ಅಥವಾ

ಒಟ್ಟು 52 ಕಡೆಗಳಲ್ಲಿ , 15 ವಚನಕಾರರು , 40 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಊರೆಲ್ಲರೂ ಕೂಡಿ, ಬೇಟೆಗೆ ಹೋಗಿ, ಹಾರುವನ ಕೊಂದರು. ತಲೆವುಳಿದು, ಕಾಲ ಕಂಡಿಸಿ, ಕರುಳಡಗಿತ್ತು. ಬೇಟೆ ಬೆಲೆಯಾದುದಿಲ್ಲ. ಕೇಳುವ ಬನ್ನಿ, ಅರ್ಕೇಶ್ವರಲಿಂಗವ.
--------------
ಮಧುವಯ್ಯ
ಅಪ್ಪು ಉತ್ಪತ್ಯವಾಗಿ ಜಗವ ಕದಡುವಾಗ, ಇರುಹಿನ ಮೊಟ್ಟೆ ಹೆಪ್ಪಳಿದುದಿಲ್ಲ. ಇರುಹಿನ ಗೂಡಿನ ಗುಹೆಗೆ ಅಪ್ಪು ಮುಟ್ಟಿದುದಿಲ್ಲ. ಇದೇನು ಚೋದ್ಯ ? ಬಂಕೇಶ್ವರಲಿಂಗದಲ್ಲಿ ಆರಡಿಗೊಂದು ಬನ್ನಿ.
--------------
ಸುಂಕದ ಬಂಕಣ್ಣ
ಹೊತ್ತುಹೊತ್ತಿಗೆ ಲಿಂಗಪೂಜೆಯ ಮಾಡಿಯೂ ಮತ್ತೆಯು ಸತ್ಯವಾವುದು, ನಿತ್ಯವಾವುದೆಂದರಿಯದೆ ಕೆಟ್ಟರೆಲ್ಲ ಜಗವು. ಸತ್ಯವಾಗಿ ನುಡಿವ ಶರಣರ ಕಂಡರೆ, ಕತ್ತೆಮಾನವರೆತ್ತಬಲ್ಲರೊ ? ಅಸತ್ಯವನೆ ನುಡಿದು, ಹುಸಿಯನೆ ಬೋಧಿಸುವ ಹಸುಕರ ಕಂಡರೆ, ಇತ್ತ ಬನ್ನಿ ಎಂಬರು. ಇಂತಪ್ಪ ಅನಿತ್ಯದೇಹಿಗಳ ಭಕ್ತರೆಂದು ಜಂಗಮವೆಂದು ನೋಡಿದರೆ, ನುಡಿಸಿದರೆ, ಮಾತನಾಡಿದರೆ, ನೀಡಿದರೆ, ಅಘೋರನರಕವೆಂದು ನಮ್ಮ ಆದ್ಯರ ವಚನ ಸಾರುತಿದೆ, ಬಸವಪ್ರಿಯ ಕೂಡಲಚೆನ್ನಬಸಣ್ಣಾ .
--------------
ಹಡಪದ ಅಪ್ಪಣ್ಣ
ತಾವರೆಯ ನಾಳದ ತೆರಪಿನಲ್ಲಿ, ಮೂರು ಲೋಕವನೊಳಕೊಂಡ ಗಾತ್ರದಾನೆ ಎಡತಾಕುತ್ತದೆ. ನಾಳ ಹರಿಯದು ಆನೆಯಂಗಕ್ಕೆ ನೋವಿಲ್ಲ. ಇದೇನು ಚೋದ್ಯವೆಂದು ಕೇಳುವ ಬನ್ನಿ, ಸದಾಶಿವಮೂರ್ತಿಲಿಂಗವ.
--------------
ಅರಿವಿನ ಮಾರಿತಂದೆ
ಹಾರುವನ ಕೈಯಿಂದ ಪಂಚಾಂಗವನರಿದು ವರ್ತಿಸಬಾರದು ಸದಮಲಲಿಂಗಸಮೇತರು. ಜಂಗಮದಮುಖದಿಂದ ಪಂಚಾಂಗವನರಿದು ವರ್ತಿಸುವುದು ಗುರುಕರಸಂಜಾತರು. ಇದು ಕಾರಣ, ಎನಗೆ ಮದುವೆಯ ಉತ್ಸಾಹಕಾರ್ಯ ಮುಂದಿಲ್ಲ; ನಾನು ಹೋಗಿ ಹಾರುವನ ಕಂಡು ಬರಲಿಲ್ಲ. ಮತ್ತೆ ಬರುವವರೆಲ್ಲ ಜಂಗಮದ ನುಡಿಯನರಿದು ಬನ್ನಿ, ಎನಗೆ ಜಂಗಮವ ಕೇಳಲು ಮನವಿಲ್ಲ. ಗುರುನಿರಂಜನ ಚನ್ನಬಸವಲಿಂಗವ ಬಿಡಲುಬಾರದು ಕಾಣಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಮುರಿಗಂಚು ತವರ ಹಿತ್ತಾಳೆ ತಾಮ್ರ ಇವು ಮೊದಲಾದ ಲೋಹವ ತನ್ನಿ. ಕಳ್ಳವಣ, ಕಂದುವೆಳ್ಳ ಮೊದಲಾದ ರೊಕ್ಕವ ತನ್ನಿ. ನಿಮಗಲ್ಲದ ಒಡವೆ ಎನಗೆ. ನಿಮಗೆ ಒಳ್ಳಿ[ತ]ಹ ಒಡವೆಯ ಕೊಡುವೆ. ಎನ್ನ ಕಂಬಳಿಯ [ಚೀಲವಂ] ಬಿಡುವೆ. ಅದರಲ್ಲಿದ್ದ ಸಂಬಾರದ್ರವ್ಯವ ಕೊಡುವೆನೆಂಬುದಕ್ಕೆನ್ನ ನಂಬಿ ಬನ್ನಿ. ಊಧ್ರ್ವರೇತೋಮೂರ್ತಿ ಶ್ವೇತಸ್ವಯಂಭು ಕಪಿಲೇಶ್ವರಲಿಂಗದಾಣತಿ.
--------------
ಮಹಾಲಿಂಗ ಶಶಿಮೌಳಿ ಸದಾಶಿವ
ಕಂಡು ಕಾಬುದು, ಕಾಣದೆ ಅರಿವುದು, ಭಾವಿಸಿ ಪ್ರಮಾಣಕ್ಕೆ ಬಾರದಿಪ್ಪುದು ಭಾವವೋ, ಭ್ರಮೆಯೋ ? ಅದೇನೆಂಬುದ ಕೇಳುವ ಬನ್ನಿ, ಅರ್ಕೇಶ್ವರಲಿಂಗವ.
--------------
ಮಧುವಯ್ಯ
ಸುಮ್ಮನೇಕೆ ದಿನಕಳೆವಿರಿ, ಸುಮ್ಮನೇಕೆ ಹೊತ್ತುಗಳೆವಿರಿ ? ಸುಮ್ಮನೇಕೆ ಹೊತ್ತಗಳೆವಿರಿ ಸ್ವಾಮಿಗಳಿರಾ ? ಮಾಡ ಬನ್ನಿ ದಿನ ಶಿವರಾತ್ರಿಯ, ಕೇಳ ಬನ್ನಿ ಶಿವಾನುಭವವ, ನೋಡ ಬನ್ನಿ ಅಜಗಣ್ಣನಿರವ ಬಸವಣ್ಣತಂದೆ.
--------------
ಮುಕ್ತಾಯಕ್ಕ
ಆರು ಕಂಬದ ಮಾಳಿಗೆಯ ನಡುವೆ, ಒಂದು ಮೂರುಮುಖದ ಹೆಗ್ಗಣ ತೋಡಿ ಕಂಡಿತ್ತು, ತೋಡೊಲೆಗಳವ, ಸಾಗರದ ಮಂದಿರವ ಅದು. ತನ್ನಿರವ ತೋರುವುದಕ್ಕೆ ಮೊದಲೆ ಮಾಳಿಗೆ ಜಾರಿತ್ತು. ಅರ್ಕೇಶ್ವರಲಿಂಗವ ಕೇಳಿಕೊಂಬ ಬನ್ನಿ.
--------------
ಮಧುವಯ್ಯ
ಅಯ್ದು ಕೂಡಿ ವೇಧಿಸಿ, ಹಿರಿಯ ಸಾಗರವಾಯಿತ್ತು. ಇಪ್ಪತ್ತೈದು ಕೂಡಿ, ನಿಂದ ಸಮುದ್ರವಾಯಿತ್ತು. ಆ ಸಮುದ್ರದ ನಡುವೆ ನೂರೊಂದು ತುದಿಯಿಲ್ಲದ ಬೆಟ್ಟ. ತುದಿನೀರೊಳಗೆ ಮುಳುಗಿ, ಗಿರಿಯ ಅಂಡು ಆಕಾಶವ ನೋಡುತ್ತದೆ. ಇದು ಚೋದ್ಯ, ಬಂಕೇಶ್ವರಲಿಂಗವ ಕೇಳುವ ಬನ್ನಿ.
--------------
ಸುಂಕದ ಬಂಕಣ್ಣ
ಸಂದ ಸಂಸಾರ ದಂದುಗವಳಿಯದೆ ಬಂದನೆಂತು, ಸ್ಥಲಕೆ ಸಂದನೆಂತು ಹೇಳಾ! ಉದರಾಗ್ನಿ ಬಲಿತರೆ ಕಳೆಯಲಿಲ್ಲವೆ ಮಾನಸಚತುಷ್ಟೆಯ ? ನಿಲ್ಲಿಸಲಿಲ್ಲವೆ ವಾಚಕಚತುಷ್ಟೆಯ ? ಖಂಡಿಸಲಿಲ್ಲವೆ ಕಾಯಚತುಷ್ಟೆಯ ? ಕಾಮಾಗ್ನಿಮುಖರೆ ಬೇಕಾಗಿ ಮಾಡಿಕೊಂಡ ಬಳಿಕ ಮತ್ತೆ ನೋಡಿ ನೋಡಿ ಮರುಗುವ ಕಟು ಪಶುಪ್ರಾಣಿಗಳು ನಿಮ್ಮಾಣತೆ ಕಾಣಬಂದಿತು ಕಡೆಗಾಗಿ ಬನ್ನಿ ನಮ್ಮ ಗುರುನಿರಂಜನ ಚನ್ನಬಸವಲಿಂಗ ಸತ್ತರೂಪವಹಡೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಸರಿವಿಡಿಯೆ ಗುರುವಿಡಿಯೆ. ಗುರುವಿಡಿದು ಲಿಂಗವಿಡಿಯೆ. ಪರಿವಿಡಿಯೆ ಈ ಲೋಕದ ಬಳಕೆವಿಡಿಯೆ. ಇಲ್ಲವೆಯ ತಂದೆನು ಬಲ್ಲವರು ಬನ್ನಿ ಭೋ! ಶರಣಸತಿ ಲಿಂಗಪತಿಯೆಂಬುದ ಕೇಳಿ ಉಂಟಾದುದ ಇಲ್ಲೆನಬಂದೆ. ಇಲ್ಲದುದ ಉಂಟೆನಬಂದೆ. ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡುವ ಕರ್ಮಿಗಳಿಗೆ ನೆಟ್ಟನೆ ಗುರುವಿಲ್ಲೆನಬಂದೆ. ಮುಟ್ಟಲರಿಯರು ಪ್ರಾಣಲಿಂಗವ. ಅಟ್ಟಿ ಹತ್ತುವರೀ ಲೋಕದ ಬಳಕೆಯ ಇಷ್ಟಲಿಂಗದ ಹಂಗು ಹರಿಯದ ಕಾರಣ ಚಿಕ್ಕಯ್ಯಪ್ರಿಯ ಸಿದ್ಧಲಿಂಗವಿಲ್ಲೆನ ಬಂದೆ.
--------------
ಘಟ್ಟಿವಾಳಯ್ಯ
ಲಿಂಗಭೋಗೋಪಭೋಗಿ ಎಂದು ತಾ ಮುನ್ನ ಬಿಟ್ಟುದ ಮುಟ್ಟಬಹುದೆ ? ತನ್ನ ಸುಖಕ್ಕೆ ತಾ ಭೋಗಿಸಿ ಲಿಂಗಮುಂತಾಗಿ ಕೂಡಿದೆನೆನಬಹುದೆ ? ಲಿಂಗದಂಗವನರಿದು ತಾ ಕೂಡಬಲ್ಲಡೆ ತನ್ನ ಇಂದ್ರಿಯಗಳ ಇಚ್ಫೆ ಉಂಟೆ ? ತಾ ಕದ್ದ ಕಳವ ಪರಿಹರಿಸಿಕೊಳಲರಿಯದೆ, ಇದಿರ 'ನೀವು ಬನ್ನಿ'ಎಂದು ಕರೆವ ಕದ್ದೆಹಕಾರನಂತೆ. ಈ ದ್ವಯ ಇದಿರಿಡಬಾರದ ಕುರುಹು. ಲಿಂಗಭೋಗೋಪಭೋಗಿ ತಾನಾದಡೆ ಉರಿಗೂಡಿಯೆ ಕರಗುವ ಕರ್ಪೂರದ ಇರವಿನಂತೆ ಇರಬೇಕು, ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನ ಸಂಗಗೂಡಿ ಸುಖಿಸುವ ಲಿಂಗಾಂಗಿಯ ಇರವು.
--------------
ಮೋಳಿಗೆ ಮಹಾದೇವಿ
ಜಾತಿ ಜಾತಿಯ ಕೂಡಿದಲ್ಲದೆ ನಿಹಿತ ಸುಖವಿಲ್ಲ. ಬಲ್ಲವ ಬಲ್ಲವನಲ್ಲಿಯಲ್ಲದೆ ಒಳ್ಳೆಯ ಗುಣವಿಲ್ಲ. ಭಟ ಮುಗ್ಗಿದಡೆ ತಿಳಿದ ಭಟ ಕೈ ಹಿಡಿದೆತ್ತಿ, ಇದಿರಾಗೆಂದಡೆ, ಊಣೆಯವೆಲ್ಲಿ ಅಡಗಿತ್ತು ? ಕೇಳುವ ಬನ್ನಿ, ಅರ್ಕೇಶ್ವರಲಿಂಗವ.
--------------
ಮಧುವಯ್ಯ
ಕಂಗಳ ಕಾಮವ ಜರಿದವರ ಕಂಡಡೆ ಎನ್ನ ಲಿಂಗಯ್ಯಾ ಬನ್ನಿ ಬನ್ನಿ ಎಂಬರಯ್ಯಾ ! ರುದ್ರಲೋಕದ ರುದ್ರಗಣಂಗಳೆಲ್ಲರು ಬನ್ನಿ ಬನ್ನಿ ಎಂಬರಯ್ಯಾ ! ಸರ್ವಲೋಕದ ಶ್ರೇಷ್ಠಜನಂಗಳು ಸಾಷ್ಟಾಂಗವ ಎರಗುವರಯ್ಯಾ ! ಬಸವಾದಿ ಪ್ರಮ ಥಗಣಂಗಳು ಕಂಡು ಬಳಲಿದಿರಿ ಬಾರಯ್ಯಾ ಎಂದು ಅಡಿಗೆರಗುವರಯ್ಯಾ ! ಅಮುಗೇಶ್ವರಲಿಂಗವನರಿದ ಶರಣರು ಅಡಿಗೆರಗುವರಯ್ಯಾ.
--------------
ಅಮುಗೆ ರಾಯಮ್ಮ
ಇನ್ನಷ್ಟು ... -->