್ವರಾ.
--------------
ಮಾದಾರ ಚೆನ್ನಯ್ಯ
ಕೊಟ್ಟು ನೋಡುವ ಕೊಡದಲೆ ಕಾಡುವ ಸಿಟ್ಟು ಮಾಡುವ ಗಟ್ಟಿಯಾಗುವ ಹೊಟ್ಟೆಯ ತುಂಬುವ ಹೊಟ್ಟೆಸಲಹುವ ಕಟ್ಟೆಯನು ಕಟ್ಟುವ ಬಿಟ್ಟಿಯನು ಮಾಡುವ ಕಟ್ಟಳಿಲ್ಲದೆ ಉಂಬುವ ಹುಟ್ಟಲಿ ತಿವಿಸಿಕೊಂಬುವ ಕಟ್ಟಳಿಲ್ಲದೆ ತಿರುಗುವ ಗಟ್ಟಿಯಾಗಿ ಹಡಪವನು ಹೊತ್ತವ ಒಟ್ಟಿದವನ ಕೊಟ್ಟವಂ ಇಷ್ಟುದಿನ ತಪ್ಪದಲೆ ನಡೆಸಿ ಹುಟ್ಟದಲೆ ನಂಬಿಗೆ ಕೊಡದಲೆ ತನ್ನನು ನಂಬಿ ಇದ್ದಲ್ಲಿಗೆ ತರಿಸಿದ ನಮ್ಮ ಘನಗುರು ಸದಾಶಿವ ಸದ್ಗುರುವು ಕಾಣಾ ಕುವರ ಚೆನ್ನಬಸವೇಶ್ವರಾ.
--------------
ಮಾದಾರ ಚೆನ್ನಯ್ಯ