ಅಥವಾ
(0) (3) (0) (0) (0) (0) (0) (0) (0) (0) (0) (0) (0) (0) ಅಂ (0) ಅಃ (0) (3) (0) (0) (0) (0) (2) (0) (0) (0) (0) (0) (0) (0) (0) (0) (1) (0) (0) (0) (2) (1) (0) (0) (1) (1) (0) (0) (0) (0) (1) (1) (0) (0) (2) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಚಂದ್ರನ ಸೂಡುವವ ಲಿಂಗನೊ ಅಂಗನೊ? ಸುಸಂಗದ ಮುಕುಟದಲ್ಲಿ ಗಂಗೆಯ ಧರಿಸುವವ ಭಂಗನೊ ಆಭಂಗನೊ? ಭಕ್ತರಂಗದಿಚ್ಛೆಯಲ್ಲಿ ಅಡಗುವವ ಬಂಧನೊ ನಿರ್ಬಂಧನೊ? ಇದು ನನಗೆ ಸಂದೇಹವಾಗಿದೆ. ತ್ರೈಭುವನಂಗಳಿಗೆ ಚೋದ್ಯ ನಿಮ್ಮ ಪರಿ, ಅಂಬಿಕಾವರ ತ್ರಿಪುರಾಂತಕಲಿಂಗವೆ.
--------------
ಕಿನ್ನರಿ ಬ್ರಹ್ಮಯ್ಯ
ಚನಿಪಾಲ ಚಿನ್ನದ ಹರಿವಾಣದಲ್ಲಿ ಭೋಗಿಪುದು ಭೂಷಣವಲ್ಲದೆ, ಮಣ್ಣ ಹರಿವಾಣದಲ್ಲಿ ಭೂಷಣವೆ? ತಾ ಮಾಳ್ಪ ಶಿವಲಿಂಗ ಪೂಜೆಗೆ ಕಾಯ ಪವಿತ್ರವಲ್ಲದೆ, ಅಪವಿತ್ರವೆಂತೊ ತ್ರಿಪುರಾಂತಕಲಿಂಗವೆ?
--------------
ಕಿನ್ನರಿ ಬ್ರಹ್ಮಯ್ಯ