ಜ ಪದದಿಂದ ಪ್ರಾರಂಭವಾಗುವ ವಚನಗಳು:
ಜಡೆಯೆಡೆಯಾಯಿತ್ತು, ಬೋಳೆಡೆಯಾಯಿತ್ತು, ಲೋಚೆಡೆಯಾಯಿತ್ತು.ನಡೆಯ ಮುನ್ನಿನ, ನುಡಿಯ ಮುನ್ನಿನಒಡಲಗುಣಂಗಳಾರಿಗೂ ಬಿಡವು. ಎಡೆಯಣ ತಪವೇಕೆ ?ಬಡಸಂಸಾರ ಸಾಲದೇ, ಸೊಡ್ಡಳದೇವಾ ?
ಜವನಿದ್ದಾನೆ, ಜವನ ಪಟ್ಟಣವಿದೆ,ಮಾಮರನಿದೆ, ಹೂಮರನಿದೆ, ತೋಮರನಿದೆ ನೋಡಯ್ಯಾ.ಆವ ಕಾರ್ಯವಾದಡೂ ಮಾಡು, ದೇವ ಕಾರ್ಯವ ಮಾಡು.ಸಾವ ಕಾರ್ಯ ತಪ್ಪದು, ನೀ ಕೆಡಬೇಡ ಕಂಡಾ.ಬೇಗಬೇಗ ನಂಬಿ ಪೂಜಿಸು, ದೇವ ಸೊಡ್ಡಳನ, ಮರುಳೆ.