ಅಥವಾ
(6) (3) (3) (1) (2) (0) (0) (0) (3) (0) (0) (2) (0) (0) ಅಂ (2) ಅಃ (2) (6) (0) (1) (0) (0) (0) (0) (0) (0) (0) (0) (1) (0) (0) (0) (1) (0) (0) (0) (10) (0) (0) (0) (0) (3) (0) (0) (0) (2) (0) (2) (0) (1) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಮಹಾಬೆಳಗಿನ ಲಿಂಗವ ಕೈಯಲ್ಲಿ ಕೊಟ್ಟಡೆ, ಕೊರಳಲ್ಲಿ ಕಟ್ಟಿಕೊಳ್ಳಲೇಕೆ ? ನೋಡುವ ಕಣ್ಣು ಮುಚ್ಚಿದ ಮತ್ತೆ, ತನಗೆ ಎಡೆಯಾಟವುಂಟೆ ? ಲಿಂಗವ ಹಿಂಗದೆ ಅಂಗೈಯಲ್ಲಿ ಕೊಟ್ಟ ಮತ್ತೆ, ಚಿತ್ತದಲ್ಲಿ ಹಿಂಗದಿರಬೇಕು. ಉರಿಲಿಂಗತಂದೆಯ ಸಿರಿಯ ಭಾಷೆ.
--------------
ಉರಿಲಿಂಗದೇವ
ಮಾನಸದಲ್ಲಿಪ್ಪನು, ಬುದ್ಧಿಯಲ್ಲಿಗೆ ಹೋಹನು. ಚಿತ್ತದಲ್ಲಿ ನೆಲೆ ಎಮ್ಮ ನಲ್ಲಗೆ, ಕೇಳವ್ವಾ, ಕೆಳದಿ. ಅಹಂಕಾರ ಕೂಡಿ ಅಹಂಕಾರದ ನಲ್ಲನ ಪರಿಕರ ವಿಪರೀತ ಅಹಂಕಾರ. ಅಹಂಕಾರರೀ ಮತ್ತೆ ಯಾರಲ್ಲಿ ಕೂಡಿ ಸುಖಿಸುವೆ ? ಇವರೆಲ್ಲರ ಮುಂದೆ ತನ್ನ ಹಿಡಿದು ನೆರೆದಡೆ ಅವರೆನ್ನನೇಗೆಯ್ವರು ಉರಿಲಿಂಗದೇವಾ.
--------------
ಉರಿಲಿಂಗದೇವ
ಮಂಗಳಮಯಲಿಂಗವ ಮನ ಹಿಂಗದೆ ಸುಸಂಗಿಯಾಗಿ, ಮಹಾಲಿಂಗದ ಪ್ರಸಂಗಿಯಾಗಿ ಇಪ್ಪಾತನ ಅಂಗವೆನಗೆ ಮಂಗಳತರಂಗ. ಆತನ ಪ್ರಸಂಗದಲ್ಲಿರಿಸಾ, ಉರಿಲಿಂಗದೇವಾ !
--------------
ಉರಿಲಿಂಗದೇವ