ಅಥವಾ
(6) (3) (3) (1) (2) (0) (0) (0) (3) (0) (0) (2) (0) (0) ಅಂ (2) ಅಃ (2) (6) (0) (1) (0) (0) (0) (0) (0) (0) (0) (0) (1) (0) (0) (0) (1) (0) (0) (0) (10) (0) (0) (0) (0) (3) (0) (0) (0) (2) (0) (2) (0) (1) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಲೋಕದಂತೆ ಬಾರರು, ಲೋಕದಂತೆ ಇರರು, ಲೋಕದಂತೆ ಹೋಗರು, ನೋಡಯ್ಯ. ಪುಣ್ಯದಂತೆ ಬಪ್ಪರು, ಜ್ಞಾನದಂತೆ ಇಪ್ಪರು, ಮುಕ್ತಿಯಂತೆ ಹೋಹರು, ನೋಡಯ್ಯಾ. ಉರಿಲಿಂಗದೇವಾ, ನಿಮ್ಮ ಶರಣರು ಉಪಮಾತೀತರಾಗಿ ಉಪಮಿಸಬಾರದು.
--------------
ಉರಿಲಿಂಗದೇವ
ಲಿಂಗ ಕರಸ್ಥಲಕ್ಕೆ ಬಂದ ಮತ್ತೆ ಕಂಗಳು ತುಂಬಿವರಿಯದಿರ್ದಡೆ, ಆ ಲಿಂಗಪೂಜೆಯಾಕೆ ? ಲಿಂಗ ಜಿಹ್ವೆಯಲ್ಲಿ ನೆನೆವಾಗ ಅಂಗವ ಮರೆಯದಿರ್ದಡೆ ಆ ಲಿಂಗದ ನೆನಹದೇಕೆ ? ಲಿಂಗವಾರ್ತೆಯ ಕಿವಿತುಂಬ ಕೇಳಿ ಸರ್ವಾಂಗ ಝೊಂಪಿಸಿ ಮನಮಗ್ನವಾಗಿ ಇರದಿರ್ದಡೆ, ಉರಿಲಿಂಗತಂದೆಯ ಸಿರಿಯ ನೆನೆಯಲೇಕೆ ?
--------------
ಉರಿಲಿಂಗದೇವ