ಅಥವಾ
(0) (0) (1) (0) (0) (0) (0) (0) (1) (0) (0) (0) (0) (0) ಅಂ (0) ಅಃ (0) (3) (0) (0) (0) (0) (0) (0) (0) (0) (0) (0) (0) (0) (0) (0) (2) (0) (0) (0) (1) (0) (0) (0) (0) (0) (0) (0) (0) (0) (1) (0) (0) (0) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ತಾ ಮಿಥ್ಯನಾದ ಮತ್ತೆ ಜಗವೆಲ್ಲವೂ ತನಗೆ ಮಿಥ್ಯ. ತಾ ತಥ್ಯನಾದ ಮತ್ತೆ ಜಗವೆಲ್ಲವೂ ತನಗೆ ತಥ್ಯ. ಅಂಗೈಯಲ್ಲಿ ಹಿಡಿದು ಕೈದ ನೋಡದೆ ಅಲಗು ಕೆಟ್ಟಿತ್ತೆಂದು ಹಲಬುವನಂತಾಗದೆ ತನ್ನ ತಾ ಮರದು ಅನ್ಯರ ದೆಸೆಯಿಂದ ತನ್ನ ಕೇಳುವನಂತಾಗದೆ ಅರಿ ನಿಜದರಿವ ಮರೆಯದಂತೆ ಕಾಲಕರ್ಮವಿರಹಿತ ತ್ರಿಪುರಾಂತಕಲಿಂಗದೊಳಗಾದವನ ಇರವು.
--------------
ಶಂಕರದಾಸಿಮಯ್ಯ
ತೊಗಟೆಯೊಳಗಣ ಬೀಜ ಬೀಜದೊಳಗಣ ಅಂಕುರ ಸಾರ ಸಸಿರೂಪುದೋರದೆ ವೇಧಿಸಿಕೊಂಡಿಪ್ಪಂತೆ. ಇಂತೀ ಕ್ರೀಯೊಳಗಣ ಭಾವ, ಭಾವದೊಳಗಣ ಜ್ಞಾನ, ಜ್ಞಾನದೊಳಗಣ ಅರಿವು, ಅರಿವಿನೊಳಗಣ ನಿಜದ ಬೆಳಗಿನ ಮಹಾಕಲೆಯನೊಳಕೊಂಡು ಘನಮಹಿಮಂಗೆ ಹಿಡಿದಹೆನೆಂಬ ಭಾವದ ಭ್ರಮೆಯಿಲ್ಲ; ಬಿಟ್ಟಿಹೆನೆಂಬ ಕಟ್ಟಿನ ಸೂತಕವಿಲ್ಲ. ಎಲ್ಲಿ ಬಿಟ್ಟಲ್ಲಿ ತೊಟ್ಟು ಬಿಟ್ಟ ಹಣ್ಣಿನಂತೆ ಎಲ್ಲಿ ಮುಟ್ಟಿದಲ್ಲಿ ಕರ್ಪುರದ ಪಂಜರದಲ್ಲಿ ಉರಿಯಗಿಳಿ ಮಾತಾಡಿದಂತೆ ಉತ್ತರ ಮಾತಿಂಗೆ ಪ್ರತ್ಯುತ್ತರ ನಷ್ಟವಾದಂತೆ. ಇಂತೀ ಬಟ್ಟಬಯಲ ಕಟ್ಟಕಡೆಯ ದೃಷ್ಟವಿಲ್ಲದ ನಿರ್ಲಕ್ಷ ್ಯಂಗೆ ಲಕ್ಷ ್ಯಗೆಟ್ಟ ನಿಶ್ಚಯವಂತಂಗೆ, ಯೋಮವಿಲ್ಲದ ಭಾವ ಭಾವವಿಲ್ಲದ ಜ್ಞಾನ ಜ್ಞಾನವಿಲ್ಲದ ಶೂನ್ಯ ಶೂನ್ಯವಿಲ್ಲದ ಸುಳುಹು ಸುಳುಹಿಲ್ಲದ ಅಖಂಡಿತನಾದ ಸರ್ವಗುಣ ಭರಿತ ಕಾಲಕರ್ಮವಿರಹಿತ ತ್ರಿಪುರಾಂತಕಲಿಂಗವೆಂಬಲ್ಲಿ ತಾನು ತಾನಾದ ಶರಣ.
--------------
ಶಂಕರದಾಸಿಮಯ್ಯ