ಅಥವಾ
(6) (3) (3) (1) (2) (0) (0) (0) (3) (0) (0) (2) (0) (0) ಅಂ (2) ಅಃ (2) (6) (0) (1) (0) (0) (0) (0) (0) (0) (0) (0) (1) (0) (0) (0) (1) (0) (0) (0) (10) (0) (0) (0) (0) (3) (0) (0) (0) (2) (0) (2) (0) (1) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಕಾಮನ ಕೊಂದು ಪಟ್ಟಕ್ಕೆ ನಿಂದ ಕಾಮರಾಜರಾಜನು, ರಾಜಾದ್ಥಿರಾಜನು. ಗಂಡರನೆಲ್ಲರ ಹೆಂಡಿರ ಮಾಡಿ ನೆರೆವ ವೈಶಿಕ, ಕಾಮಿನೀ ಕೇಳಾ, ಇಂತಪ್ಪ ಕಾಮಿ ಎನಗತಿ ಕಾಮಿಸಿ ನೆರೆದು ಕಾಮಸಿದ್ಧಿಯನೀವನು ಉರಿಲಿಂಗದೇವನು.
--------------
ಉರಿಲಿಂಗದೇವ
ಕಾಮಾ, ನಿನ್ನ ಬಿಲ್ಲಾಳುತನುವನು, ಎಸುಗೆಯನು ನೋಡುವೆನು. ಕೇಳೆಲವೊ, ಕುಸುಮಶರವನು ತೊಡು ನೀನು, ಏಸು, ನಿನ್ನೆಸುಗೆಯ ನೋಡುವೆನು ಕೇಳಾ. ಎನಗೂ ಉರಿಲಿಂಗದೇವಗೂ ತೊಟ್ಟೆಸು, ಎಸಲು ನೀ ಬಿಲ್ಲಾಳಹೆಯಾ ಕಾಮಾ.
--------------
ಉರಿಲಿಂಗದೇವ
ಕಾಯಕ್ಕೆ ಕಾಹ ಕೊಡುವರಲ್ಲದೆ ಮನಕ್ಕೆ ಕಾಹ ಕೊಡುವರೆ ಕೆಳದಿ ? ಇಂತಪ್ಪ ನಲ್ಲನನೆಲ್ಲಿಯೂ ಕಾಣೆ, ಇಂತಪ್ಪ ಪುರುಷನನೆಲ್ಲಿಯೂ ಕಾಣೆ, ಇಂತಪ್ಪ ಚೋದ್ಯವನೆಲ್ಲಿಯೂ ಕಾಣೆ, ಸದ್ಗುಣದ ಕಾಹನು ಮನಕ್ಕೆ ಕೊಟ್ಟನು, ಉರಿಲಿಂಗದೇವನು, ಅತಿಚೋದ್ಯವೆನಗೆ.
--------------
ಉರಿಲಿಂಗದೇವ
ಕಾಯಕ್ಕೆ ಕಾಯವಾಗಿ ಪ್ರಾಣಕ್ಕೆ ಪ್ರಾಣವಾಗಿ ಮನಕ್ಕೆ ಮನವಾಗಿ ನೆರೆವ ನೋಡೆಲಗವ್ವಾ. ನಲ್ಲನ ಬೇಟದ ಕೂಟದ ಸುಖವನೇನೆಂದು ಬಣ್ಣಿಪೆ, ಮಹಾಸುಖವ ! ನಲ್ಲನ ನೋಟದ ಕೂಟದನುವನೇನೆಂದುಪಮಿಸುವೆ, ಮಹಾಘನವ ! ತಾನು ತಾನೆಂದು ವಿವರಿಸಬಾರದಂತೆ ನೆರೆದನು ನೋಡಾ, ಉರಿಲಿಂಗದೇವನು.
--------------
ಉರಿಲಿಂಗದೇವ
ಕಾಮಿನಿ ಕಾಮನಿಗೆ ಎರಡು ಗುರಿಯೆಂದು ಸರಳೆಸುಗೆಯ ಮಾಡುವೆ. ಕಾಮನಲ್ಲೊ [ಅ]ಲ್ಲೊ ಬಿಲ್ಲಾಳೆ ! ಎಸಲು ಎರಡೊಂದಪ್ಪುದು ಗಡ, ಕಾಮಾ ಎನಗೆ ಉರಿಲಿಂಗದೇವಗೆ ತೊಟ್ಟೆಸು, ಎರಡೊಂದಾದಡೆ ಬಿಲ್ಲಾಳಹೆ, ಎಸೆಯೊ ನೀನು.
--------------
ಉರಿಲಿಂಗದೇವ
ಕೂರ್ತಾಗ ಭಕ್ತ, ಮುನಿದಾಗ ಮಾನವ, ಪಾತಕ ನಾನೇತಕ್ಕೆ ಬಾತೆ ? ಗೋಸುಂಬೆಯಂತೆ ಎನ್ನ ಮನ ಗಳಿಗೆಗೊಂದು ಪರಿ ! ಈಶ್ವರಾ, ನಿಮ್ಮ ಭಕ್ತರ ಉದಾಸೀನವ ಮಾಡಿ ದಾಸೋಹವಿಲ್ಲದ ಅತಿದೂಷಕ ದ್ರೋಹಿ, ನಾನಯ್ಯಾ ! ಬೇಸತ್ತೆನೀ ಮನಕ್ಕೆ, ಏಸು ಬುದ್ಧಿಯ ಹೇಳಿದಡೂ ಕೇಳುದು, ಈಶಾ, ಸಂತೈಸಯ್ಯಾ, ಉರಿಲಿಂಗದೇವಾ.
--------------
ಉರಿಲಿಂಗದೇವ