ಅಥವಾ
(6) (3) (3) (1) (2) (0) (0) (0) (3) (0) (0) (2) (0) (0) ಅಂ (2) ಅಃ (2) (6) (0) (1) (0) (0) (0) (0) (0) (0) (0) (0) (1) (0) (0) (0) (1) (0) (0) (0) (10) (0) (0) (0) (0) (3) (0) (0) (0) (2) (0) (2) (0) (1) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಅಂತರಂಗದಲ್ಲಿ ಆವರಿಸಿ, ಬಹಿರಂಗದಲ್ಲಿ ತೋರುವೆ. ಕಂಗಳ ಕೊನೆಯಲ್ಲಿ ಮೂರುತಿಯಾಗಿ, ಮನದ ಕೊನೆಯಲ್ಲಿ ತೋರುವೆ. ಎನ್ನ ಬ್ರಹ್ಮರಂಧ್ರದಲ್ಲಿ ತೋರುವ ಪರಂಜ್ಯೋತಿ ಉರಿಲಿಂಗದೇವ ನೀನಯ್ಯಾ.
--------------
ಉರಿಲಿಂಗದೇವ
ಅವರಾರ ಪರಿಯಲ್ಲ ಎಮ್ಮ ನಲ್ಲನು. ವಿಶ್ವವೆಲ್ಲವು ಸತಿಯರು, ಸೋಜಿಗದ ಪುರುಷನು. ಅವರವರ ಪರಿಯಲ್ಲೆ ಅವರವರ ನೆರೆವನು, ಅವರವರಿಗವರಂತೆ ಸುಖಮಯನು ನೋಡಾ. ಅವರೆಲ್ಲರ ವಂಚಿಸಿ ಎನ್ನನಗಲದ ಪರಿಯ ನೋಡಾ, ಕೆಳದಿ. ನೀನೊಳ್ಳಿದಳಾದಡೆ ಮಹಾಮಂತ್ರವ ಜಪಿಸು, ನಿನ್ನನಗಲನು, ನಿನ್ನಾಣೆ, ಉರಿಲಿಂಗದೇವ, ತನ್ನಾಣೆ ಕೆಳದಿ.
--------------
ಉರಿಲಿಂಗದೇವ
ಅನಂತ ವೇದಶಾಸ್ತ್ರಾಗಮ ಪುರಾಣ ತರ್ಕ ತಂತ್ರಗಳನು ಆತ್ಮ ಮಾಡಿದನಲ್ಲದೆ, ಆತ್ಮನನವು ಮಾಡಿದುದಿಲ್ಲ. ಎನ್ನ ಅಂತರಂಗದ ಅರಿವಿನ ಮೂರ್ತಿ ಉರಿಲಿಂಗದೇವರು ಸಂಕಲ್ಪಿಸಿ ಆಗೆಂದಡಾದವು.
--------------
ಉರಿಲಿಂಗದೇವ
ಅರಿದೊಡೆ ಶರಣ, ಮರೆದೊಡೆ ಮಾನವ. ಪಾತಕನು, ಹೊಲೆಯನು, ನಾನೇತಕ್ಕೆ ಬಾತೇ ? ಹೊತ್ತಿಂಗೊಂದೊಂದು ಪರಿಯ ಗೋಸುಂಬೆಯಂತೆ ಈಶನ ಶರಣರ ಕಂಡುದಾಸೀನವ ಮಾಡುವ ದಾಸೋಹವನರಿಯದ ದೂಷಕನು ನಾನಯ್ಯ. ಏಸು ಬುದ್ಧಿಯ ಹೇಳಿ ಬೇಸತ್ತೆನೀ ಮನಕೆ, ಈಶ ನೀ ಸಲಹಯ್ಯಾ, ಉರಿಲಿಂಗತಂದೆ.
--------------
ಉರಿಲಿಂಗದೇವ
ಅಂಗದ ಮೇಲೆ ಲಿಂಗದೇವನಿದ್ದಂತೆ, ಇತರ ಸ್ಥಾವರಲಿಂಗಕ್ಕೆ ಹೋಗಿ ಹೋಗಿ, ದೇವರ ಕಂಡೆನೆಂದು ನಲಿದು ಉಲಿವುತಿಪ್ಪ ಸಲೆ ಮನುಜರುಗಳಿಗೆ, ಉಪದೇಶವ ಮಾಡುವ ಗುರುವಿಂಗೆ, ಪುಣ್ಯದ ಬಟ್ಟೆಯ ಕೊಡ ಉರಿಲಿಂಗ ತಂದೆ.
--------------
ಉರಿಲಿಂಗದೇವ
ಅಷ್ಟವಿಧಾರ್ಚನೆ, ಷೋಡಶೋಪಚಾರ ಬಾಹ್ಯಕ್ರೀಯೆಂಬ ಭಾವಭ್ರಮಿತರ ಮಾತ ಕೇಳಲಾಗದು. ಧನವುಳ್ಳಾತನು ಅಷ್ಟಸಂಪದದೈಶ್ವರ್ಯವ ಭೋಗಿಸುವನಲ್ಲದೆ, ಧನಹೀನ ದಾರಿದ್ರನೇನ ಭೋಗಿಸುವನೋ ? ಲಿಂಗವೂ ಪ್ರಾಣವೂ ಅವಿರಳಾತ್ಮಕವಾಗಿ ಉತ್ಕೃಷ್ಟವಾಗಿದ್ದಲ್ಲಿ, ಆ ಅಮಳಸೋಂಕು ತುಳುಂಕಿ, ಬಾಹ್ಯಕ್ರೀಯಾಗಿ ಕರಸ್ಥಲಕ್ಕೆ ಬಂದುದೈಸಲ್ಲದೆ, ಅದು ಅಂತರಂಗವಲ್ಲ, ಬಹಿರಂಗವಲ್ಲ ನಮ್ಮ ಉರಿಲಿಂಗದೇವರು.
--------------
ಉರಿಲಿಂಗದೇವ