ಅಥವಾ

ಒಟ್ಟು 34 ಕಡೆಗಳಲ್ಲಿ , 20 ವಚನಕಾರರು , 33 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಿಧಿ ನಿಷೇಧ ಜನನಿ ಜನಕ ಕುಲಗೋತ್ರ ಜಾತಿ ಭೇದಾಭೇದ ಸ್ವರ್ಗನರಕಾದಿ ಭಯವೇನೂ ಇಲ್ಲ, ಜಗವೇನೂ ಇಲ್ಲ. ``ಅತ್ರ ಪಿತಾ ಪಿತಾ ಭವತಿ ಮಾತಾ ಮಾತಾ ಲೋಕಾ ಲೋಕಾ ದೇವೋದೇವ ವೇದೋವೇದ ಬ್ರಾಹ್ಮಣೋ ಬ್ರಾಹ್ಮಣಶ್ಚಾಂಡಾಲೋ ಚಾಂಡಾಲಃ||' ಎಂದುದು ವೇದ. ಅದು ತಾನೆ ತನ್ನಿಂದನ್ಯವಿಲ್ಲ. ತೋರುವ ತೋರಿಕೆಯೆಲ್ಲ ಮಾಯೆಯೆಂದರಿದು ಜ್ಞಾನಾನಂದ ಪರಿಪೂರ್ಣ ತಾನೆಂದರಿದು ನೀನಾಗಿ ನಿಂದ ನಿಜಗುಣ ನೀನೇ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ಮದ ಎಂಟರೊಳು ಸಿಲ್ಕಿ ಮೈಮರೆದು ಅಲ್ಲಮನ ಪಾದಯುಗಳನು ಮರೆಯದಿರು ಮರೆದರೆ ಆತ್ಮ ಸುಧೆಯ ಹೊರಚೆಲ್ಲಿ ಸುರೆಗಾಟಿಯ ಸವಿವವನ ವಿಧಿ ಕಂಡಾ ಶಿವನ ಮರೆಯದೆ ನೆನೆ ಆತ್ಮ . ಪದ : ಕುಲ ಛಲ ರೂಪ ಯವ್ವನ ಧನ ವಿದ್ಯೆ ರಾಜ್ಯ ಸಲೆ ತಪಮದವೆಂಬ ಎಂಟಾನೆಯವೆ ಆತ್ಮ. ನಿಲಿಸುವನು ದೃಢವೆಂಬ ಕಂಬದೊಳು ಕಟ್ಟಿಯೆ ಹಲವು ದೆಸೆಗವ ಹರಿಯಗೊಡದೆ ಎಲೆ ಆತ್ಮ. ತಲೆಯೊಳಗೆ ವಿೂಟು ಶಿವಜ್ಞಾನಾಂಕುಶವ ಹಿಡಿದು ಕೊಲ್ಲುತಲಿರು ಕಂಡ್ಯಾ ಮಲಹರನ ಮರೆಯದೆ ಆತ್ಮ | 1 | ಮರವುಮೋಡವು ಕವಿದು ಕರಣೇಂದ್ರಿಯೆಂದೆಂಬ ಬಿರುಮಳೆಯು ಕರೆವುತೆ ಭೀತಿಯಾಗದೆ ಆತ್ಮ. ಬರಸಿಡಿಲು ಕಾಲನೆಂಬುವುದು ಚಿಟಿಚಿಟಿಲೆನುತ ಬರುತಲದೆ ಮುಂದೆ ರಕ್ಷಿಯಾಗಿರ್ದ ನೀ ಆತ್ಮ. ಅರಿಗಳಲ್ಲದೆ ಹಿತವರಾರಿಲ್ಲ ಕೇಳು ನೀ ಪರಮಾತ್ಮನನು ಮರೆಯದಿರು ಕಂಡ್ಯಾ ಆತ್ಮ. | 2 | ಕಾಳಗದಿ ಕೈಮರದ ಪಟ ಬರೆಸಿ ಮರಣಾರ್ಥಿ ಯೊಳಗಲಿದನುಮಿಷಗೆ ಮೃತ್ಯು ಕೇಳಲೆ ಆತ್ಮ. ನಾಲಗುಳ್ಳನಕ ಶಿವಸ್ಮøತಿಯ ಮರೆದರೆ ನಿನಗೆ ಕಾಲಮೃತ್ಯು ಮಾರಿಗಳು ಉಂಟೇ ಆತ್ಮ. ಹೋರಾಡಿ ಲಿಂಗಾಂಗಸಂಗ ಖಡ್ಗದಲ್ಲಿ ನೀ ಮೇಲಿಪ್ಪ ಗುರುಸಿದ್ಧ ಮಲ್ಲಿನಾಥನ ನಂಬು ಆತ್ಮ. | 3 |
--------------
ಹೇಮಗಲ್ಲ ಹಂಪ
ಮಧ್ಯಾಹ್ನದಿಂದ ಮೇಲೆ ಹಿರಿಯರಿಲ್ಲ. ಅಸ್ತಮಾನದಿಂದ ಮೇಲೆ ಜಿತೇಂದ್ರಿಯರಿಲ್ಲ. ವಿಧಿಯ ಮೀರುವ ಅಮರರಿಲ್ಲ. ಕ್ಷುಧೆ ವಿಧಿ ವ್ಯಸನಕ್ಕಂಜಿ, ನಾ ನಿಮ್ಮ ಮರೆಹೊಕ್ಕು ಬದುಕಿದೆನು ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ಉದಯದಲ್ಲಿ ಉತ್ಪತ್ತಿ, ಮಧ್ಯಾಹ್ನದಲ್ಲಿ ಸ್ಥಿತಿ, ಅಸ್ತಮಾನದಲ್ಲಿ ಲಯವಪ್ಪುದು_ ಸರ್ವರಿಗೆಯೂ ಈ ವಿಧಿ ನೋಡಾ, ಇನ್ನೇತಕ್ಕೆ ತೆರಹುಂಟು ? ಮಧ್ಯಾಹ್ನದ ಸ್ಥಿತಿಯಲ್ಲಿ ಸಂಸಾರ ಪ್ರಪಂಚು ಕಾರಣ ಹೊನ್ನು ಹೆಣ್ಣು ಮಣ್ಣು ಲಾಭನಿಮಿತ್ತ ಆರಂಬ ವ್ಯವಹಾರ ಸೇವೆ ಇಂತಿವರಲೂ ಅತಿಲಯವಪ್ಪುದು ತಪ್ಪದು. ಉದಯೇ ಜನನಂ ನಿತ್ಯಂ ರಾvõ್ಞ್ರ ಚ ಮರಣಂ ತಥಾ ಅಜ್ಞಾನಂ ಸರ್ವಜಂತೂನಾಂ ತದ್ವಿಧಿಶ್ಚ ಪುನಃ ಪುನಃ ಎಂದುದಾಗಿ, ಮರಳಿ ಮರಳಿ ಈ ವಿಧಿ ನೋಡಾ. ಉತ್ಪತ್ತಿ ಸ್ಥಿತಿ ಲಯವ ಮೀರುವ ನಿತ್ಯ ಸದ್ಗುರು ಲಿಂಗ ಜಂಗಮ ಪೂಜಾಕ್ರಿಯೆ ನಿತ್ಯಂ ಲಿಂಗಾರ್ಚನಂ ಯಸ್ಯ ನಿತ್ಯಂ ಜಂಗಮಪೂಜನಂ ನಿತ್ಯಂ ಗುರುಪದಧ್ಯಾನಂ ನಿತ್ಯಂ ನಿತ್ಯಂ ನ ಸಂಶಯಃ ಇಂತೆಂದುದಾಗಿ, ತ್ರಿವಿಧಲಿಂಗಾರ್ಚನೆಯಂ ಮಾಡಲು ನಿತ್ಯಪದವಪ್ಪುದು ಸತ್ಯ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಪ್ರಾಣಲಿಂಗೈಕ್ಯವಾದ ಬಳಿಕ ವಿಧಿ ನಿಷೇಧ, ಪುಣ್ಯ ಪಾಪ ಮಾನ ಅಪಮಾನ, ಹೆಚ್ಚು ಕುಂದುಗಳೆಂಬವೇನೂ ಇಲ್ಲ. ಆತನಿರವು ಬೆಂದ ಪಟದಂತೆ, ಬಯಲ ಚಿತ್ರಿಸಿದ ರೂಹಿನಂತೆ, ತನ್ನ ತೋರದೆ ತಾನೇ ಶಿವನಾಗಿ ನಿಂದ, ನಿಜಗುರು ಸ್ವತಂತ್ರಸಿದ್ಧಲಂಗೇಶ್ವರ ನಿಮ್ಮ ಶರಣನು.
--------------
ಸ್ವತಂತ್ರ ಸಿದ್ಧಲಿಂಗ
ಅಂಗ ಲಿಂಗವೆಂಬ ಸಂದು ಸಂಶಯವಳಿದು ಲಿಂಗಾಂಗದೈಕ್ಯವನರಿದು ಕೂಡಿದ ಶಿವಯೋಗಿಗೆ ನಿಶ್ಚಿಂತತ್ವವೇ ಶಿವಧ್ಯಾನ; ಸಕಲ ಕ್ರೀಗಳು ಲಯವಾದ ಇರವೇ ಶಿವಪೂಜೆ; ಚರಾಚರವನು ವ್ಯಾಪಿಸಿ ನಿಂದ ನಿಶ್ಚಲವೇ ಪ್ರದಕ್ಷಿಣ; ಸೋಹಂ ದಾಸೋಹಂ ಭಾವವಳಿದು ಆ ಶಿವೋಹಂ ಭಾವ ತನ್ನಲ್ಲಿ ನಿಂದುದೇ ನಮಸ್ಕಾರ; ಸ್ವಯ ಪರವೆಂಬ ವಿವೇಕದನುಭಾವವಡಗಿ ನಿಂದ ಮೌನವೇ ಸ್ತೋತ್ರ; ಬಿಂದು ನಾದಾದಿ ಉಪಾಧಿಯ ತೊಲಗಿದ ಪರಿಪೂರ್ಣ ಶಿವನಾಗಿ ತಾ ಶಿವನಾದೆನೆಂಬ ಚಿದಹಂಭಾವವಡಗಿ ವಿಧಿ ನಿಷೇಧಂಗಳನರಿಯದುದೇ ಮಹಾಶೀಲ; ಸರ್ವಜ್ಞತ್ವ ನಿತ್ಯತೃಪ್ತಿ ಅನಾದಿಪ್ರಬೋಧ, ಸ್ವತಂತ್ರ ನಿತ್ಯ ಶಕ್ತಿ ಎಂಬ ಷಡ್ಗುಣೈಶ್ವರ್ಯ ತನಗೂ ಶಿವಂಗೂ ಸಮವಾಗಿ ಶಿವನೊಳಗೆ ತಾನು, ತನ್ನೊಳಗೆ ಶಿವನು ಅಡಗಿ ಸಮರಸವಾದುದೇ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ಪರಮನಿರ್ವಾಣವೆನಿಸುವುದು.
--------------
ಸ್ವತಂತ್ರ ಸಿದ್ಧಲಿಂಗ
ವಿಧಿ ನಿಷೇದಂಗಳಿಲ್ಲದನಾ ನೀ ನೋಡಯ್ಯಾ. ಜಪ-ತಪವಿಲ್ಲದ ಮಹಾಮುನಿ ನೋಡಯ್ಯಾ. ಇಹ-ಪರ ಸುಖ-ದುಃಖ್ಕಾೀತನಯ್ಯಾ ನಿಮ್ಮ ಶರಣ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಹರಿ ಬಂದ ವಿಧಿ, ಬ್ರಹ್ಮ ಬಂದ ಭವ, ಜಿನ ಬಂದ ಲಜ್ಜೆ. ದೃಷ್ಟವ ಕಂಡೇಕೆ ಮಿಥ್ಯದಿಂದ ಹೋರುವರು? ಆದಿ ವಸ್ತುವಿನ ಕಾಲುರಂಗು ವಿಷ್ಣು, ಅರೆರಂಗು ಬ್ರಹ್ಮ, ಸಂದೇಹ ಮಾತ್ರ ಜಿನ. ಇವರ ಭಂಗಿತವ ಹೇಳಲೇಕೆ? ಇವರ ಸಂದೇಹದ ಮಂದಮತಿಯ ದಿಂಡೆಯತನದಿಂದ ಹೋರುವ ಭಂಡರ ತಿಳಿ, ನಾರಾಯಣಪ್ರಿಯ ರಾಮನಾಥನಲ್ಲಿ ಗುಪ್ತಭಕ್ತರಪ್ಪ ಸತ್ಯವಂತರು.
--------------
ಗುಪ್ತ ಮಂಚಣ್ಣ
ಭೂಮಿ ನಿನ್ನದಲ್ಲ ಹೇಮ ನಿನ್ನದಲ್ಲ ಕಾಮಿನಿ ನಿನ್ನವಳಲ್ಲ_ ಅವು ಜಗಕ್ಕಿಕ್ಕಿದ ವಿಧಿ. ನಿನ್ನ ಒಡವೆ ಎಂಬುದು ಜ್ಞಾನರತ್ನ. ಅಂತಪ್ಪ ದಿವ್ಯರತ್ನವ ಕೆಡಗುಡದೆ ಆ ರತ್ನವ ನೀನು ಅಲಂಕರಿಸಿದೆಯಾದಡೆ ನಮ್ಮ ಗುಹೇಶ್ವರಲಿಂಗದಲ್ಲಿ ನಿನ್ನಿಂದ ಬಿಟ್ಟು ಸಿರಿವಂತರಿಲ್ಲ ಕಾಣಾ ಎಲೆ ಮನವೆ.
--------------
ಅಲ್ಲಮಪ್ರಭುದೇವರು
ಕಾಲ ಕಲ್ಪಿತನಲ್ಲ ಕರ್ಮವಿರಹಿತ ಶರಣ. ವಿಧಿ ನಿಷೇಧ ಪುಣ್ಯ-ಪಾಪ-ಕರ್ಮ-ಕಾಯನು ಅಲ್ಲ ಆ ಶರಣನು. ಅವರಿವರ ಬೆರಸಿಪ್ಪನು, ತನ್ನ ಪರಿ ಬೇರೆ ! ನಿರಂತರ ಸುಖಿ, ಕೂಡಲಚೆನ್ನಸಂಗಯ್ಯಾ, ನಿಮ್ಮ ಶರಣರು ಪ್ರಪಂಚನೊಳಗಿದ್ದೂ, ತನ್ನ ಪರಿ ಬೇರೆ
--------------
ಚನ್ನಬಸವಣ್ಣ
ಶೀಲವಂತ ಶೀಲವಂತರೆಂದು ಶೀಲಸಂಪಾದನೆಯ ಮಾಡುವ ಕರ್ಮಿಗಳನೇನೆಂಬೆನಯ್ಯಾ ! ಗುರುಭಕ್ತಿಯಿಂದೆ ತನುಶುದ್ಧವಾಗಲಿಲ್ಲ. ಲಿಂಗಭಕ್ತಿಯಿಂದೆ ಮನಶುದ್ಧವಾಗಲಿಲ್ಲ. ಜಂಗಮದಾಸೋಹದಿಂದೆ ಧನಶುದ್ಧವಾಗಲಿಲ್ಲ. ಸಟೆಯ ಸಂಸಾರಶರಧಿಯೊಳಗೆ ಮುಳುಗಿ ಕುಟಿಲವ್ಯಾಪಾರವನಂಗೀಕರಿಸಿ, ನಾವು ದಿಟದ ಶೀಲವಂತರೆಂದು ನುಡಿದುಕೊಂಬ ಫಟಿಂಗ ಭಂಡರ ವಿಧಿ ಎಂತಾಯಿತ್ತೆಂದರೆ, ಹೆಂಡದ ಮಡಕೆಗೆ ವಿಭೂತಿಮಂಡಲವ ಬರೆದಂತಾಯಿತ್ತು ಕಾಣಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಕೊಡುವಾತ ಶಿವ, ಕೊಂಬಾತ ಶಿವ, ಹುಟ್ಟಿಸುವಾತ ಶಿವ, ಕೊಲ್ಲುವಾತ ಶಿವನೆಂಬ ದೃಷ್ಟವನರಿಯದೆ, ನಡುಮನೆಯಲೊಂದು ದೇವರ ಜಗುಲಿಯನಿಕ್ಕಿ ಅದರ ಮೇಲೆ ಹಲವು ಕಲ್ಲು ಕಂಚು ಬೆಳ್ಳಿ ತಾಮ್ರದ ಪಾತ್ರೆಯನಿಟ್ಟು ಪೂಜೆ ಮಾಡಿ, ತಲೆ, ಹೊಟ್ಟೆ, ಕಣ್ಣುಬೇನೆ ಹಲವು ವ್ಯಾಧಿ ದಿನ ತಮ್ಮ ಕಾಡುವಾಗ ನಮ್ಮನೆದೇವರೊಡ್ಡಿದ ಕಂಟಕವೆಂದು ಬೇಡಿಕೊಂಡು ಹರಕೆಯ ಮಾಡಿ, ತನ್ನ ಸವಿಸುಖವ ಕೊಂಡು ಪರಿಣಾಮಿಸಿ, ವಿಧಿ ವಿಘ್ನ ಹೋದ ಮೇಲೆ ಪರದೇವರು ಕಾಯಿತೆಂದು ನುಡಿವವರ ಲೋಕದ ಗಾದೆಯ ಕಂಡು ನಾ ಬೆರಗಾದೆನೆಂದರೆ : ಹುಟ್ಟಿಸಿದ ಶಿವ ಪರಮಾತ್ಮ ಭಕ್ಷಿಸಿಕೊಂಡೊಯ್ಯುವಾಗ ಕಟ್ಟೆಯ ಮೇಲಣ ಕಲ್ಲು ಕಾಯುವುದೆ ? ಕಾಯದಯ್ಯ. ಮತ್ತೆ ಹೇಳುವೆ ಕೇಳಿರಣ್ಣಾ : ಸಿರಿ ತೊಲಗಿ ದರಿದ್ರ ಎಡೆಗೊಂಡು, ಮನೆಯೊಳಿಹ ಚಿನ್ನ ಬೆಳ್ಳಿ ತಾಮ್ರ ಕಂಚಿನ ಪ್ರತಿಮೆಯನೆಲ್ಲ ಒತ್ತೆಯ ಹಾಕಿ, ಹಣವ ತಂದು, ಉದರವ ಹೊರೆವಗೆ ಎತ್ತ ಹೋದನಯ್ಯಾ ಅವರ ಮನೆಯೊಳಿಹ ಮಿಥ್ಯದೈವ ? ಅಕ್ಕಸಾಲೆಯ ಮನೆಯ ಕುಪ್ಟುಟೆಯಲುರಿವುತಿಹ ಅಗ್ನಿದೇವತೆಗೆ ಗುರಿಯಾಗಿ ಹೋದವಯ್ಯಾ. ಸರ್ವದೇವಪಿತ ಶಂಭು[ವೆಂಬು]ದನರಿಯದೆ ಶಿವನಿಂದ ಹುಟ್ಟಿ, ಶಿವನಿಂದ ಬೆಳೆದು, ಶಿವದೈವವ ಮರೆದು, ಅನ್ಯದೈವವ ಹೊಗಳುವ ಕುನ್ನಿಮಾನವರ ಕಂಡು ನಾ ಬೆರಗಾದೆನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಹೆರರಿಗೆ ಕೂರ್ತವಳ ತೆಗೆದಪ್ಪಿಕೊಂಡಡೆ ಅರ್ಥಗೆಡಹುದಲ್ಲದೆ ಮನವು ಬೇರೆ ತಾನಿರ್ಪುದಲ್ಲಿಯೆ. ಇದ್ದಿಲ ಹಿಂಡಿದಡೆ ರಸವುಂಟೆ? ಸಾಧಕ ಸಾಧಿಸಿದ ನಿಧಾನವನೊಯ್ದ ಕುಳಿಯಂತೆ ಅದರ ವಿಧಿ ಎನಗಾಯಿತ್ತು, ಮಹಾಲಿಂಗ ಗಜೇಶ್ವರಾ.
--------------
ಗಜೇಶ ಮಸಣಯ್ಯ
ಅಕಾರವದು ಸತ್ವ, ಉಕಾರವದು ರಜ, ಮಕಾರವದು ತಮ. ಅಕಾರವದು ಬ್ರಹ್ಮಜನಕ, ಉಕಾರವದು ವಿಷ್ಣುಜನಕ, ಮಕಾರವದು ರುದ್ರಜನಕ. ಅಕಾರವದು ಸೃಷ್ಟಿ, ಉಕಾರವದು ಸ್ಥಿತಿ, ಮಕಾರವದು ಲಯ. ಅಕಾರವದು ಪೀತ, ಉಕಾರವದು ಶ್ಯಾಮ, ಮಕಾರವದು ಶುಕ್ಲ. ಅಕಾರವದು ವಿಧಿ, ಉಕಾರವದು ವಿಧಾನ, ಮಕಾರವದು ಧ್ಯಾನ. ಅಕಾರವದು ಪಾತಾಳ, ಉಕಾರವದು ಮೃತ್ರ್ಯ, ಮಕಾರವದು ಸ್ವರ್ಗ. ಅಕಾರ ಉಕಾರ ಮಕಾರ ಮೂರರ ಏಕತ್ವವೆ ಓಂಕಾರ. ಆ ಓಂಕಾರವೆ ಆಶಕ್ತಿಯ ಗದ್ದುಗೆ. ಆ ಗದ್ದುಗೆಯೆ ಕಪಿಲಸಿದ್ಧಮಲ್ಲಿಕಾರ್ಜುನನ ಅರಮನೆ ನೋಡಾ.
--------------
ಸಿದ್ಧರಾಮೇಶ್ವರ
ಲಿಂಗವಂತ ಲಿಂಗಪ್ರಾಣಿ ಸರ್ವಾಂಗಲಿಂಗಿ ಎಂಬಿರಿ. ಭಂಗವಾಯಿತ್ತಲ್ಲಾ ಈ ಮಾತನಾಡಿದಡೆ ! ಕೊಂಬುದು ಪಾದೋದಕ ಪ್ರಸಾದ, ಕಳಚುವುದು ಮಲಮೂತ್ರ. ಅಂಗ ಸೋಂಕಿದ ಪಾದೋದಕಕ್ಕೀ ವಿಧಿ ಕೂಡಲಚೆನ್ನಸಂಗಯ್ಯನಲ್ಲಿ ಸಂಗಸುಖದ ಪರಿ ಬೇರೆ.
--------------
ಚನ್ನಬಸವಣ್ಣ
ಇನ್ನಷ್ಟು ... -->