ಅಥವಾ
(6) (3) (3) (1) (2) (0) (0) (0) (3) (0) (0) (2) (0) (0) ಅಂ (2) ಅಃ (2) (6) (0) (1) (0) (0) (0) (0) (0) (0) (0) (0) (1) (0) (0) (0) (1) (0) (0) (0) (10) (0) (0) (0) (0) (3) (0) (0) (0) (2) (0) (2) (0) (1) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಶ್ರುತಿಭ್ರಾಂತು ನಿರಸನ:ಶಿವಾಗಮಪ್ರತಿಷೆ*, ಕುಲಾಭಿಮಾನ ನಿರಸನ:ಶಿವಕುಲಪ್ರತಿಷೆ*, ಅನ್ಯದೈವನಿರಸನ:ಏಕೋದೇವಪ್ರತಿಷೆ*, ಸ್ಥಾವರನಿರಸನ:ಏಕಲಿಂಗನಿಷಾ*ಪ್ರತಿ[ಷೆ*]. ಪರಮತತಿರಸ್ಕಾರ ಸ್ವಮತಸ್ಥಾಪನದಿಂ ಮಾಹೇಶ್ವರನ ನಿಜಸ್ಥಲ. ಅನಂತ ವೇದಶಾಸ್ತ್ರಪುರಾಣಾಗಮತರ್ಕಂಗಳ ಆತ್ಮ ಮಾಡಿದನಲ್ಲದೆ ಆತ್ಮನನವು ಮಾಡಿದುದಿಲ್ಲ. ಎನ್ನಂತರಂಗದ ಅರಿವಿನ ಮೂರ್ತಿಯಾಗಿ ಎನ್ನ ಉರಿಲಿಂಗದೇವರು ಸಂಕಲ್ಪಿಸಿ ಆಗೆಂದಡಾದವು.
--------------
ಉರಿಲಿಂಗದೇವ
ಶಿವಶಿವಾ ಮಹಾದೇವಾ, ಉರಿಲಿಂಗದೇವನೆ ಚೆಲುವನು. ಶಿವಶಿವಾ ಮಹಾದೇವಾ, ಉರಿಲಿಂಗದೇವನೆ ಗುರುವನು. ಶಿವಶಿವಾ ಮಹಾದೇವಾ, ಉರಿಲಿಂಗದೇವನೆ ಹರಿಯನು. ಶಿವಶಿವಾ ಮಹಾದೇವಾ, ಉರಿಲಿಂಗದೇವನೆ ಪುರುಷನು. ಶಿವಶಿವಾ ಮಹಾದೇವಾ, ಉರಿಲಿಂಗದೇವನೆ ದೇವನು.
--------------
ಉರಿಲಿಂಗದೇವ