ಅಥವಾ
(6) (3) (3) (1) (2) (0) (0) (0) (3) (0) (0) (2) (0) (0) ಅಂ (2) ಅಃ (2) (6) (0) (1) (0) (0) (0) (0) (0) (0) (0) (0) (1) (0) (0) (0) (1) (0) (0) (0) (10) (0) (0) (0) (0) (3) (0) (0) (0) (2) (0) (2) (0) (1) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಸಕಲಶ್ರುತಿಗಳ ಮುಂದಿರ್ದವರ ಸವಿಮಾತಿನ ವಶಕ್ಕೆ ಸಿಕ್ಕದೆ ಅತೀತವಾದ ವಸ್ತುವ ಬೇಡಿಕೊಳ್ಳಿರೆ. ಸಕಲಾತ್ಮರ ಮುಂದಿರ್ದವರ ತರ್ಕಕ್ಕೆ ಉರಿಲಿಂಗವಾಗಿ ಸಿಕ್ಕದೆ ಅತೀತವಾದ ವಸ್ತುವ ಬೇಡಿಕೊಳ್ಳಿರೆ. ಇಂತು ಸಕಲಾತ್ಮರ ಹೊಂದಿಯೂ ಹೊಂದದೆ ನಿತ್ಯಸಿಂಹಾಸನದ ಮೇಲೆ ನಿತ್ಯನಾಗಿರ್ದ ನಮ್ಮ ಉರಿಲಿಂಗದೇವನ ಬೇಡಿಕೊಳ್ಳಿರೆ.
--------------
ಉರಿಲಿಂಗದೇವ