ಅಥವಾ

ಒಟ್ಟು 35 ಕಡೆಗಳಲ್ಲಿ , 18 ವಚನಕಾರರು , 33 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಸಳಕ್ಷರವ ಕಂಡು ಎಸಳ ಬಗೆಯ ತಿಳಿದು ನಿಜಸುಖಿಯಾದೆನಯ್ಯ ನಾನು. ಇಷ್ಟ ಪ್ರಾಣ ಭಾವದಲ್ಲಿ ಪ್ರಸನ್ನ ಮೂರುತಿಯ ನೆಲೆಯ ಕಂಡೆನಯ್ಯ ಸಂಗಯ್ಯ.
--------------
ನೀಲಮ್ಮ
ಜಗದಗಲದ ಬಲೆಯನಗಲಬಲ್ಲರ ಕಾಣೆ, ಮುಗಿಲುದ್ದದಂಬರವನುಗಿಯಬಲ್ಲರ ಕಾಣೆ, ಹಗಲಿರುಳ ಸೀಮೆಯ ಮಿಗೆ ಮೀರುವರ ಕಾಣೆ, ತೆಗೆದಿಪ್ಪ ಶುನಕನ ಬಗೆಯ ಬಲ್ಲವರ ಕಾಣೆ. ಅಗಡಾನೆ ಬಿಗಿದು ಬಲ್ಪಿಡಿಯಿತ್ತಲ್ಲಾ ಜಗವೆಲ್ಲವ. ಸೌರಾಷ್ಟ್ರ ಸೋಮೇಶ್ವರನ ನಿಜವನರಿಯದೆ ಮುಳುಗಿದರಲ್ಲಾ ಮುಪ್ಪುರದಲ್ಲಿ.
--------------
ಆದಯ್ಯ
ಮತ್ರ್ಯದ ಬೀಜವ ಬಿತ್ತಿ ಕುಡಿಯೊಡೆಯದ ಮುನ್ನ ಕತ್ತಲೆ ಬೆಳಗು ವಿಸ್ತರಿಸಿ ತೋರ್ಪುದರತ್ತಲೆ ನಿನ್ನ ಚಿದಂಶಿಕನಪ್ಪ ಶರಣಂಗೆ ಭೂತಳದ ಭೋಗವನೋತು ಬಳಸೆಂದು ಪ್ರೀತಿಯಿಂದ ಕಲ್ಪಿಸಿಕೊಡುವರೆ ಅಯ್ಯ? ರಾಜಹಂಸನಿಗೆ ಅಮೃತಾಹಾರವನಿಕ್ಕಬೇಕಲ್ಲದೆ ಗರುತ್ಮನ ಆಹಾರವನಿಕ್ಕುವರೆ ಅಯ್ಯ? ಅದೆಂತೆನಲು ಅವನಿಯ ಭೋಗಕ್ಕೆ ಅತಿಮಿಗಿಲೆನಿಸಿಕೊಂಬುದು ಮಜ್ಜನ ಭೋಜನ ಅನುಲೇಪನ ಆಭರಣ ವಸ್ತ್ರ ತಾಂಬೂಲವಯ್ಯ. ಇದಕ್ಕೆ ನೂರ್ಮಡಿ ಮಿಗಿಲೆನಿಸಿಕೊಂಬುದು ಸುದತಿಯರ ಮೃದುನುಡಿ ತೆಕ್ಕೆ ಚುಂಬನ ಸುರತಸಂಭ್ರಮದ ಲೀಲಾವಿನೋದವಯ್ಯ. ಆ ಸರಸ ಲೀಲಾವಿನೋದದ ಬಗೆಯ ಹೇಳಲಂಜುವೆನಯ್ಯ. ಹೇಳುವೆ- ನೀನು ಮಾಂಕೊಳದಿರಯ್ಯ. ಹೇಲಕುಳಿಯೊತ್ತಿನ ಉಚ್ಚೆಯ ಬಚ್ಚಲು. ಹಡುಕುನಾರುವ ಕೀವು ತುಂಬಿದ ಹಳೆಯ ಗಾಯ. ಕೋಲುಕುಕ್ಕುವ ತೊಗಲು ಪಡುಗ. ಆ ಪಡುಗದ ಸೊಗಸು ಮಾನವರ ತಲೆಗೇರಿ ಮುಂದಲ ಕಾಲಿನಲಿ ಅಮರ್ದಪ್ಪಿ ಪಿಡಿದು ಹೆಣ್ಣುನಾಯ ಬಾಯಲೋಳೆಯ ಗಂಡುನಾಯಿ ಚಪ್ಪರಿದು ನೆಕ್ಕಿಕೊಳುತ್ತ ಬಾಯೊಳಗೆ ಕಿಸುಕುಳದ ಬಾಯನಿಕ್ಕಿ ಒಡೆಯನೊಂದಾಗಿ ಬಂದ ಹೊಸ ಮನುಷ್ಯರ ಕಂಡ ನಾಯಂತೆ ಕರುಗಳ ಹಾಕುವ ಕಾಮದೈನ್ಯರ ಕರ್ಮಭೋಗಮಂ ಕಂಡು ಹರಣ ಹಾರಿ ಮನ ನಾಚಿ ಹೇಸಿ ಹೇಡಿಗೊಂಡು ಹೊನ್ನು ಹೆಣ್ಣು ಮಣ್ಣೆಂಬ ಮೂರು ಸಂಕಲೆಯ ಕೀಲ ಜ್ಞಾನಚೀರಣದಿಂದ ಕಡಿಗಡಿದು ವಿರಕ್ತನಾಗಿ ನಿರ್ವಾಣ ಪದಕ್ಕೆ ಕಾಮಿತನಾಗಿ ಸ್ವಾನುಭಾವದಲ್ಲಿ ಆಚರಿಸುವ ಆಚರಣೆಯಾವುದೆಂದರೆ- ಅಂಗದ ಮೇಲೆ ಲಿಂಗವುಳ್ಳ ಪಟ್ಟದರಾಣಿ ಅರಸುವೆಣ್ಣು ಅನಾದಿನಾಯಕಿ ಜಾರೆ ಪತಿವ್ರತೆ ಪುಂಡುವೆಣ್ಣು ಕೆಂಪಿ ಕರಿಕಿ ದಾಸಿ ವೇಶಿ ಮೊಂಡಿ ಮೂಕೊರತಿ ಕುಂಟಿ ಕುರುಡಿ ಇವರೆಲ್ಲರ ಭಕ್ತಿಯಿಂ ಸಮಾನಂಗಂಡು ಇವರೆಲ್ಲರಂ ಗುರುವಿನ ರಾಣಿವಾಸಕ್ಕೆ ಸರಿಯೆಂದು ನಿರ್ಧರಿಸಿ ಊರ್ವಶಿ ರಂಭೆ ತಿಲೋತ್ತಮೆಯರಿಗೆ ಸರಿಯಾದ ಶಂಖಿನಿ ಪದ್ಮಿನಿಗೆಣೆಯಾದ ರತಿಯ ಲಾವಣ್ಯಕ್ಕೆ ಸರಿಮಿಗಿಲೆನಿಪ ಚಿಲುವೆಣ್ಣುಗಳ ಗೋಮಾಂಸ ಸುರೆಗೆ ಸರಿಯೆಂದು- ಭಾವಿಸಿದೆನಯ್ಯ ನೀ ಸಾಕ್ಷಿಯಾಗಿ. ಕಬ್ಬುವಿಲ್ಲನಂ ಖಂಡಿಸಿ ಕಾಸೆಯನಳಿದು ಸೀರೆಯನುಟ್ಟು ಗಂಡು ಹೆಣ್ಣಾಗಿ ನಿನಗೆ ವಧುವಾದೆನಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಏರಿಯ ಕಟ್ಟೆ ಒಡೆದಡೆ ಪಾಪವೆಂಬರು. ನೀರಿನ ಸಾರವಿಲ್ಲದ ಮತ್ತೆ ಏರಿಯ ಪಾಪ ಆರಿಗೆಂಬುದನರಿ. ಆಪ್ಯಾಯನವಡಸಿ ಬಂದವರು ತಮ್ಮಯ ಅಘಹರವಾಗಬೇಕೆಂದು ಬಗೆಗೊಳ್ಳುತಿರಲಾಗಿ, ತಮ್ಮಯ ಉದರದ ಬಗೆಯ ಹೇಳುವ ಗುದಿಗಳ್ಳರ ನುಡಿಯೇಕೆ, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ತಲೆಯಿಲ್ಲದ ಗುರು, ಕಾಲಿಲ್ಲದೆ ನಿಂದ ನೋಡ! ಒಡಲಿಲ್ಲದ ಶಿಷ್ಯನಾದ ಪರಿಯ ನೋಡ! ಗುರುವಿನ ಒಡಲ ಬಗೆಯ ಹುಟ್ಟಿದಾತ ಒಡನೆ ಗುರುಸಹಿತ ನಿಂದ ನಿಲವನೇನೆಂಬೆನಯ್ಯಾ!ರಾಮನಾಥ.
--------------
ಜೇಡರ ದಾಸಿಮಯ್ಯ
ಮಡದಿಯರೈವರ ಗಂಡರ ಪಿಡಿದೊಯ್ದರು ಕಳ್ಳರು. ಮಡದಿ ಮೊರೆಯಿಟ್ಟೆಹೆನೆಂದು ಅರಸಿನ ಗ್ರಾಮಕ್ಕೆ ಬರಲು, ಅರಸು ಅಂತಃಪುರದೊಳಗೈದಾನೆ. ಅರಸನ ಕೂಡೆ ಏಕಾಂತವ ಮಾಡುವ ಪ್ರಧಾನಿಯ ಕಂಡು ಮೊರೆಯಿಟ್ಟಡೆ, ಪ್ರಧಾನಿ ಪಾಲಿಸುತಿರ್ದ ಬಗೆಯ ನೋಡಾ, ಕಪಿಲಸಿದ್ಧಮಲ್ಲಿನಾಥಯ್ಯಾ!
--------------
ಸಿದ್ಧರಾಮೇಶ್ವರ
ಪೃಥ್ವಿಕುಲಮಂಟಪದ ಮೇಲೆ ಪಾದ(ಪದ?)ಶಿಲೆ ಬಿಗಿದು, ತಳಕಂಭ ಕಳಸದ ಮೇಲೆ ಕೆಸರುಗಲ್ಲು_ ಒಂದು ವÀಠಕ್ಕೆ ಒಂಬತ್ತು ತುಂಬಿಯ ಆಳಾಪ. ಬಗೆಯ ಬಣ್ಣದ ಮೇಲೆ ಹಿರಿದಪ್ಪ ಸಂಯೋಗ ! ಅಂಗಜನ ಪಡೆ ಕೋಟಿ, ಮುಂಡವೆದ್ದು ಕುಣಿವಲ್ಲಿ, ರಣವುಂಡ ಭೂಮಿಯನು ಮೀರಿದನು ಗುಹೇಶ್ವರಾ !
--------------
ಅಲ್ಲಮಪ್ರಭುದೇವರು
ಆದಿಯಿಂದತ್ತತ್ತಲೆನಗೆ ನೀನೆ ಗುರುವಯ್ಯಾ. ಅನಾದಿಯಿಂದತ್ತತ್ತಲೆನಗೆ ನೀನೆ ಗುರುವಯ್ಯಾ. ಈ ಎರಡು ನಾಮ ಹುಟ್ಟದ ಮುನ್ನ ನಿಮಗೆ ನಾನು ಶಿಷ್ಯನಯ್ಯಾ. ಎನ್ನ ಭಾವಕಾಯದೊಳಗಣ ಭ್ರಮೆಯ ಕಳೆದು, ಎನ್ನ ಜ್ಞಾನಕಾಯದೊಳಗಣ ಮರಹ ಕಳೆದು, ಎನ್ನೊಳಗೆ ತಿಳಿವಿನ ಬಗೆಯ ತೋರುತ್ತ, ಹೊರಗೆ ನುಡಿಯದಂತಿರ್ದಡೆ ಬಿಡೆನು ನೋಡಾ ನಿಮ್ಮ ಶ್ರೀಚರಣವನು. ಮಾಡಿದಡೆ ಅಂತು ಮಹಾಪ್ರಸಾದವೆಂದು ಕೈಕೊಂಬೆ. ಮಾಡದಿರ್ದಡೆ ನೀವೆ ನಾನಾಗಿ ಮಹಾಪ್ರಸಾದವೆಂದು ಕೈಕೊಂಬೆನು, ಇಂತು ಆವತೆರದಿಂದಲಾದಡೂ ಎನ್ನೊಡಲ ನಿಮ್ಮಲ್ಲಿ ಸವೆದು ಪಡೆವೆನು ನಿಮ್ಮ ಕರುಣವ ಗುಹೇಶ್ವರಾ ಎನ್ನ ಇರವಿನ ಪರಿ ಇಂತುಟು ನೋಡಾ
--------------
ಅಲ್ಲಮಪ್ರಭುದೇವರು
ಅರಿಗಳಾರುಮಂದಿ ಬರಸಿಡಿಲಂತೆ ಎರಗಿ ಎರಗಿ ಕಾಡುತಿವೆ. ಸಿಡಿಲಬ್ಬರ ಅರಗಳಿಗೆಯಾದರೆ, ಅರಿಷಡುವರ್ಗದಬ್ಬರ ವೇಳೆವೇಳೆಗೆ, ಬಗೆಯ ನೆನದು ಕಾಡುತಿವೆ. ಅರಿಗಳನುರುವಿ ಪರಮಪದ[ದ]ಲಿಪ್ಪ ಶರಣರ ದರುಶನ ಸ್ಪರುಶನದಿಂದಲೆನ್ನ ಬದುಕಿಸಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಎರಡು ಹೆಸರಿನ ಮರದ ಬೊಡ್ಡೆಯಲಾಡುವಾಲಿಯ ಮನೆ ಏಳು ಬಗೆಯ ನಿರ್ಮಿತ, ಹತ್ತು ಬಗೆಯ ಹರವರಿ, ಒಂಬತ್ತು ಬಗೆಯ ಹಾದಿ. ಆ ಮನೆಯ ಪಂಚಾಳರು ರಚಿಸಿದರು ನೋಡಾ ! ಮನೆಯೊಳಗೆ ಮಧುರದ ಪಾಕವಾಗುತಿರೆ, ಆ ಮಧುರದ ಸವಿಗೆಟ್ಟು, ಹೊತ್ತಿ, ಹೊಗೆ ಮನೆಯ ಸುತ್ತಿದುದ ಕಂಡು, ಕೆಟ್ಟಡಿಗೆಯನಟ್ಟು, ಶುದ್ಧ ಮಾಡುವೆನೆಂದು, ಹಿಂದಣ ಮನೆಯ ಸುಟ್ಟು, ಮುಂದೊಂದು ಮನೆಯ ಕಟ್ಟಿ, ಅಂದಚೆಂದವ ನೋಡಿ, ಆಡಿಸುತ್ತಿದ್ದ ಭೇದವ ನೀನೆ ಬಲ್ಲೆ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಮಾಯೆಯ ಕಾಲು ಬಾಯಿಗೆ ಸಿಕ್ಕಿಕೊಂಡು ತೊತ್ತಳದುಳಿಸಿಕೊಂಬ ಮರುಳುಮಾನವರ ಬಗೆಯ ನೋಡಯ್ಯ ಮನವೇ. ಗಂಡುದೊತ್ತಿನಂತೆ ಮಂಡೆಯ ಬೋಳಿಸಿಕೊಂಡು ಮುಂಡೆ ಹಾರುವಿತಿಯಂತೆ ಬೆಳುವಲ್ಲ ಮಾಡಿಕೊಂಡು ತೆಂಗ ಪೋಟಾಡುವಂತೆ ಕರಸ್ಥಳದಲ್ಲಿ ಲಿಂಗವ ಹಿಡಿದುಕೊಂಡು ಠವುಳಿಕಾರನಂತೆ ಮನವ ಕದ್ದು ಮಾತನಾಡುತ್ತ ಮನೆಮನೆಗೆ ಹೋಗಿ ಹೊಟ್ಟೆಯ ಕಿಚ್ಚೆಗೆ ಸಟೆಯ ಶಾಸ್ತ್ರವ ಹೇಳುವ ಡೊಂಬರಂತೆ ಪುಸ್ತಕವ ಹಿಡಿದುಕೊಂಡು ಪುರಜನವ ಮೆಚ್ಚಿಸುವ ಕೋಡಿಗರಂತೆ ವೇಷಮಂ ಹಲ್ಲುಣಿಸಿ ಕೊಂಡು ನಿಜ ವಿರಕ್ತರಂತೆ ದೇಶಮಧ್ಯದಲ್ಲಿ ಸುಳಿದು ವಿರಕ್ತರ ಕಂಡಲ್ಲಿ ಸಟೆಯ ಭಕ್ತಿಯ ಹೊಕ್ಕು ಹೂಸಕದುಪಚಾರಮಂ ನುಡಿದು ಮಾಡಿ ನೀಡುವ ಭಕ್ತರ ಮನೆಗೆ ಭಿಕ್ಷಮುಖದಿಂದ ಹೋಗಿ ನಚ್ಚು ಮಚ್ಚ ನುಡಿದು ಉಂಡುಕೊಂಡು ದಿನಕಾಲಮಂ ನೂಂಕಿ ಮನೋವಿಕಾರದಿಂದ ಪರಧನ ಪರಸ್ತ್ರೀಯರಿಗಳುಪಿ ಭವಿ ಭಕ್ತರೆನ್ನದೆ ಉಂಡುಟ್ಟಾಡಿ ತೀರ್ಥ ಪ್ರಸಾದವೆಂಬ ಅಳುಕಿಲ್ಲದೆ ಚೆಲ್ಲಾಡಿ ನಡೆಯಿಲ್ಲದ ನಡೆಯ ನಡೆದು ನುಡಿಯಿಲ್ಲದ ನುಡಿಯ ನುಡಿದು ತನ್ನ ಕಪಟವನರಿಯದೆ ಶಿವಶರಣರ ಮೇಲೆ [ಮಿಥ್ಯವನಾಡಿ] ಹಗೆಯಂ ಸಾಧಿಸಿ ಹಸಿಯ ಮಾದಿಗರಂತೆ ಹುಸಿಯ ನುಡಿದು ಶಿವಶರಣರ ಮೇಲೆ ಒಂದೊಂದ ನುಡಿಯ ಗಳಹುತಿಪ್ಪ ನರಕ ಜೀವರುಗಳಿಗೆ ಮಾಡಿದ ಪರಿಭವದ ರಾಟವಾಳವು ಗಿರುಕು ಗಿರುಕೆಂದು ತಿರುಗುತ್ತಲಿದೆಯಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಮಹಾ ಅಂಬುಧಿಯಲ್ಲಿ ಹರಿವ ಮತ್ಸ ್ಯಕ್ಕೆ ನಾನೊಂದು ಬಗೆಯ ಕಂಡೆ. ಅದು ಅಡಗುವ ಮಡುವ ನೋಡಿ ತ್ರಿವಿಧದ ಸೊಕ್ಕು ತಂದು ಆ ಮಡುವಿನುದಕದಲ್ಲಿ ಒಡಗೂಡಿ ಕದಡೆ ಆ ಸೊಕ್ಕು ಮತ್ಸ ್ಯವ ಮುಟ್ಟಿದುದಿಲ್ಲ. ಅದೆಂತೆಂದಡೆ: ಅದರ ನಾಸಿಕದ ಉಸುರು ಸೂಸಲಿಲ್ಲ ಕಂಗಳ ದೃಷ್ಟಿ ಅನಿರಸಂಗೊಳಲಿಲ್ಲ. ಆ ಮತ್ಸ ್ಯದಂಗದ ಕವಚ ದುಸ್ಸಂಗದ ನೀರ ಮುಟ್ಟದಾಗಿ ಅದು ನಿರಂಗದ ಮತ್ಸ ್ಯ ಸುಸಂಗದ ಹೊಳೆಯಲ್ಲಿ ನಿರತಿಶಯದಿಂದ ತಿರುಗುತ್ತದೇಕೊ? ಕದಂಬಲಿಂಗನ ಬಲೆಯ ಹೊಲಬ ಕಂಡು.
--------------
ಗೋಣಿ ಮಾರಯ್ಯ
ನಾನು ಗುರುಲಿಂಗಜಂಗಮದಲ್ಲಿ ನಿಷೆ*ವಿಡಿದು ಬೇಡಿಕೊಂಡು ಬದುಕಿದೆನಯ್ಯಾ. ನಾನು ಪಾದೋದಕ ಪ್ರಸಾದದಲ್ಲಿ ನಿಷೆ*ವಿಡಿದು ಬೇಡಿಕೊಂಡು ಬದುಕಿದೆನಯ್ಯಾ. ನಾನು ಮೂರು ಪ್ರಣವಗಳಲ್ಲಿ ನಿಷೆ*ವಿಡಿದು ಬೇಡಿಕೊಂಡು ಬದುಕಿದೆನಯ್ಯಾ. ನಾನು ಪುರಾತನರ ಮೇಲುಪಂಕ್ತಿಗಳಲ್ಲಿ ನಿಷೆ*ವಿಡಿದು ಬೇಡಿಕೊಂಡು ಬದುಕಿದೆನಯ್ಯಾ. ನಾನು ಶರಣರುಗಳಲ್ಲಿ ನಿಷೆ*ವಿಡಿದು, ಬೇಡಿ ಹಾಡಿ ಹೊಗಳಿ ಐದು ಬಗೆಯ ಜಪವ ಜಪಿಸಿ ಬೇಡಿಕೊಂಡು ಬದುಕಿದೆನಯ್ಯಾ. ಗುಹೇಶ್ವರಾ ನಿಮ್ಮ ಶರಣ ಬಸವಣ್ಣನ ಸನ್ನಿಧಿಯಿಂದ ನಾನು ಕೃತಾರ್ಥನಾದೆನಯ್ಯಾ.
--------------
ಅಲ್ಲಮಪ್ರಭುದೇವರು
ಘನಲಿಂಗ, ಅತೀತ, ವಿರಕ್ತಿ-ಈ ಮೂರು ಒಂದಾಗಿ ಭವತಿಭಿಕ್ಷವ ಕೈಕೊಂಡು ಉಂಡು ಉಪವಾಸಿ ಆಗಿ, ಬಳಸಿ ಬ್ರಹ್ಮಚಾರಿ ಆಗಿ, ತತ್ತ್ವಮಂತ್ರೋಪದೇಶವ ಪಸರಿಸಿ, ಆಚಾರ ಹೆಚ್ಚುಗೊಳಿಸಿ, ನಿಷೆ*ಯೊಳಗಿರ್ದು, ಕಷ್ಟನಿಷು*ರವನಳಿದು ಸೃಷ್ಟಿಗೆ ಮಿಗಿಲೆನಿಸಿಕೊಂಡು ಜಗವಾದ ಬಗೆಯ ಅರಿಯದೆ ಬಗೆತಗಿಗೆ ಈಡಾಗಿ ನಗನಗುತಾ ಸತ್ತುಹೋಯಿತು ಅನಂತಕಾಲ ಅನಂತಜನ್ಮ. ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ನಾವು ಮೀರಿದ ಸ್ಥಲದ ವಿರಕ್ತರೆಂದು ಹೇಳುವ ಅಣ್ಣಗಳಿರಾ ನೀವು ಮೀರಿದ ಸ್ಥಲದ ವಿರಕ್ತರಾದ ಬಗೆಯ ಹೇಳಿರಣ್ಣ. ಅರಿಯದಿರ್ದಡೆ ಹೇಳಿಹೆ ಕೇಳಿರಣ್ಣ, ಮೀರಿನಿಂದ ವಿರಕ್ತನ ವಿಚಾರದ ಭೇದವ. ಅನಾದಿ ಚಿದ್ಬಿಂದುವ ಅಧೋದ್ವಾರದಲ್ಲಿ ಬೀಳಗೊಡದೆ, ಸದ್ಗುರು ಕರುಣಕಟಾಕ್ಷೆಯಿಂದ ಮಹಾಮಂತ್ರವ ಪಡೆದು, ಆ ಚಿನ್ಮಂತ್ರ ಬಲದಿಂದ ಊಧ್ರ್ವಕ್ಕೆ ಮುಖವ ಮಾಡಿ, ಮೇಲುಗಿರಿ ಸಿಂಹಾಸನದಲ್ಲಿ ಮೂರ್ತಗೊಂಡಿರುವ ಪರಶಿವಲಿಂಗದ ಮಹಾಬೆಳಗಿನೊಳಗೆ ಏಕಾರ್ಥವ ಮಾಡಬೇಕು. ಜಿಹ್ವೆಯ ತುದಿಯ ಅಜ್ಞಾನದ ಹುಸಿ ಕುಶಬ್ದ ಕುರುಚಿಯ ನೀಗಬೇಕು. ಸದ್ಗುರುಮುಖದಿಂದ ನಿಜನುಡಿ, ಘನಪಾದೋದಕ, ಪ್ರಸಾದಮಂತ್ರವ ಪಡೆದು, ಸದ್ಭರ್ಮರೂಪದಿಂದಿರಬೇಕು. ಸರ್ವಾಚಾರಸಂಯುಕ್ತವಾದ ಭಕ್ತನೆ ನಿಜಮುಕ್ತಿಮಂದಿರವೆಂದು, ಭಾವ ಮನ ಕಾಯ ತುಂಬಿ, ಪರಿಪೂರ್ಣ ತೃಪ್ತನಾದಾತನೆ ಮೀರಿದ ಸ್ಥಲದ ವಿರಕ್ತ ನೋಡಾ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಇನ್ನಷ್ಟು ... -->