ಅಥವಾ

ಒಟ್ಟು 85 ಕಡೆಗಳಲ್ಲಿ , 33 ವಚನಕಾರರು , 81 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತನ್ನಂಗವ ತಾ ಬಡಿದು, ಇದಿರಿನಲ್ಲಿ ನೋವ ಕೇಳುವನಂತೆ, ತನ್ನ ದ್ರವ್ಯ ತಾನಿಕ್ಕಿ, ಪರರುವ ಕೈಯಲ್ಲಿ ಜರೆಯಿಸಿಕೊಂಬವನಂತೆ. ವರ್ಮವನರಿಯದವನ ಸುಮ್ಮಾನ, ಹೆಮ್ಮೆಗೆ ಹುಯ್ಯಲಿನಲ್ಲಿ ಸಿಕ್ಕಿ, ತನ್ನ ತಾನರಿಸಿಕೊಂಡಂತಾಯಿತ್ತು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಕಳಬಂದ ಕಳ್ಳ ಬೆಳ್ಳನ ಕಾಲದೆಸೆಯಲ್ಲಿ, ಮರೆದು ನಿದ್ರೆಗೈದ ನೋಡಾ. ತೆರನನರಿಯದೆ ಎಚ್ಚತ್ತು, ಮನೆಯ ಒಡೆಯನೆಂದಡೆ ಮೆಚ್ಚುವರೆ ? ಅದು ಕಾರಣದಲ್ಲಿ, ಇರಿವ ಮನ ಪಾಪಕ್ಕೆ ಸಿಕ್ಕಿ, ಪಾಷಂಡಿಗಳಪ್ಪ ಪಾಶವ ಹೊತ್ತು ತಿರುಗುವ ವೇಷಧಾರಿಗಳೆಲ್ಲರೂ ಜಂಗಮವಲ್ಲದೆ, ಜ್ಞಾನಜಂಗಮವಲ್ಲ. ಕರದಲ್ಲಿ ಖರ್ಪರವಿಲ್ಲ, ಕೈಯಲ್ಲಿ ಕಟ್ಟಿಗೆಯಿಲ್ಲ, ಕರಣದಲ್ಲಿ ಮುದ್ರಿಕೆಯಿಲ್ಲ, ಶಿರದಲ್ಲಿ ಜಟಾಬಂಧವಿಲ್ಲ. ಕಕ್ಷೆಯಲ್ಲಿ ಭಸ್ಮಘಟಿಕೆಯಿಲ್ಲ. ಇವೆಲ್ಲ ರುದ್ರನ ವೇಷವ ಹೊತ್ತು, ಗ್ರಾಸಕ್ಕೆ ತಿರುಗುವ ಘಾತಕರೆಲ್ಲರೂ ಜಂಗಮವೆ ? ಮನದಾಸೆಯ ಬಿಟ್ಟು, ರೋಷವ ಕಿತ್ತು, ಮಹದಾಶ್ರಿತರಾಗಿ ನಾನೆಂಬುದ ತಾನರಿದು, ನಾ ನೀನೆಂಬುಭಯವನೇನೆಂದರಿಯದೆ, ತಾನು ತಾನಾದ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಜಗದಗಲದ ಮಾಯಾಜಾಲವ ಹಿಡಿದು ಕಾಲನೆಂಬ ಜಾಲಗಾರ ಜಾಲವ ಬೀಸಿದ ನೋಡಯ್ಯ. ಆ ಜಾಲಕ್ಕೆ ಹೊರಗಾದವರನೊಬ್ಬರನೂ ಕಾಣೆ. ಬಲ್ಲಬಲ್ಲಿದರೆಂಬುವರೆಲ್ಲರ ಬಲೆಯ ಕಲ್ಲಿಯೊಳಗೆ ತುಂಬಿದ ಕಾಲ. ಆ ಕಾಲನ ಬಲೆಯೊಳಗೆ ಸಿಕ್ಕಿ ಬೀಳುವೆಗೊಳುತಿದೆ ಜಗವೆಲ್ಲ. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು, ತನ್ನವರಿಗೆ ತಾ ಮೇಲಾರೈಕೆಯಾಗಿಹನು.
--------------
ಸ್ವತಂತ್ರ ಸಿದ್ಧಲಿಂಗ
ಶಂಕೆಯ ಹರಿದು ನುಡಿದೆಹೆನೆಂದಡೆ ಸಕಲಗುಣಂಗಳ ಸಂಕೇತದಲ್ಲಿದ್ದೆಹೆನೆ ? ಆತ್ಮನ ಬಿಂಕವ ಹರಿದೆಹೆನೆಂದಡೆ ಚಲುರ್ವಿಧಫಲಪದದ ಅಂಕದಲ್ಲಿ ಸಿಕ್ಕಿ ಇದ್ದೆಹೆನೆ ? ಶಂಕೆಯ ಸೂತಕ ಇನ್ನೆಂದಿಗೆ ಹರಿವುದು, ಕಾಮಧೂಮ ಧೂಳೇಶ್ವರಾ ?
--------------
ಮಾದಾರ ಧೂಳಯ್ಯ
ಬಲುಗೈಯನೊಡನೆ ಹಗೆವಡೆದು ಕೊಲೆಗಂಜಲೇಕೆ? ಭವಸಾಗರದ ಬಲೆಗೆ ಸಿಕ್ಕಿ, ನಿರ್ಗುಣದ ಒಲುಮೆಯ ಮಾತ ನಟಿಸಲೇಕೆ? ತ್ರಾಸಿಂಗೆ ಒಲವರವುಂಟೆ? ಭಾಷೆಗೆ ನುಡಿ ಎರಡುಂಟೆ? ಪರಮೇಶ್ವರನನರಿದವಂಗೆ ಜಗದಾಸೆಯ ಮುಖವಿಲ್ಲವೆಂದೆ. ಅವ ಈಷಣತ್ರಯಕ್ಕೆ ಹೊರಗೆಂದೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ತತ್ತಿಯೊಳಗಣ ಪಕ್ಷಿಯಂತೆ, ಎತ್ತಲೆಂದರಿಯದೆ ಅಜ್ಞಾನದ ಕತ್ತಲೆಯೊಳಗೆ ಸಿಕ್ಕಿ ದುಃಖಗೊಳುತ್ತಿಹರೆಲ್ಲರು. ದಿವಾ ರಾತ್ರಿ ಇಂತು ದುಃಖವನನುಭವಿಸುತ್ತ, ಕಾಯುವ ಹೊತ್ತು ಬಳಲುವ ಜೀವರುಗಳು, ತಾವಾರೆಂದರಿಯದೆ ನೋವುತ್ತ ಬೇವುತ್ತ ಸಾವುತ್ತಿರ್ಪರವರಿಗಿನ್ನೆಂದಿಂಗೆ ಮುಕ್ತಿಯಹುದು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ?.
--------------
ಸ್ವತಂತ್ರ ಸಿದ್ಧಲಿಂಗ
ತನುವಿನ ಮೇಲಿಪ್ಪ ಲಿಂಗಕ್ಕೆ, ಅನವರತ ಬಿಡದೆ ನೆನಹಿರಬೇಕೆಂಬರು. ಅಂಗದ ಮೇಲಣ ಲಿಂಗವ, ಪ್ರಾಣಸಂಬಂಧವ ಮಾಡುವ ಪರಿ ಇನ್ನೆಂತೊ ? ಇದರಂದವನರಿಯದೆ ತ್ರಿಭಂಗಿಯಲ್ಲಿ ಸಿಕ್ಕಿ, ಬೆಂದವರಿಗೇಕೆ ಲಿಂಗದ ಸುದ್ದಿ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಯುಗಜುಗಂಗಳು ಮಹಾಪ್ರಳಯವಾದಲ್ಲಿ ಉಳಿಯಿತ್ತೊಂದು ಮಲಯಜದ ಬೇರು. ಬೇರಿನಲ್ಲಿ ಮಣ್ಣು ಸಿಕ್ಕಿ, ಮಣ್ಣಿನ ಸಾರಕ್ಕೆ ಬೇರು ಚಿಗಿತು, ಮೂರು ಕೊನರಾಯಿತ್ತು. ಮೂರು ಕೊನರು ಬಲಿದು, ಐದು, ಕೊಂಬಾಯಿತ್ತು. ಐದು ಕೊಂಬಿನ ತುದಿಯಲ್ಲಿ ಆರೆಲೆ ಚಿಗಿತು, ಆರೆಲೆಯ ಅಡಿಯಲ್ಲಿ ಮೂರು ಹೂದೋರಿತ್ತು. ಹೂ ಮೀರಿ ಬಲಿವುದಕ್ಕೆ ಮೊದಲೆ, ಮರ ಬಲಿದು ಹಣ್ಣಾಯಿತ್ತು. ಹಣ್ಣಿನ ಬೀಜ ರಸವನುಂಡು, ಕಾದಿದ ಅಣ್ಣಂಗೆ ಇಲ್ಲವಾಯಿತ್ತು, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗವು ನಿಃಪತಿಯನೈದಿದ ಕಾರಣ.
--------------
ಸಗರದ ಬೊಮ್ಮಣ್ಣ
ಅಪಮಾನಿಗೇಕೆ ಸೀರೆ? ವೀರಗೇಕೆ ಕೈದು ? ಧೀರಗೇಕೆ ಮಂತ್ರ? ಇವರಾಗುಹೋಗನರಿಯದೆ, ಬಾಧೆಗೆ ಸಿಕ್ಕಿ ನಾದವ ಲಾಲಿಸುವ ನಾಗಫಣಿಯಂತೆ ಆಡುತ್ತಿದ್ದು, ಹೋದ ಹೊಲಬೇಕೆಂದ ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ವಾಚಕ ಚಪಳತ್ವದಿಂದ ಮಾತನಾಡಿದಡೇನು, ತ್ರಿವಿಧದ ಆಸೆ ಬಿಡದನ್ನಕ್ಕ ? ರೋಷದ ಪಾಶ ಕೀಳದನ್ನಕ್ಕ ? ಮಾತೆಲ್ಲವೂ ಮೂರರಾಸೆಯಲ್ಲಿ ಸಿಕ್ಕಿ, ರೋಷದ ಪಾಶದಲ್ಲಿ ಕಟ್ಟುವಡೆದು, ಮತ್ತೇತರ ಭಾಷೆಯ ನೀತಿ ? ಹೋತಿನ ಕೊರಳ ಮೊಲೆಯ ಆಸೆ ಮಾಡಿ ಉಂಡಡೆ, ಅಲ್ಲೇತರ ಸುಖ ? ಮತ್ತೀ ಗುಣದಾಸೆ ಹರಿದು ನಿಂದಡೆ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಕಣ್ಣಿನಲ್ಲಿ ಕಂಡು ಮನದಲ್ಲಿ ಬಯಸಿ ಬಣ್ಣಗುಂದಿ ಬಳಲುವರಯ್ಯ. ಬಂದರೆ ಹೆಚ್ಚಿ, ಬಾರದಿದ್ದರೆ ಕುಂದಲೇತಕೆ? ಕುಂದಿದರೆ ಬಪ್ಪುದೆ? ಹಿರಿದು ಜರಿದು ಹೇಡಿಗೊಂಡು ಕರಗಿ ಕೊರಗಿ ಕೋಡಿವರಿದು[ದೆಂದು] ನಿಂದುರಿದು ಕಡುನೊಂದು ಭವಬಡುತ್ತಿಪ್ಪರಯ್ಯ. ಒಂದು ನಿಮಿಷ ನಿಮಿಷಾರ್ಧ ನಿಮ್ಮ ನೆನಹಿಲ್ಲ ನೋಡಾ! ಆಶೆಯೆಂಬ ಮಾಯಾಪಾಶದೊಳಗೆ ಸಿಕ್ಕಿ ದೋಷ ದುರ್ಗುಣದಿಂದ ಬಿದ್ದುರುಳುವ ಪಾಶಬದ್ಧರ ಈಶ ಲಾಂಛನಧಾರಿಗಳೆಂತೆಂಬೆನಯ್ಯಾ?, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಯ್ಯಾ, ಬ್ರಹ್ಮದಲ್ಲಿ ಅಯ್ಯಾ ನೀನು ಅ್ಕಶಯ ಜ್ಯೋತಿರ್ಮಯನು. ಆನಂದ ಸ್ಥಾನದಲ್ಲಿ ಅಯ್ಯಾ ನೀನು ಅತಿಶಯ ನಿತ್ಯಮಯನು. ಬಾಹ್ಯಾಭ್ಯಂತರದಲ್ಲಿ ಪರಿಪೂರ್ಣನು. ನಿನ್ನಾಧಿಕ್ಯವನರಿಯಲ್ಕೆ ನಿಗಮಕ್ಕಭೇದ್ಯ ಗುರುವಿನ ಕರುಣದಿಂದ ಎನ್ನ ಕರಸ್ಥಲದಲ್ಲಿ ಸಿಕ್ಕಿ ಒಳಗಾದೆ ಶಿವನ ಮಹಾಲಿಂಗ ಕಪಿಲಸಿದ್ಧ ಮ್ಲಕಾರ್ಜುನಾ.
--------------
ಸಿದ್ಧರಾಮೇಶ್ವರ
ಹೆರುವ ಹೆಂಗೂಸು, ಕೂಸು ಸಿಕ್ಕಿ ತನ್ನ ಉಡಿಯ ತೋರುವಂತೆ, ಅದು ಕೂಸಿನ ಆಸೆಯೋ ? ತನ್ನ ಅಪಮಾನದಾಸೆಯೋ ? ತನ್ನ ಅಸುವಿನ ಆಸೆಯೋ ? ಮಾತ ಕಲಿತು, ವೇಷವ ತೋರಿ, ಘಾತುಕತನದಲ್ಲಿ ಉಂಬ ಪಾಶಧಾರಿಗಳಿಗೇಕೆ ನಿರ್ಜಾತನ ಮಾತು ? ಅದು ನೀತಿಯಲ್ಲ, ಐಘಟದೂರ ರಾಮೇಶ್ವರಲಿಂಗ ಅವರ ಬಲ್ಲನಾಗಿ
--------------
ಮೆರೆಮಿಂಡಯ್ಯ
ವಾಯು ಬಯಲೆಂದಡೆ ತಿರುಗುವ ಆಲವಟ್ಟದಲ್ಲಿ ಸಿಕ್ಕಿ ಕುರುಹುಗೊಂಬುತಿದ್ದಿತ್ತು. ಇಂತೀ ಕುರುಹಿಲ್ಲದೆ ಅರಿವ ಪರಿಯಿನ್ನೆಂತೊ ? ಅರಿವ ಆತ್ಮ, ನಿಂದು ನುಡಿವಂಗದ ಕುರುಹಿನಲ್ಲಿದ್ದು ಮತ್ತೆ ತತ್ವವಾದ ಪರಿಯಿನ್ನೆಂತೊ ? ತೋರುವ ತೋರಿಕೆ ಅಂಗಮಯವಾದ ಮತ್ತೆ ಕುರುಹ ಹಿಂಗಿ ಅರಿವ ಪರಿಯಿನ್ನೆಂತೊ ? ಮೀರಿ ಕಾಬುದು ಮೂರು ತತ್ವದಿಂದ ಆಚೆಯಲ್ಲಿ. ಅಷ್ಟನರಿವ ತನಕ ಇಷ್ಟನರಿಯಬೇಕು, ಸದಾಶಿವಮೂರ್ತಿಲಿಂಗವನರಿವುದಕ್ಕೆ.
--------------
ಅರಿವಿನ ಮಾರಿತಂದೆ
ಘಟ ಪೃಥ್ವಿಯಲ್ಲಿ ಸಿಕ್ಕಿ, ಆತ್ಮ ಭವದುಃಖಕ್ಕೊಳಗಾಗಿ ತಾನರಿವ ಲಿಂಗಕ್ಕೆ ಎಲ್ಲಿ ಆಶ್ರಯವಾಯಿತ್ತು ? ಉಭಯಗೂಡಿ ಪ್ರಾಣಲಿಂಗಯೋಗ ಏಣಾಂಕಧರ ಸೋಮೇಶ್ವರಲಿಂಗದಲ್ಲಿ.
--------------
ಬಿಬ್ಬಿ ಬಾಚಯ್ಯ
ಇನ್ನಷ್ಟು ... -->