ಪ ಪದದಿಂದ ಪ್ರಾರಂಭವಾಗುವ ವಚನಗಳು:
ಪೂರ್ವ ಆದಿಯಂತ ಸಿದ್ಧಾಂತವಾದ ತೆರ:ಆವ ಬೀಜವೂ ಅಪ್ಪುಸಾರವಿಲ್ಲದೆ ಪ್ರತ್ಯಕ್ಷ ದೃಷ್ಟವುಂಟೆ ?ಸರ್ವಕ್ರೀಗಳೆಲ್ಲವೂ ಜ್ಞಾನವಿಲ್ಲದಿರೆ ಕ್ರೀದೃಷ್ಟಸತ್ಯವಪ್ಪವೆ ?ಇಂತೀ ಜ್ಞಾನಸರ್ವಗುಣನಾಗಿ ಸತ್ಕ್ರೀಮಾರ್ಗಗಳಿಂದಒಪ್ಪಲ್ಪಟ್ಟುದು ಲಿಂಗದ ಅಂಗದ ಸೋಂಕಿನ ಸಂಗ, ಈ ಗುಣಭೋಗಬಂಕೇಶ್ವರಲಿಂಗದೊಲವು.