ಅಥವಾ

ಒಟ್ಟು 3 ಕಡೆಗಳಲ್ಲಿ , 2 ವಚನಕಾರರು , 3 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹುಟ್ಟಿದ ಶಿಶು ಧರಣಿಯ ಮೇಲೆ ಬಿದ್ದಂತೆ ವಿಭೂತಿಯ ಪಟ್ಟವಂ ಕಟ್ಟಿ, ಲಿಂಗಸ್ವಾಯತವ ಮಾಡಿ ಪ್ರಸಾದದೆಣ್ಣೆ ಬೆಣ್ಣೆ ಹಾಲನೆರೆದು ಸಲಹೂದೆ ಅದು ಸದಾಚಾರ. ಆ ಮಗುವಿಂಗೆ ಈರಿಲು [ಗಾಳಿ]ಭೂತ ಸೋಂಕಿತ್ತೆಂದು ಮಾಡುವ ಭಕ್ತಂಗೆ ಗುರುವಿಲ್ಲ, ಲಿಂಗವಿಲ್ಲ, ಅವ ಪಂಚಮಹಾಪಾತಕ ನೋಡಾ. ಇದನರಿದಾತ ಎನ್ನ ಮಾತಾಪಿತನು. ನಿಮ್ಮ ನಚ್ಚಿದ ಮಚ್ಚು ಅಚ್ಚೊತ್ತಿದಂತಿರಬೇಕು ಕೂಡಲಚೆನ್ನಸಂಗಯ್ಯಾ.
--------------
ಚನ್ನಬಸವಣ್ಣ
ಜಾತಕರ್ಮ ಶುಭಕರ್ಮ ಪ್ರೇತಕರ್ಮವ ಮಾಡುವರು ಲೋಕದ ಮನುಜರು. ಅದೆಂತೆಂದಡೆ: ಈರಿಲು, ಮೂವಟ್ಟಲು; ಹಸೆ-ಹಂದರ ತೊಂಡಿಲು ಬಾಸಿಂಗ; ಹಣೆಯಕ್ಕಿ ಹೆಣನ ಸಿಂಗಾರ ಶ್ರಾದ್ಧಕೂಳು_ ಈ ಪರಿಯ ಮಾಡುವನೆ ಶಿವಭಕ್ತ [ಅಲ್ಲ] ಅದೆಂತೆಂದಡೆ; ಹುಟ್ಟಿದ ಮಕ್ಕಳಿಗೆ ಲಿಂಗಧಾರಣೆ, ನೆಟ್ಟನೆ ವಿವಾಹದಲ್ಲಿ ಶಿವಗಣಂಗಳ ಪ್ರಸಾದ, ದೇವರಪಾದಕ್ಕೆ ಸಂದಲ್ಲಿ ಶಿವಭಕ್ತಂಗೆ ವಿಭೂತಿವೀಳೆಯಂಗೊಟ್ಟು ಸಮಾಧಿಪೂರ್ಣನಂ ಮಾಡುವುದೆ ಶಿವಾಚಾರ. ಲೋಕದ ಕರ್ಮವ ಮಾಡಿದಡೆ ಆತ ಭಕ್ತನಲ್ಲ, ಲಿಂಗದೂರ ಅಘೋರನರಕಿಯಯ್ಯಾ, ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ವ್ರತಸ್ಥನರಿ[ದು] ವ್ರತಕ್ಕೆ ಗುರಿಯಹನಲ್ಲದೆ, ಗುರುವ ಕಾಣ, ಲಿಂಗವ ಕಾಣ, ಜಂಗಮವ ಕಾಣ. ಪಾದೋದಕ ಪ್ರಸಾದಕ್ಕೆ ಅವನಂದೇ ದೂರ. ಸಾವಿರನೋಂಪಿಯ ನೋಂತು, ಪಾರದ್ವಾರವ ಮಾಡಿದಂತಾಯಿತ್ತು, ಅವನ ವ್ರತ. ಬಂದ ಜಂಗಮದ ಕಪ್ಪರ ಕಮಂಡಲ, ತಮ್ಮ ಭಾಂಡ ಭಾಜನವ ಸೋಂಕಿಹವೆಂಬ ಮುತ್ತಮುದಿಹೊಲೆಯನ ಮುಖವ ನೋಡಲಾಗದು. ಅವನ ಮನೆಯಲುಂಡ ಜಂಗಮ, ಮೂವಟ್ಟಲು ಈರಿಲು ಮೂರುದಿನ ಸತ್ತ ಹಂದಿಯ ಕೂಳನುಂಡಂತೆ, ಕಲಿದೇವರದೇವಾ.
--------------
ಮಡಿವಾಳ ಮಾಚಿದೇವ
-->