ಅಥವಾ
(0) (0) (1) (0) (0) (0) (0) (0) (1) (0) (0) (0) (0) (0) ಅಂ (0) ಅಃ (0) (3) (0) (0) (0) (0) (0) (0) (0) (0) (0) (0) (0) (0) (0) (0) (2) (0) (0) (0) (1) (0) (0) (0) (0) (0) (0) (0) (0) (0) (1) (0) (0) (0) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಕರ್ಪುರದ ಹಣತೆಯಲ್ಲಿ ಬತ್ತಿಯ ಹಾಕಿ ಉರುಹಬಹುದೆ? ಕಿಚ್ಚಿನ ಮಧ್ಯದಲ್ಲಿ ನಿಂದು ಕೆಟ್ಟಿತ್ತೆಂದು ಹುಲ್ಲ ಸೊಪ್ಪ ಹಾಕಿ ಹೊತ್ತಿಸಬಹುದೆ? ಅಲಗು ಕ್ರೂರವಾಯಿತ್ತೆಂದು ತನ್ನೊಡಲನಿರಿದು ಅಲಗಿನ ಕ್ರೂರ ಸುಲಲಿತವೆನ್ನಬಹುದೆ? ಆ ಗುಣ ಅಲ್ಲಲ್ಲಿಗೆ ದೃಷ್ಟ. ಇದು ನಿಶ್ಚಯ ನಿಜ ಲಿಂಗಾಂಗಿಗೆ ಅರಿವಿನ ಭೇದ. ಕಾಲಕರ್ಮವಿರಹಿತ ತ್ರಿಪುರಾಂತಕಲಿಂಗದವನ ತೆರ.
--------------
ಶಂಕರದಾಸಿಮಯ್ಯ
ಕಂಟಕ ಬಂದಲ್ಲಿ ಸಂತೈಸಿಕೊಂಡು ಆತ್ಮನ ಸಂಚರಿಸದೆ ನಿಷೆ*ಯಿಂದ ದೃಷ್ಟವ ಕಾಬುದೇ ಶ್ರದ್ಧೆ ಸದ್ಭಕ್ತನ ಇರವು. ವೃಥಾಳಾಪದಿಂದ ನಿಂದ, ದುರ್ಜನ ಬಂದಲ್ಲಿ ಸಂದು ಸಂಶಯವಿಲ್ಲದೆ ಅಂಗವ ಬಂಧಿಸದೆ ನಿಜಾತ್ಮನ ಸಂದೇಹಕಿಕ್ಕದೆ ಪರಮಾನಂದಸ್ವರೂಪನಾಗಿ ಬಂಧ ಮೋಕ್ಷಕರ್ಮಂಗಳ ಹರಿದಿಪ್ಪುದು ಸರ್ವಾಂಗಲಿಂಗಿಯ ಅರಿವು. ಅದು ಕರಿಗೊಂಡು ಎಡೆದೆರಪಿಲ್ಲದೆ ಪರಿಪೂರ್ಣನಾದುದು ಪರಮ ವಿರಕ್ತನ ಪರಿ. ಕಾಲಕರ್ಮವಿರಹಿತ ತ್ರಿಪುರಾಂತಕಲಿಂಗವು ತಾನಾದ ಶರಣನ ಇರವು.
--------------
ಶಂಕರದಾಸಿಮಯ್ಯ
ಕಾಯವಿಕಾರವಳಿದಲ್ಲದೆ ಗುರುಸ್ಥಲಕ್ಕೆ ಸಲ್ಲ. ಮನೋವಿಕಾರವಳಿದಲ್ಲದೆ ಲಿಂಗಪೂಜಕನಲ್ಲ. ತ್ರಿವಿಧಮಲ ದೂರಸ್ಥನಲ್ಲದೆ ವಿರಕ್ತಭಾವಿಯಲ್ಲ. ಇಂತೀ ಒಂದರಲ್ಲಿ ಒಂದು ಕಲೆಯಿದ್ದು ಮತ್ತೆ ಲಿಂಗದಲ್ಲಿ ನಿಂದಲ್ಲಿ ಸನ್ಮುಕ್ತನಲ್ಲ. ಇಂತೀ ಬಂಧ ಮೋಕ್ಷ ಕರ್ಮಂಗಳ ಬಿಟ್ಟು ನಿಜ ಸಂದು ಸುಖಿಯಾಗಬಲ್ಲಡೆ ಕಾಲಕರ್ಮವಿರಹಿತ ತ್ರಿಪುರಾಂತಕಲಿಂಗವು ಸಾಧ್ಯವಲ್ಲ.
--------------
ಶಂಕರದಾಸಿಮಯ್ಯ