ಅಥವಾ

ಒಟ್ಟು 16 ಕಡೆಗಳಲ್ಲಿ , 10 ವಚನಕಾರರು , 15 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿತ್ಯ ಗುರುಲಿಂಗಜಂಗಮಕ್ಕೆ ಪೂಜೆಯ ಮಾಡಿ ನಿತ್ಯ ಮುಕ್ತಿಯ ಪಡೆಯಲರಿಯದೆ, ಮತ್ತತನದಿಂದೆ ಅನಿತ್ಯ ಫಲಭೋಗವ ಪಡೆದು ಮರ್ತ್ಯದ ಭವಜಾಲದಲ್ಲಿ ಸುತ್ತಿ ಸುತ್ತಿ ಸುಳಿದು ತೊಳಲಿ ಬಳಲುವ ವ್ಯರ್ಥರ ನೋಡಿ ನಗುತಿರ್ದನು ನಮ್ಮ ಅಖಂಡೇಶ್ವರನು.
--------------
ಷಣ್ಮುಖಸ್ವಾಮಿ
ಮರವೆ ಅರಿವಿನ ಮರೆಗೊಂಡು ತಲೆದೋರಿ ಅರಿವೆಂದೆನಿಸಿತ್ತು. ಅರಿವು ಮರವೆಯ ಮರೆಗೊಂಡು ತಲೆದೋ? ಮರಹೆಂದೆನಿಸಿತ್ತು. ಅರಿವು ಮರವೆಗಳಿಂದರಿತರಿವು ನಿಜವಪ್ಪುದೆ ? ಅದು ಹುಸಿ, ಅದೆಂತೆಂದಡೆ: `ಪ್ರಾಣನಿಲಾಚೇಷ್ಟಮನೋಗಲಿತ್ವಂ ಮನೋಗಲಿತ್ವಾತ್ಕರಣಂ ಪ್ರಕೃತ್ಯಾ' ಪ್ರಕೃತಿಯಿಂದಂ ಮರೆವರಿವು ತೋರ್ಕುಂ, ಮರೆವರಿವಿನಿಂ ಅನಿತ್ಯಂ. ಇದು ಕಾರಣ, ಅರಿವಿನ ಮರಹಿನ ಸಂಚಲದಿಂದರಿಹಿಸಿಕೊಂಡರಿವು ತಾನರಿವಲ್ಲ. ಅರಿಯದ ಮರೆಯದ ಮರವರಿವಿಂಗೆ ತೆರಹಿಲ್ಲದ ಬಚ್ಚಬರಿಯರಿವೆ ತಾನಾಗಿ. ಅರಿವೆಂಬ ಕುರುಹುಗೆಟ್ಟ ಪರಮಸ್ವಯಂಭು ನೀನೆ ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಶರಣನು ಅದೃಷ್ಟ ದೃಷ್ಟ ಎರಡುವನೂ ತೋರುವನು. ಸಾವಯ ನಿರವಯ ಏನೆಂದು ವಿವರಿಸ ಶರಣನು. ತಾನು ಸ್ವತಂತ್ರನಾಗಿ ಭಾವರಹಿತನು. ವಿಕೃತವೇಷದಿಂದ ಸುಕೃತವ ಜೋಡಿಪನಲ್ಲ. ಪ್ರಕೃತಿಗುಣವಿಡಿದು ಮೂರ್ತಿಯಾದ ಉಪಜೀವಿ ತಾನಲ್ಲ, ಕೂಡಲಚೆನ್ನಸಂಗಾ ಅನಿತ್ಯ ಮಿಥ್ಯವ ಕಳೆದು ನಿತ್ಯನಾದ ಶರಣ
--------------
ಚನ್ನಬಸವಣ್ಣ
ವಿಷ್ಣು ಬಲ್ಲಿದನೆಂಬೆನೆ ದಶಾವತಾರದಲ್ಲಿ ಭಂಗಬಟ್ಟುದಕ್ಕೆ ಕಡೆಯಿಲ್ಲ. ಬ್ರಹ್ಮ ಬಲ್ಲಿದನೆಂಬೆನೆ ಶಿರ ಹೋಗಿ ನಾನಾ ವಿಧಿಯಾದ. ವೇದ ಬಲ್ಲಿತ್ತೆಂಬೆನೆ ನಾನಾಮುಖದಲ್ಲಿ ಸ್ತುತಿಯಿಸಿತ್ತಲ್ಲದೆ ಲಿಂಗದ ನಿಲುಕಡೆಯ ಕಾಣದು. ಶಾಸ್ತ್ರ ಬಲ್ಲಿತ್ತೆಂಬೆನೆ ಶಬ್ದಕ್ರೀ. ಪುರಾಣ ಬಲ್ಲಿತ್ತೆಂಬೆನೆ ಪೂರ್ವಕ್ರೀ. ಆಗಮ ಬಲ್ಲಿತ್ತೆಂಬೆನೆ ವಾಯ ಹೊಂದಿತ್ತು. ಇದು ಕಾರಣ ಕೂಡಲಸಂಗಯ್ಯನೆ ನಿತ್ಯ, ಉಳಿದ ದೈವವೆಲ್ಲ ಅನಿತ್ಯ ಕಾಣೆ ಭೋ.
--------------
ಬಸವಣ್ಣ
ಇವು ಮೂರೂ ನಿತ್ಯವಾದಡೆ, ಮಾಯೆಯೂ ಆತ್ಮನು ಉತ್ಪತ್ತಿ ಸ್ಥಿತಿ ಪ್ರಳಯಕ್ಕೊಳಗಾಗುತ್ತಿಪ್ಪವು ನೋಡಾ. ಶಿವನೆ ಉತ್ಪತ್ತಿ ಸ್ಥಿತಿ ಪ್ರಳಯರಹಿತನಾಗಿ ನಿತ್ಯನಾಗಿಪ್ಪನು ನೋಡಾ. ಇದು ಕಾರಣ, ಅನಿತ್ಯವಾದ ಪಶುಪಾಶಂಗಳ ನಿತ್ಯವೆಂಬುದು ಅದು ಅಜ್ಞಾನ ನೋಡಾ. ಶಿವಜ್ಞಾನೋದಯದಿಂದ ತಿಳಿದುನೋಡಿದರೆ, ಶಿವತತ್ವವೊಂದೇ ನಿತ್ಯವು; ಉಳಿದವೆಲ್ಲವು ಅನಿತ್ಯ ಕಾಣ. ಹೀಂಗೆಂದು ಕಂಡ ಕಾಣಿಕೆ ನೀನೇ ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಎನ್ನ ಮನಸ್ಸು ಹೊನ್ನು ಹೆಣ್ಣು ಮಣ್ಣ ನೆನನೆನೆದು ನಿಮ್ಮ ನೆನಯಲೊಲ್ಲದು ನೋಡ. ಎನ್ನ ಕಾಯ ನಿಮ್ಮ ಮುಟ್ಟದೆ ಸಂಸಾರಕರ್ಮವನೆ ಮಾಡುತ್ತಿಪ್ಪುದು ನೋಡ. ಎನ್ನ ಪ್ರಾಣ ನಿಮ್ಮ ಮುಟ್ಟದೆ ಪ್ರಪಂಚೆನೊಳಗೇ ಮುಳುಗುತ್ತಿಪ್ಪುದು ನೋಡ. ಎನ್ನ ಭಾವ ನಿಮ್ಮ ಭಾವಿಸಿ ಭ್ರಮೆಯಳಿಯದೆ, ಸಂಸಾರ ಭಾವನೆ ಸಂಬಂಧವಾಗಿ ಮುಂದುಗಾಣದೆ, ಮೋಕ್ಷಹೀನನಾಗಿರ್ದೆನಯ್ಯ. ಸುರಚಾಪದಂತೆ ತೋರಿ ಅಡಗುವ ಅನಿತ್ಯ ತನುವನು ನಿತ್ಯವೆಂದು, ನಿರುತವೆಂದು ವೃಥಾ ಹೋಯಿತ್ತು ಎನ್ನ ವಿವೇಕ. ಸಂಸಾರದಲ್ಲಿ ಸವೆಸವೆದು ಅವಿವೇಕಿಯಾದೆನಯ್ಯ. ಎನ್ನ ಅವಿವೇಕವ ಕಳೆದು, ಶಿವತತ್ವವಿವೇಕವನಿತ್ತು ಕರುಣಿಸಯ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅನಿತ್ಯ ವನಿತಾದಿ ಸಕಲಸಂಸ್ಕøತಿಯ ವಾಸನೆಯನಳಿದುಳಿದು ನಿಜಜ್ಞಾನಾನಂದ ನಿಲುವಿಗೆ, ಸತ್ತುಚಿತ್ತಾನಂದ ನಿತ್ಯಪರಿಪೂರ್ಣತ್ವವೇ ಗತಿ. ಸತ್ತುಚಿತ್ತಾನಂದ ನಿತ್ಯಪರಿಪೂರ್ಣತ್ವವೇ ಮತಿ. ಸತ್ತುಚಿತ್ತಾನಂದ ನಿತ್ಯಪರಿಪೂರ್ಣತ್ವವೇ ಸಂಗ. ಇದನುಳಿದು ಅರಿಯದಂಗೆ ಗುರುನಿರಂಜನ ಚನ್ನಬಸವಲಿಂಗ ತಾನೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ನಿತ್ಯವೆಂದಡೆ ಲಿಂಗ, ಅನಿತ್ಯವೆಂದಡೆ ಅಂಗ. ನಿತ್ಯವೆಂದಡೆ ಜಾÐನ, ಅನಿತ್ಯವೆಂದಡೆ ಅಜಾÐನ. ನಿತ್ಯ ಕಾರ್ಯವು ಸತ್ಕರ್ಮ, ಅನಿತ್ಯ ಕಾರ್ಯಗಳೆ ವಿಷಯಂಗಳು. ವಿಷಯಂಗಳೆ ನಿತ್ಯಂಗಳಾಗಲು, ಜಾÐನಿಯೆಂದು, ಐಕ್ಯನೆಂದು, ಪ್ರಮಥನೆಂದು, ವೀರಶೈವನೆಂದು, ಕಪಿಲಸಿದ್ಧಮಲ್ಲಿಕಾರ್ಜುನನೆಂದು ಬೇರೆ ಉಂಟೇನೊ, ಹಾವಿನಹಾಳ ಕಲ್ಲಯ್ಯಾ ?
--------------
ಸಿದ್ಧರಾಮೇಶ್ವರ
ಅಯ್ಯಾ, ನಿಮ್ಮ ಶರಣರೆನಗೆ ಭಕ್ತಿಯಿಲ್ಲೆಂಬುವರು ಅದು ದಿಟವೆಂಬುದೇ ನಿಷೆ*: ದ್ವೈತಾದ್ವೈತ ಯೋಗ ಮಾರ್ಗಿಗಳಲ್ಲಿ. ಅಯ್ಯಾ, ನಿಮ್ಮ ಪ್ರಮಥರೆನಗೆ ಜ್ಞಾನವಿಲ್ಲೆಂಬುವರು. ಅದು ಸಹಜವೆಂಬುದೇ ನಿಷೆ*: ಅನಿತ್ಯ ನಿತ್ಯವೆಂಬುವ ಮನದಲ್ಲಿ. ಅಯ್ಯಾ, ನಿಮ್ಮ ಭಕ್ತರು ಎನಗೆ ವೈರಾಗ್ಯವಿಲ್ಲೆಂಬುವರು ಅದು ಬದ್ಧವೆಂಬುದೇ ನಿಷೆ*: ತನ್ನ ಸತ್ಕ್ರಿಯಾನುಕೂಲೆಯಾದ ಸತಿಸುತಾಲಯಂಗಳಲ್ಲಿ. ಅಯ್ಯಾ, ನಿಮ್ಮ ಶರಣರಿದು ಸತ್ಯವೆಂಬುವರು, ಅದು ನಿತ್ಯವೆಂಬುದೆ ನಿಷೆ*: ಗುರುನಿರಂಜನ ಚನ್ನಬಸವಲಿಂಗದಲ್ಲಿ ಅಂದಂತಿಪ್ಪುದು.
--------------
ದೇಶಿಕೇಂದ್ರ ಸಂಗನಬಸವಯ್ಯ
ನೀರಗೋಳಿಯ ನೆತ್ತರವ ಕುಡಿದವನು, ಹಂಸನ ಪಾಕವನೆತ್ತ ಸೇವಿಸಬಲ್ಲ ಹೇಳಾ ! ಮಿಥ್ಯಸಂಸಾರದೊಳ್ಮುಳುಗಿ ತೇಕ್ಯಾಡುವ ಅನಿತ್ಯ ಮೂಢಪ್ರಾಣಿ ತಾನೆತ್ತಬಲ್ಲುದು ಹೇಳಾ ಗುರುನಿರಂಜನ ಚನ್ನಬಸವಲಿಂಗೈಕ್ಯ ನಿಜಗಡಲಸುಖವನು ?
--------------
ದೇಶಿಕೇಂದ್ರ ಸಂಗನಬಸವಯ್ಯ
ಹರಲಿಂಗಕೆ ಹರಿ ಅಜಾಸುರರು ಸರಿಯೆಂಬ ಕುರಿಮಾನವ ನೀ ಕೇಳಾ. ಹರ ನಿತ್ಯ, ಹರಿಯಜಾಸುರರು ಅನಿತ್ಯ. ಅದೇನು ಕಾರಣವೆಂದರೆ : ಹರಿಗೆ ಹತ್ತು ಪ್ರಳಯ, ಬ್ರಹ್ಮಂಗೆ ಅನಂತಪ್ರಳಯ, ಸುರರ ಪ್ರಳಯವೆಂದರೆ ಅಳವಲ್ಲ. ಪ್ರಳಯಕ್ಕೆ ಗುರಿಯಾಗಿ ಸತ್ತು ಸತ್ತು ಹುಟ್ಟುವ ಅನಿತ್ಯದೈವವ ತಂದು ನಿತ್ಯವುಳ್ಳ ಶಿವಂಗೆ ಸರಿಯೆಂಬ ವಾಗದ್ವೈತಿಯ ಕಂಡರೆ ನೆತ್ತಿಯ ಮೇಲೆ ಟೊಂಗನಿಕ್ಕೆಂದಾತ ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಕೈದ ಮಾಡಿದ ಕಾರುಕ ಧೀರನಹನೆ? ಚಿತ್ತದ ಆಮ್ನೆಯಿಂದ ಶಾಸ್ತ್ರ ಭಿತ್ತಿಯಿಂದ, ಕವಿತ್ವದ ಲಕ್ಷಣದಿಂದ, ಅನಿತ್ಯ ಅನಿತ್ಯವೆಂದು ಮಿಕ್ಕಾದವರಿಗೆ ಹೇಳುವ ಕರ್ತುವಲ್ಲದೆ ತತ್ ಪ್ರಾಣಲಿಂಗಾಂಗಯೋಗ ತಾನಾಗಬೇಕು. ಆತುರ ವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಅರಸನಾ(ಳುವ)ಗ್ರಾಮ ಪುರ ಪಟ್ಟಣದೊಳಗೆ ತಾನಿದ್ದು ಸೀಮೆ ನಿಸ್ಸೀಮೆ ಇದೇನಯ್ಯಾ ಬಂಧ ನಿರ್ಬಂಧವಿಲ್ಲಾಗಿ ಶರಣಂಗೆ ಸಂದು ಸಾಧನ (ಸಂಶಯಳ)ವುಂಟೆ ಎಡೆಗೆ ಕಡೆಯುಂಟೆ? ಅಗುಸೆಯಲ್ಲಿ ಹೋಗುವನೆ? ಚೋರಖಂಡಿಯಲ್ಲಿ ನುಸುಳುವನೆ ಇದು ಕಾರಣ ಕೂಡಲಚೆನ್ನಸಂಗಾ. ಅನಿತ್ಯ ಮಿಥ್ಯವ ಕಳೆದು ನಿತ್ಯನಾದ ಶರಣ.
--------------
ಚನ್ನಬಸವಣ್ಣ
ಜಡ, ಅಸತ್ಯ, ಸುಖ ದುಃಖ, ಅನಿತ್ಯ, ಖಂಡಿತ ಎಂಬೈದು ಲಕ್ಷಣ ಮಾಯಾತ್ಮಕವಯ್ಯಾ. ಮೂಢಮಯ ಕಲ್ಲು ಮೊದಲಾದವೆ ಜಡದೃಶ್ಯ ನೋಡಯ್ಯಾ. ಮೃಗದಲ್ಲಿಲ್ಲದ ಶಶವಿಷಾಣಾಧಿಕವೆ ಅಸತ್ಯವಯ್ಯಾ. ರಜೋಗುಣಿಯ [ಸಹಾ]ಸಹ್ಯ ವೃತ್ತಿಯೆ [ಸುಖ] ದುಃಖ ಕಂಡಯ್ಯಾ. ತೋರಿ ಕೆಡುವ ದೇಹಾಧಿಕವೆ ಅನಿತ್ಯ ಕಂಡಯ್ಯಾ. ಕಾಲಪರಿಚ್ಛೇದಾಧಿಕವೆ ಖಂಡಿತ ನೋಡಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಶರೀರಘಟಕ್ಕೆ ಶಿಲೆಮೂರ್ತಿ ವಸ್ತುವಾಯಿತ್ತು, ಆತ್ಮಘಟಕ್ಕೆ ಅರಿವುಮೂರ್ತಿ ವಸ್ತುವಾಯಿತ್ತು. ನೇಮಘಟ ನಿತ್ಯಲಿಂಗವನರಿತು, ನಿತ್ಯಲಿಂಗ ಅನಿತ್ಯಲಿಂಗವನರಿತು, ಅನಿತ್ಯ ಚಿತ್ಪ್ರಕಾಶವನೆಯ್ದಿ ಅದರ ಮರೆಯಲ್ಲಿ ಕುಡಿವೆಳಗು ತೋರುತ್ತದೆ, ಸದಾಶಿವಮೂರ್ತಿಲಿಂಗದಲ್ಲಿ.
--------------
ಅರಿವಿನ ಮಾರಿತಂದೆ
-->