ಅಥವಾ
(2) (1) (3) (0) (0) (0) (0) (0) (3) (1) (0) (0) (0) (0) ಅಂ (1) ಅಃ (1) (0) (0) (1) (0) (0) (0) (0) (2) (0) (0) (0) (0) (0) (0) (0) (3) (0) (0) (1) (0) (0) (0) (3) (2) (2) (0) (0) (0) (2) (0) (3) (1) (3) (2) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಗುರುಲಿಂಗಜಂಗಮಕ್ಕೆ ದಾಸೋಹವ ಮಾಡುವ ಭಕ್ತನ ಪರಿಯಾಯವ ನೋಡಿರಯ್ಯಾ. ಶ್ರೀಗುರು ಶಿಷ್ಯಂಗೆ ಅನುಗ್ರಹವ ಮಾಡಲೊಡನೆ, ಆ ಶಿಷ್ಯ ಆ ಗುರುವ ಕೊಂದು ತಿಂದ ನೋಡಿರಯ್ಯಾ. ಲಿಂಗ ಬಂದು ಪೂಜೆಯ ಮಾಡಿಸಿಕೊಂಡು ಹೋದೆಹೆನೆಂದು ಹೋದಡೆ, ಆ ಭಕ್ತ ಆ ಲಿಂಗವ ನುಂಗಿದ ಪರಿಯ ನೋಡಿರಯ್ಯಾ. ಜಂಗಮ ಬಂದು ಲಿಂಗಾರ್ಚನೆಯ ಮಾಡಿಹೆನೆಂದು ಮನೆಗೆ ಬಂದಡೆ. ಆ ಭಕ್ತ ಆ ಜಂಗಮವ ಕೊಂದು ತಿಂದು ಪರಿಯ ನೋಡಿರಯ್ಯಾ. ಇಂತೀ ಮೂವರನು ಕೊಂದು ತಿಂಬವನ ಭಕ್ತನೆಂದೆಂಬೆನೆ ಅಯ್ಯಾ ? ಅಲ್ಲ, ಅಲ್ಲ, ಆತ ಅನಾಚಾರಿ, ವ್ರತಗೇಡಿ, ದುರಾಚಾರಿ. ಇಂತೀ ದುರಾಚಾರವ ನುಡಿಯಲಾಗದು. ಆತ ದೇವಲೋಕಕ್ಕೆ ಸಲ್ಲ, ಮೃತ್ಯುಲೋಕಕ್ಕೆ ಸಲ್ಲ. ಆವ ಲೋಕಕ್ಕೆಯೂ ಸಲ್ಲ. ಇಂತಪ್ಪ ಪಂಚಮಹಾಪಾತಕನ ಭಕ್ತನೆಂದೆನಗೆ ತೋರದಿರಾ. ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ, ಇಂತಪ್ಪ ಭಕ್ತನ ಪರಿಯ, ನೀವೇ ಬಲ್ಲಿರಲ್ಲದೆ ನಾನೆತ್ತ ಬಲ್ಲೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಮರುಳಶಂಕರದೇವ