ಅಥವಾ

ಒಟ್ಟು 7 ಕಡೆಗಳಲ್ಲಿ , 4 ವಚನಕಾರರು , 5 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲೆ ಮನವೆ ಕೇಳಾ, ಶಿವನು ನಿನಗೆ ಅನಂತಾನಂತಯುಗದಲ್ಲಿ ಶಿವಾನುಭಾವಸ್ಥಿತಿಯ ಕಳುಹಿತ್ತ, ಲೋಕಕ್ಕೆರಡು ಸ್ಥಿತಿಯಲ್ಲಿ ಜನ್ಮಾದಿ ಕಟ್ಟಣೆಯ ಹರಿಯೆಂದು. ಆ ಪ್ರಭಾಮೂರ್ತಿಯಾಗಿ ಗುರುವೆಂಬ ನಾಮವಂ ಧರಿಸಿ, ಮಹಾಲಿಂಗೈಕ್ಯವನು, ಮಹಾಲಿಂಗ ಯೋಗಪ್ರಭಾವವನು, ಅಷ್ಟಾಷಷ್ಟಿತೀರ್ಥಂಗಳನು, ಶಿವನು ಅನಂತಪ್ರಾಣಿಗಳಿಗೆ ಸಾಧನವೆಂದು ಮಾಡಿದನು. ಮಂದರಗಿರಿ ರಜತಗಿರಿ ಮೇರುಗಿರಿ ಹಿಮಗಿರಿ ಮೊದಲಾದ ಅಷ್ಟಕುಲಪರ್ವತಂಗಳನು ಸ್ಥಲಂಗೊಳಿಸಿದನು. ಅನಾದಿಸಂಸಿದ್ಧದಾದಿಲಿಂಗೇಶ್ವರದೇವರ ಸ್ಥಲಂಗೊಳಿಸಿದನು. ಎಲ್ಲಾ ಯಂತ್ರಕ್ಕೆ ಅಮೃತಕಳೆಯನೀಯಲೆಂದು ಕಪಿಲಸಿದ್ಧಮಲ್ಲಿಕಾರ್ಜುನದೇವರ ಸ್ಥಲಂಗೊಳಿಸಿದನು. ಸಿದ್ಧಸಿಂಹಾಸನದ ಮೇಲೆ ನಾಮಕರಣ ರಾಮನಾಥನಾಗಿ ಗುರು ಮತ್ರ್ಯಕ್ಕೆ ಬಂದ ಕಾಣಾ ಮನವೆ. ಆಚಾರ ಗೋಚರವಾಗಬೇಕೆಂದು ಆ ನಿರ್ವಯಲೆಂಬ ಸ್ವಾಮಿ ತಾನೆಯಾಗಿ, ಓಂಕಾರ ಊಧ್ರ್ವರೇತ ಶಿವನಾಗಿ, ಬೆಳಗನುಟ್ಟು ಬಸವಣ್ಣ ಬಂದ ಕಾಣಾ ಮನವೆ. ಎಲ್ಲಾ ಪ್ರಾಣಿಗಳಿಗೆ ಜಿಹ್ವೆಗಳನು ಪವಿತ್ರವ ಮಾಡಲೆಂದು ಶುದ್ಧಸಿದ್ಧಪ್ರಸಿದ್ಧಪ್ರಸಾದವ ತೋರಿಹೆವೆನುತ ಮಹಾಪ್ರಸಾದಿ ಚೆನ್ನಬಸವಣ್ಣ ಬಂದ ಕಾಣಾ ಮನವೆ. ಜ್ಞಾನವಾಹನವಾಗಿ ತನುಮನಧನದ ಮೇಲೆ ನಡೆದು, ಅನಂತಮೂರ್ತಿಗಳ ಪವಿತ್ರವ ಮಾಡಲೆಂದು ಎಲ್ಲಾ ಸಂಬಂಧವನು ಕರಸ್ಥಲದಲ್ಲಿ ಹಿಡಿದುಕೊಂಡು, ಜಂಗಮವಾಗಿ ಪ್ರಭುದೇವರು ಬಂದರು ಕಾಣಾ ಮನವೆ. ಗುರುವೆ ಮಹಾಭಕ್ತನಾಗಿ ಅರ್ಪಿತವ ಮಾಡಿ, ಪ್ರಸಾದಿಯ ಅನುಭಾವದ ಆಭರಣವೆ ಜಂಗಮವಾಗಿ, ಇಂತೀ ಚತುರ್ವಿಧಸ್ಥಲಂಗಳು ಎನ್ನ ಪ್ರಾಣನ ಕೊರಳಲ್ಲಿಹವಾಗಿ, ನಿಮ್ಮ ಅನಿಮಿಷವಾಗಿ ನಾ ನೋಡುತಿರ್ದೆ ಕಾಣಾ, ಕಲಿದೇವಯ್ಯಾ.
--------------
ಮಡಿವಾಳ ಮಾಚಿದೇವ
ಸ್ವಸ್ತಿ ಸಮಸ್ತವಿದ್ಯಾದಿ ಮೂಲವಹ ಋಕ್‍ಯಜುಸ್ಸಾಮಾಥರ್ವಣದಲ್ಲಿ ಅಂತರ್ಗತವಾಗಿಹ ಶ್ರೀರುದ್ರ, ಪಂಚಬ್ರಹ್ಮ, ಶ್ವೇತಾಶ್ವತರ, ಬ್ರಹದಾರಣ್ಯಕ, ಕೇನ, ಈಶ, ಜಾಬಾಲ, ಗರ್ಭ, ಕಾಲಾಗ್ನಿರುದ್ರ, ವಾಜಸನೇಯ, ಶಿವಸಂಕಲ್ಪ, ಬ್ರಹ್ಮಬಿಂದು, ಕಾತ್ಯಾಯನ, ಕಣ್ವ ಇತ್ಯಾದಿ ನಿಖಿಲೋಪನಿಷತ್ತುಗಳನ್ನು ಪ್ರತಿಪಾದಿಸಿ ನೋಡಲು, ನಿತ್ಯಶುದ್ಧ ನಿರ್ಮಲಪರಶಿವನನ್ನು ಸತ್ಯಶುದ್ಧ ಶಿವಾಚಾರಸಂಪನ್ನಭಕ್ತರನಲ್ಲದೆ ವಿಸ್ತರಿಸಿ ಸ್ತುತಿಗೈದುದಿಲ್ಲ. ಅದಕ್ಕೆ ಶಪಥ, ಆ ವೇದಪುರಷರ ಚಿತ್ತವೇ ಸಾಕ್ಷಿ. ಶಿವನ ಶರಣರು ವಾಙõïಮಾನಸಾಗೋಚರರು ಎಂದು ಹೇಳುತ್ತಲಿದೆ ಶ್ರುತಿ. ಅಖಿಲಬ್ರಹ್ಮಾಂಡಂಗಳಿಗೆ ಪಿತಮಾತೆಯಹ ಶಿವನಲ್ಲಿ ಶಿವನ ಶರಣನು ಅವಿರಳನೆಂಬುದಕ್ಕೆ `ಯಥಾ ಶಿವಸ್ತಥಾ ಭಕ್ತಃ' ಎಂಬ ವೇದವಾಕ್ಯವೇ ಪ್ರಮಾಣ. `ನಾಭ್ಯಾ ಅಸೀದಂತರಿಕ್ಷಂ ಶೀಷ್ರ್ಣೋzõ್ಞ್ಯಃ ಸಮವರ್ತತ' ಎಂಬ ಶ್ರುತಿ, ಸಕಲ ಬ್ರಹ್ಮಾಂಡಕೋಟಿಗಳು ಶಿವನ ನಾಭಿಕೂಪದಲ್ಲಿ ಅಡಗಿಹವೆಂದು ಹೇಳಿತ್ತು. `ಭಕ್ತಸ್ಯ ಹೃತ್ಕಮಲಕರ್ಣಿಕಾಮಧ್ಯಸ್ಥಿತೋ[s]ಹಂ ನ ಸಂಶಯಃ ಎಂಬ ಶ್ರುತಿ, ಅಂತಹ ಶಿವನು ಸದ್ಭಕ್ತನೊಳಗಡಗಿಹನೆಂದು ಹೇಳಿತ್ತು. `ಅಘೋರೇಭ್ಯೋ[s]ಥ ಘೋರೇಭ್ಯೋ ಘೋರಘೋರತರೇಭ್ಯಃ ಸರ್ವೇಭ್ಯಃ ಸರ್ವಶರ್ವೆರಭ್ಯೋ ನಮಸ್ತೆ ಅಸ್ತು ರುದ್ರರೂಪೇಭ್ಯಃ ಎಂಬ ಶ್ರುತಿ, ಶಿವನ ಅಘೋರಮೂರ್ತಿಯ ನಿತ್ಯತೇಜೋಮೂರ್ತಿಯೆಂದು ಹೇಳಿತ್ತು. ಜ್ಯೋತಿರ್ಲಿಂಗತ್ವಮೇವಾರ್ಯೇ ಲಿಂಗೀ ಚಾಹಂ ಮಹೇಶ್ವರಿ ತದೇತದವಿಮುಕ್ತಾಖ್ಯಂ ಜ್ಯೋತಿರಾಲೋಕ್ಯತಾಂ ಪ್ರಿಯೇ ಎಂಬ ವಾಕ್ಯ, ಶರಣಸತಿ ಲಿಂಗಪತಿಯಹ ಶಿವನ ಶರಣನೇ ಜ್ಯೋತಿರ್ಲಿಂಗವೆಂದು ಹೇಳಿತ್ತು. ತ್ರ್ಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ ಉರ್ವಾರುಕಮಿವ ಬಂಧನಾನ್ಮೃತ್ಯೋರ್ಮುಕ್ಷೀಯ ಮಾಮೃತಾತ್ ಎಂಬ ಶ್ರುತಿ, ಶಿವಧ್ಯಾನ ಸ್ತುತಿ ನಿರೀಕ್ಷಣೆ ಪೂಜೆಯಿಂದಲ್ಲದೆ ಜನ್ಮ ಮೃತ್ಯು ಜರಾ ವ್ಯಾಧಿ ಹಿಂಗಿ ಪರಮಸುಖ ಪರಮನಿರ್ವಾಣವಾಗದೆಂದು ಹೇಳಿತ್ತು. `ಅಪವರ್ಗಪದಂ ಯಾತಿ ಶಿವಭಕ್ತೋ ನ ಚಾಪರಃ' ಎಂಬ ವಾಕ್ಯ, ಮುಕ್ತಿ ಶಿವಭಕ್ತಂಗಲ್ಲದೆ ಮತ್ತೊಬ್ಬರಿಗಿಲ್ಲವೆಂದು ಹೇಳಿತ್ತು. `ಋತಂ ಸತ್ಯಂ ಪರಂ ಬ್ರಹ್ಮ ಪುರುಷಂ ಕೃಷ್ಣಪಿಂಗಲಂ ಊಧ್ರ್ವರೇತಂ ವಿರೂಪಾಕ್ಷಂ ವಿಶ್ವರೂಪಾಯ ತೇ ನಮಃ' ಎಂಬ ಶ್ರುತಿ, ಪರಬ್ರಹ್ಮವೆಂಬುದು ಶಿವನಲ್ಲದೆ ಬೇರೆ ಬೇರೆ ಮತ್ತೊಂದು ವಸ್ತುವಿಲ್ಲವೆಂದು ಹೇಳಿತ್ತು. `ಬ್ರಹ್ಮಣಿ ಚರತಿ ಬ್ರಾಹ್ಮಣಃ' ಎಂಬ ವಾಕ್ಯ, ಅಂತಹ ಬ್ರಹ್ಮವ ಚಿಂತಿಸಿ ನಿರೀಕ್ಷಿಸಿ ಸ್ತುತಿಸಿ ಪೂಜಿಸಿ ಪ್ರಸನ್ನಪ್ರಸಾದವ ಪಡೆವ ಸದ್ಭಕ್ತನೇ ಮಹಾಬ್ರಾಹ್ಮಣನೆಂದು ಹೇಳಿತ್ತು. `ವಿಶ್ವತಶ್ಚಕ್ಷುರುತ ವಿಶ್ವತೋ ಮುಖೋ ವಿಶ್ವತಃ ಪಾತ್ ವಿಶ್ವಾಧಿಕೋ ರುದ್ರೋ ಮಹಾಋಷಿಸ್ಸರ್ವೋ ಹಿ ರುದ್ರಃ' ಎಂಬ ಶ್ರುತಿ, ಸಕಲ ಜೀವರ ಶಿವನೆಂದು ಹೇಳಿತ್ತು. `ಭಕ್ತಸ್ಯ ಚೇತನೋ ಹ್ಯಹಂ' ಎಂಬ ವಾಕ್ಯ, ಶಿವಭಕ್ತಂಗೆ ನಾನೇ ಚೈತನ್ಯನೆಂದು ಹೇಳಿತ್ತು. ಇಂತಪ್ಪ ಶಿವಲಿಂಗಾರ್ಚನೆಯ ಮಾಡುವ ಶಿವಭಕ್ತನ ಶ್ರೀಮೂರ್ತಿಗಿನ್ನು ಸರಿಯುಂಟೆರಿ `ವಾಚೋತೀತಂ ಮನೋತೀತಂ ಭಾವಾತೀತಂ ಪರಂ ಶಿವಂ ಸರ್ವಶೂನ್ಯಂ ನಿರಾಕಾರಂ ನಿತ್ಯತ್ವಂ ಪರಮಂ ಪದಂ' ಇಂತಪ್ಪ ಶಿವನಲ್ಲಿ ಅವಿನಾಭಾವರಪ್ಪ ಶರಣರ ಕಂಡಡೆ ಕರ್ಮಕ್ಷಯ, ನೋಡಿದಡೆ ಕಣ್ಗೆ ಮಂಗಳತರ ನಿರುಪಮಸುಖ, ನುಡಿಸಿದಡೆ ಶಿವರಾತ್ರಿ, ಸಂಭಾಷಣೆ ಮಾಡಿದಡೆ ಜನ್ಮಕರ್ಮಬಂಧನನಿವೃತ್ತಿ, ಜೀವನ್ಮುಕ್ತನಹ, ಇದು ನಿತ್ಯ ಕೇಳಿರಣ್ಣಾ. ದರ್ಶನಾತ್ ಶಿವಭಕ್ತನಾಂ ಸಕೃತ್ಸಂಭಾಷಣಾದಪಿ ಅತಿರಾತ್ರಸ್ಯ ಯಜ್ಞಸ್ಯ ಫಲಂ ಭವತಿ ನಾರದ ಎಂದು ನಾರದಬೋಧೆಯಲ್ಲಿ ಈಶ್ವರ ಹೇಳಿದನು. ಇಂತಪ್ಪ ಈಶ್ವರನ ಕಾಣವು ವೇದಂಗಳು. `ಯಜ್ಞೇನ ಯಜ್ಞಮಯಜಂತ ದೇವಾಸ್ತಾನಿ ಧರ್ಮಾಣಿ ಪ್ರಥಮಾನ್ಯಾಸನ್' ಎಂದುದಾಗಿ, ಇಂತು ವೇದಕ್ಕತೀತನಹಂತಹ ಶಿವನ ಶರಣರ ಮಾಹಾತ್ಮೆಯ ಹೊಗಳಲ್ಕೆ ವೇದಕ್ಕೆ ವಶವಲ್ಲ, ಮಂದಮತಿಮಾನವರ ಮಾತಂತಿರಲಿ. ಶಿವಶರಣರ ಮಹಾಮಹಿಮೆಗೆ ನಮೋ ನಮೋ ಎಂಬೆ ಕಾಣಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಸಾಕಾರವಿಡಿದು ಪರಬ್ರಹ್ಮ, ನಿರಾಕಾರವಿಡಿದು ಪರಬ್ರಹ್ಮವೆಂಬಿರಿ. ಪರಬ್ರಹ್ಮವ ನುಡಿವಿರಿ, ಪರಬ್ರಹ್ಮವನರಿದಿಹೆವೆಂಬಿರಿ, ಅರಿಹಿಸಿಹೆವೆಂಬಿರಿ, ಆನೆ ಪರಬ್ರಹ್ಮವೆಂಬಿರಿ, ಪರಬ್ರಹ್ಮವನರಿಯದೆ ನುಡಿವಿರಿ, ಬ್ರಹ್ಮದೊಡಕು ಅರಿದು ಕಂಡಿರಣ್ಣಾ. ಈ ಬ್ರಹ್ಮದೊಡಕಿಂದ ಮುನ್ನೊಮ್ಮೆ ದೇವಜಾತಿಗಳು ಋಷಿಜನಂಗಳು ಬ್ರಹ್ಮನನು, ಪರಬ್ರಹ್ಮವ ಬೆಸಗೊಳಲು ಅಹಂ ಬ್ರಹ್ಮವೆಂದು ತಲೆಯ ಹೋಗಾಡಿಕೊಂಡುದು ಸರ್ವಪುರಾಣಪ್ರಸಿದ್ಧ, ಇನ್ನೂ ತಲೆಯ ಮೋಟು ಕಾಣಬರುತ್ತದೆ. ಬ್ರಹ್ಮನ ಶಿರ ಪರಬ್ರಹ್ಮದ ಕೈಯಲ್ಲಿದೆ. ಆನೆ ಪರಬ್ರಹ್ಮವೆಂದು ಸನತ್ಕುಮಾರ ಒಟ್ಟೆಯಾದುದು ಸ್ಕಂದ ಪುರಾಣಪ್ರಸಿದ್ಧ. ಅವರಂತಾಗದೆ, ಪರಬ್ರಹ್ಮದ ನೆಲೆಯ ಕೇಳಿರಣ್ಣಾ: ಲಿಂಗವೇ ಪರಬ್ರಹ್ಮವೆಂದು ಅಥರ್ವಣ ಹೇಳುತ್ತದೆ, `ಏಕೋ ರುದ್ರಸ್ಸ ಈಶಾನಃ ಸ ಭಗವಾನ್ ಸ ಮಹೇಶ್ವರೋ ಮಹಾದೇವ ಇತಿ ಈ ಪ್ರಕಾರದಲೆ ಯಜುರ್ವೇದ ಹೇಳುತ್ತಿದ್ದಿತ್ತು. ಋತಂ ಸತ್ಯಂ ಪರಂ ಬ್ರಹ್ಮ ಪುರುಷಂ ಕೃಷ್ಣ ಪಿಂಗಲಂ ಊಧ್ರ್ವರೇತಂ ವಿರೂಪಾಕ್ಷಂ ವಿಶ್ವರೂಪಾಯ ವೈ ನಮಃ ಈ ಪ್ರಕಾರದಲ್ಲಿ ಶಿವಸಂಕಲ್ಪೋಪನಿಷತ್ ಹೇಳುತ್ತಿದೆ. ಋತಂ ಸತ್ಯಂ ಪರಂ ಬ್ರಹ್ಮಪುರುಷಂ ಕೃಷ್ಣ ಪಿಂಗಲಂ ಊಧ್ರ್ವರೇತಂ ವಿರೂಪಾಕ್ಷಂ ತನ್ಮೇ ಮನಶ್ಶಿವಸಂಕಲ್ಪಮಸ್ತು ಎಂದುದಾಗಿ ಲಿಂಗವೇ ಪರಬ್ರಹ್ಮ. ಮುನ್ನೊಮ್ಮೆ ಹರಿಬ್ರಹ್ಮರ ಸಂವಾದದಲ್ಲಿ ಉರಿಲಿಂಗ ಉದ್ಭವವಾದಲ್ಲಿ ಹರಿಬ್ರಹ್ಮಾದಿಗಳು ಸ್ತೋತ್ರವ ಮಾಡಿದರು. ಲೈಂಗ್ಯ ಪುರಾಣದಲ್ಲಿ, ಜ್ವಾಲಾಮಾಲಾವೃತಾಂಗಾಯ ಜ್ವಲನಸ್ತಂಭರೂಪಿಣೇ ನಮಶ್ಶಿವಾಯ ಶಾಂತಾಯ ಬ್ರಹ್ಮಣೇ ಲಿಂಗಮೂರ್ತಯೇ ಇದು ಮುನ್ನೊಮ್ಮೆ ಬ್ರಹ್ಮಕಾರಣ ಲಿಂಗವೇ ಪರಬ್ರಹ್ಮ, ಶಿವನೇ ಪರಬ್ರಹ್ಮವೆಂದು ಮತ್ತೆ ಯಜುರ್ವೇದ ನುಡಿಯುತ್ತಿದೆ. ಈಶಾನಸ್ಸರ್ವವಿದ್ಯಾನಾಮೀಶ್ವರಸ್ಸರ್ವಭೂತಾನಾಂ ಬ್ರಹ್ಮಾಧಿಪತಿ ಬ್ರಹ್ಮಣೋ[s]ಧಿಪತಿಬ್ರ್ರಹ್ಮಾ ಶಿವೋ ಮೇ[s]ಸ್ತು ಸದಾಶಿವೋಂ ಆದಿತ್ಯ ಪುರಾಣದಲೂ ಮಹಾಪುರುಷ ಆದಿತ್ಯ ಹೇಳುತ್ತಿದ್ದಾನೆ: ಪರಬ್ರಹ್ಮಾ ಚ ಈಶಾನ ಏಕೋ ರುದ್ರಸ್ಸ ಏವ ಚ ಭಗವಾನ್ ಮಹೇಶ್ವರಸ್ವಾಕ್ಷಾನ್ಮಹಾದೇವೋ ನ ಸಂಶಯಃ ಯಸ್ಯಾಂತಸ್ಥಾನಿ ಭೂತಾನಿ ಯೇನೇದಂ ಧಾರ್ಯತೇ ಜಗತ್ ಬ್ರಹ್ಮೇತಿ ಯಂ ಜಹುರ್ವೇದಾಃ ಸರ್ವೇ ತಂ ಶರಣಂ ವ್ರಜೇತ್ ಕೂರ್ಮ ಈಶ್ವರಗೀತೆಯಲ್ಲಿ, ಆವ್ಯಕ್ತಂ ಕಾರಣಂ ಪ್ರಾಹುರಾನಂದಂ ಜ್ಯೋತಿರಕ್ಷರಂ ಅಹಮೇವ ಪರಬ್ರಹ್ಮ ಮತ್ತೋ[s]ನ್ಯಂ ಹಿ ನ ವಿದ್ಯತೇ ಅಹಂ ತತ್ಪರಮಂ ಬ್ರಹ್ಮ ಪರಮಾತ್ಮಾ ಸನಾತನಃ ಮಹಾಪುರುಷ ಮನು ಮಾನವಪುರಾಣದಲ್ಲೂ ಹೇಳಿದನು: ಋತಂ ಸತ್ಯಂ ಪರಬ್ರಹ್ಮಪುರುಷಂ ಸೋಮವೀಶ್ವರಂ ಊಧ್ರ್ವರೇತಂ ಸಮುತ್ಪತ್ತಿಸ್ಥಿತಿಸಂಹಾರಕಾರಣಂ ವಿಶ್ವರೂಪಂ ವಿರೂಪಾಕ್ಷಂ ಚಂದ್ರಮೌಳಿಂ ಘೃಣಾನಿಧಿಂ ಹರಣ್ಯಬಾಹುಮದ್ವಂದ್ವಂ ಹಿರಣ್ಯಪತಿಮೀಶ್ವರಂ ಅಂಬಿಕಾಯಾಃ ಪತಿಂ ಸಾಕ್ಷಾದುಮಾಯಾಃ ಪತಿಮಕ್ರಿಯಂ ಪರತತ್ವಂ ಸಮಾಖ್ಯಾತಂ ಶಿವಂ ಧ್ಯಾಯಂತಿ ಸಂತತಂ ತೈತ್ತಿರೀಯ ಶ್ರುತಿ, `ಸದ್ವಿಪ್ರಾಹಿ..... ಎಂದುದಾಗಿ, ಬಹಳ ಬಹಳ ಚಕ್ಷು, ಬಹಳ ಬಹಳ ಮುಖನು, ಬಹಳ ಬಹಳ ಬಾಹು, ಬಹಳ ಪಾದನು, ಇಂತಹ ಬಹಳ ಲಿಂಗವೆ, ಬ್ರಹ್ಮ ಕಾಣಿರಣ್ಣಾ. `ಅಣೋರಣೀಯಾನ್ ಮಹತೋ ಮಹೀಯಾನ್' ಎಂದುದಾಗಿ, ಬಹಳಕ್ಕೆ ಬಹಳ, ಮಹಾಬಹಳ ಲಿಂಗವೆ ಬಹಳಬ್ರಹ್ಮ ಕಾಣಿರಣ್ಣಾ. ಯತೋ ವಾಚೋ ನಿವರ್ತಂತೇ ಅಪ್ರಾಪ್ಯ ಮನಸಾ ಸಹ ನಾದಬಿಂದುಕಳಾತೀತಂ ಗುರುಣಾ ಲಿಂಗಮುದ್ಭವಂ ಎಂದುದಾಗಿ, ಮನೋವಾಕ್ಕಾಯ ನಾದಬಿಂದುಕಳೆಗೆ ಅತೀತನಾದ ಮಹಾಬಹಳ ಲಿಂಗವನು ಶ್ರೀಗುರು ನಿರೂಪಿಸಿ ಕೊಟ್ಟನಾಗಿ ಈ ಲಿಂಗವೇ ಪರಬ್ರಹ್ಮ ಕಾಣಿರಣ್ಣಾ. ಇದು ಕಾರಣ, ಪರಬ್ರಹ್ಮಲಿಂಗವೆಂದು ಧ್ಯಾನಿಸಿ ಪೂಜಿಸಿ ಮಹಾನಂದ ಪರಮುಕ್ತಿಯನೈದಿದರು ಪೂರ್ವದಲ್ಲಿ ದೇವಜಾತಿಗಳು ಹಲಬರು, ಇದು ಪುರಾಣ ಪ್ರಸಿದ್ಧ. ಕಲಿಯುಗದಲ್ಲಿ ದೃಷ್ಟ: ಬಸವರಾಜದೇವರು ಮೊದಲಾದ ಅಸಂಖ್ಯಾತ ಮಾಹೇಶ್ವರರು ಇದನರಿದು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಲಿಂಗವೆ ಪರಬ್ರಹ್ಮವೆಂದು ಅರಿದು ಧ್ಯಾನಿಸಿ ಪೂಜಿಸಿ ಮಹದಾನಂದಮುಕ್ತಿಯನೈದಿದರಣ್ಣಾ.
--------------
ಉರಿಲಿಂಗಪೆದ್ದಿ
ಭವಿತನಕ್ಕೆ ಹೇಸಿ ಭಕ್ತನಾಗಬೇಕೆಂಬಾತನು ಸದ್ಗುರುವನರಸಿಕೊಂಡು ಬಂದು ಅವರ ಕಾರುಣ್ಯದಿಂದ ಮುಕ್ತಿಯಂ ಪಡೆದೆನೆಂದು ಆ ಶ್ರೀಗುರುವಿಂಗೆ ದಂಡಪ್ರಣಾಮಂ ಮಾಡಿ ಭಯಭಕ್ತಿಯಿಂದ ಕರಂಗಳಂ ಮುಗಿದು ನಿಂದಿರ್ದು ಎಲೆ ದೇವಾ ! ಎನ್ನ ಭವಿತನಮಂ ಹಿಂಗಿಸಿ ನಿಮ್ಮ ಕಾರುಣ್ಯದಿಂದೆನ್ನ ಭಕ್ತನಂ ಮಾಡುವುದೆಂದು ಶ್ರೀಗುರುವಿಂಗೆ ಬಿನ್ನಹವಂ ಮಾಡಲು ಆ ಶ್ರೀಗುರುವು ಅಂತಪ್ಪ ಭಯಭಕ್ತಿ ಕಿಂಕರತೆಯೊಳಿಪ್ಪ ಶಿಶುವಂ ಕಂಡು ತಮ್ಮ ಕೃಪಾವಲೋಕನದಿಂ ನೋಡಿ ಆ ಭವಿಯ ಪೂರ್ವಾಶ್ರಯಮಂ ಕಳೆದು ಪೂನರ್ಜಾತನಂ ಮಾಡಿ ಆತನ ಅಂಗದ ಮೇಲೆ ಲಿಂಗಪ್ರತಿಷೆ*ಯಂ ಮಾಡುವ ಕ್ರಮವೆಂತೆಂದಡೆ_ ಓಂ ಅಗ್ನಿರಿತಿ ಭಸ್ಮ ಓಂ ವಾಯುರಿತಿ ಭಸ್ಮ ಓಂ ಜಲಮಿತಿ ಭಸ್ಮ ಓಂ ಸ್ಥಲಮಿತಿ ಭಸ್ಮ ಓಂ ವ್ಯೋಮೇತಿ ಭಸ್ಮ ಓಂ ಸೋಮೇತಿ ಭಸ್ಮ ಓಂ ಸೂರ್ಯೇತಿ ಭಸ್ಮ ಓಂ ಆತ್ಮೇತಿ ಭಸ್ಮ ಎಂಬೀ ಮಂತ್ರದಿಂದ ಆತನ ಅಷ್ಟತನುವಂ ಶುದ್ಧವ ಮಾಡುವುದು ಇನ್ನು ಆತನ ಜೀವ ಶುದ್ಧವ ಮಾಡುವ ಕ್ರಮವೆಂತೆಂದಡೆ_ ಓಂ ಅಸ್ಯ ಪ್ರಾಣಪ್ರತಿಷಾ* ಮಂತ್ರಸ್ಯ ಬ್ರಹ್ಮವಿಷ್ಣು ಮಹೇಶ್ವರಾ ಋಷಯಃ ಋಗ್ಯಜುಃ ಸಾಮಾಥರ್ವಣಾ ಶ್ಫಂದಾಂಸಿ ಸದಾಶಿವ ಮಹಾಪ್ರಾಣ ಇಹಪ್ರಾಣ ಮಮ ಜೀವ ಅಯಂ ತಥಾ ಮಮಾಸಕ್ತ ಸರ್ವೇಂದ್ರಿಯಾಣಿ ವಾಙ್ಮನಶ್ಚಕ್ಷುಃ ಶ್ರೋತ್ರ ಜಿಹ್ವಾಘ್ರಾಣ ಮನೋಬುದ್ಧಿ ಚಿತ್ತ ವಿಜ್ಞಾನವ? ಮಮ ಶರೀರೇ ಅಂಗಸ್ಯ ಸುಖಂ ಸ್ಥಿರಿಷ್ಯತಿ ಜೀವಃ ಶಿವಃ ಶಿವೋ ಜೀವಃ ಸಜೀವಃ ಕೇವಲಃ ಶಿವಃ ಪಾಶಬದ್ಧೋ ಭವೇಜ್ಜೀವಃ ಪಾಶಮುಕ್ತಃ ಶದಾಶಿವಃ ಎಂದೀ ಮಂತ್ರದಿಂದ ಆತನ ಜೀವನ ಶುದ್ಧವಂ ಮಾಡುವುದು. ಇನ್ನು ಆತ್ಮಶುದ್ದವ ಮಾಡುವ ಕ್ರಮವೆಂತೆಂದಡೆ_ ಓಂ ಶಿವಾತ್ಮಕಸುಖಂ ಜೀವೋ ಜೀವಾತ್ಮಕಸುಖಂ ಶಿವಃ ಶಿವಜೀವಾತ್ಮಸಂಯೋಗೇ ಪ್ರಾಣಲಿಂಗಂ ತಥಾ ಭವೇತ್ ಎಂದೀ ಮಂತ್ರದಿಂದ ಆತನ ಆತ್ಮನ ಶುದ್ಧವಂ ಮಾಡುವುದು. ಇನ್ನು ವಾಕ್ಕು ಪಾಣಿ ಪಾದ ಗುಹ್ಯ ಪಾಯುವೆಂಬ ಕರ್ಮೇಂದ್ರಿಯಂಗಳ ಮೇಲಣ ಇಂದ್ರಿಯ ಲಿಖಿತವಂ ತೊಡೆದು ಲಿಂಗಲಿಖಿತವಂ ಮಾಡುವ ಕ್ರಮವೆಂತೆಂದಡೆ_ ಓಂ [ಮೇ] ನೇತ್ರೇ ತ್ರ್ಯಂಬಕಃ ಪಾತು ಮುಖಂ ಪಾತು ಮಹೇಶ್ವರಃ ಕuõ್ರ್ಞ ಪಾತು ಶಂಭುರ್ಮೇ ನಾಸಿ ಕಾಯಾಂ ಭವೋದ್ಭವಃ ವಾಗೀಶಃ ಪಾತು ಮೇ ಜಿಹ್ವಾಮೋಷ*ಂ ಪಾತ್ವಂಬಿಕಾಪತಿಃ ಎಂದೀ ಮಂತ್ರದಿಂದ ಆತನ ಪಂಚೇಂದ್ರಿಯಂಗಳ ಮೇಲಣ ಇಂದ್ರಿಯ ಲಿಖಿತಮಂ ತೊಡೆದು ಲಿಂಗಲಿಖಿತವಂ ಮಾಡುವುದು. ಇನ್ನು ಮನ ಬುದ್ಧಿ ಚಿತ್ತ ಅಹಂಕಾರವೆಂಬ ಅಂತಃಕರಣ ಚತುಷ್ಟಯಂಗಳ ನಿವರ್ತನೆಯ ಮಾಡುವ ಕ್ರಮವೆಂತೆಂದಡೆ_ ಮನದಲ್ಲಿ ಧ್ಯಾನವಾಗಿ ಬುದ್ಧಿಯಲ್ಲಿ ವಂಚನೆಯಿಲ್ಲದೆ ಚಿತ್ತವು ದಾಸೋಹದಲ್ಲಿ ಅಹಂಕಾರವು ಜ್ಞಾನದಲ್ಲಿ ಈ ಮರ್ಯಾದೆಯಲ್ಲಿ ಚತುರ್ವಿಧಮಂ ನಿವರ್ತನೆಯಂ ಮಾಡುವುದು. ಇನ್ನು ಆತಂಗೆ ಪಂಚಗವ್ಯಮಂ ಕೊಟ್ಟು ಏಕಭುಕ್ತೋಪವಾಸಂಗಳಂ ಮಾಡಿಸಿ ಪಂಚಭೂತಸ್ಥಾನದ ಅಧಿದೇವತೆಗಳಂ ತೋರುವುದು ಅವಾವೆಂದಡೆ_ ಬ್ರಹ್ಮಾ ವಿಷ್ಣುಶ್ಚ ರುದ್ರಶ್ಚ ಈಶ್ವರಶ್ಚ ಸದಾಶಿವಃ ಏತೇ ಗರ್ಭಗತಾ ಯಸ್ಯ ತಸ್ಮೈ ಶ್ರೀಗುರವೇ ನಮಃ ಎಂದೀ ಮಂತ್ರದಿಂದ ಆತನ ಪಂಚಭೂತ ಶುದ್ಧಿಯಂ ಮಾಡುವುದು. ಈ ಕ್ರಮದಲ್ಲಿ ಶುದ್ಧಾತ್ಮನಂ ಮಾಡಿದ ಬಳಿಕ ಆತನನ್ನು ಗಣತಿಂಥಿಣಿಯ ಮುಂದೆ ನಿಂದಿರಿಸುವುದು. ನಿಂದಿರ್ದಾತನಂ ದಂಡಪ್ರಣಾಮಮಂ ಮಾಡಿಸುವ ಕ್ರಮವೆಂತೆಂದಡೆ_ ಅನಂತ ಜನ್ಮಸಂಪ್ರಾಪ್ತ ಕರ್ಮೇಂಧನವಿದಾಹಿನೇ ಜ್ಞಾನಾನಲಪ್ರಭಾವಾಯ ತಸ್ಮೈ ಶ್ರೀಗುರವೇ ನಮಃ ಕರ್ಮಣಾ ಮನಸಾ ವಾಚಾ ಗುರು ಭಕ್ತೈತುವತ್ಸಲಃ ಶರೀರಂ ಪ್ರಾಣಮರ್ಥಂ ಚ ಸದ್ಗುರುಭ್ಯೋ ನಿವೇದಯೇತ್ ಪ್ರಣಮ್ಯ ದಂಡವದ್ಭೂಮೌ ಅಷ್ಟಮಂತ್ರೈಃ ಸಮರ್ಚಯೇತ್ ಶ್ರೀಗುರೋಃ ಪಾದಪದ್ಮಂಚ ಗಂಧಪುಷ್ಪಾಕ್ಷತಾದಿಭಿಃ ಅನ್ಯಥಾ ವಿತ್ತಹೀನೋ[s]ಪಿ ಗುರುಭಕ್ತಿಪರಾಯಣಃ ಕೃತ್ವಾ ದಂಡನಮಸ್ಕಾರಂ ಸ್ವಶರೀರಂ ನಿವೇದಯೇತ್ ಎಂದೀ ಮಂತ್ರದಿಂದ ದಂಡಪ್ರಣಾಮವಂ ಮಾಡಿಸುವುದು ಆತನ ರೈವಿಡಿದೆತ್ತುವ ಕ್ರಮವೆಂದರೆ ಗುರುಃ ಪಿತಾ ಗುರುರ್ಮಾತಾ ಗುರುರೇವ ಹಿ ಬಾಂಧವಃ ಗುರುದೈವಾತ್ಪರಂ ನಾಸ್ತಿ ತಸ್ಮೈ ಶ್ರೀಗುರವೇ ನಮಃ ಓಂ ಗುರುದೇವೋ ಭವ, ಓಂ ಪಿತೃದೇವೋ ಭವ, ಓಂ ಆಚಾರ್ಯದೇವೋ ಭವ ಎಂದೀ ಮಂತ್ರದಿಂದ ಆತನ ಕೈವಿಡಿದೆತ್ತುವುದು ಇನ್ನು ಭೂಶುದ್ಧಿಯಂ ಮಾಡುವ ಕ್ರಮವೆಂತೆಂದಡೆ_ ಓಂ ಶಿವಶಿವ ಶಿವಾಜ್ಞಾ ವಿಷ್ಣುಪ್ರವರ್ತಮಾನುಷಾ ಅಪವಿತ್ರಃ ಪವಿತ್ರೋವಾ ಸರ್ವಾವಸ್ಥಾಂಗತೋ[s]sಪಿ ವಾ ಯಃ ಸ್ಮರೇತ್ ಪುಂಡರೀಕಾಕ್ಷಂ ಸ ಬಾಹ್ಯಾಭ್ಯಂತರಃ ಶುಚಿಃ ಪ್ರಥ್ವಿ ತ್ವಯಾ ಧೃತಾ ದೇವಿ ದೇವತ್ವಂ ವಿಷ್ಣುನಾ ಧೃತಾ ಪಂಚದಾರಾಮಯೋ ದೇವಿ ಪವಿತ್ರಂ ಕುರು ಚಾಸನಮ್ ಸಮ್ಮಾರ್ಜನಂ ಶತಂ ಪುಣ್ಯಂ ಸಹಸ್ರಮನುಲೇಪನಮ್ ರೇಖಾಶತಸಹಸ್ರೇಷು ಅನಂತಂ ಪದ್ಮಮುಚ್ಯತೇ ಬಂಧೋ ಭವಹರಶ್ಚೈವ ಸ್ವಸ್ತಿಕಂ ಶತ್ರುನಾಶನಮ್ ಪದ್ಮಂ ಪುಣ್ಯಂ ಫಲಂ ಚೈವ ಮುದ್ರಾ ತು ಮೋಕ್ಷಸಾಧನಮ್ ಎಂದೀ ಮಂತ್ರದಿಂದ ಭೂಶುದ್ಧಿಯ ಮಾಡುವದು. ಇನ್ನು ಆತನ ಚೌಕಮಧ್ಯದಲ್ಲಿ ಕುಳ್ಳಿರಿಸುವ ಕ್ರಮವೆಂತೆಂದಡೆ- ಓಂ ನಮೋ ರುದ್ರೇಭ್ಯೋ ಯೇ ಪೃಥ್ವಿವ್ಯಾಂ ಯೇ[s]ಂತರಿಕ್ಷೇ ಯೇ ದಿವಿ ಯೇಷಾಮನ್ನಂ ವಾತೋ ವರ್ಷಮಿಷವಸ್ತೇಭ್ಯೋ ದಶಪ್ರಾಚೀರ್ದಶ ದಕ್ಷಿಣಾ ದಶ ಪ್ರತೀಚೀರ್ದಶೋದೀಚೀರ್ದಶೋಧ್ರ್ವಾಸ್ತೇಭ್ಯೋ ನಮಸ್ತೇನೋ ಮೃಡಯಂತು ತೇ ಯಂ ದ್ವಿಷ್ಟೋ ಯಶ್ಚನೋ ದ್ವೇಷ್ಟಿ ತಂ ವೊ ಜಂಬೇ ದಧಾಮಿ ಚಾಂ ಪೃಥಿವ್ಯಾ ಮೇರು ಪೃಷ* ಋಷಿಃ ಕೂರ್ಮೋ ದೇವತಾ ಜಗತೀ ಛಂದಃ ಆಸನೇ ವಿನಿಯೋಗಃ ಎಂದೀ ಮಂತ್ರದಿಂದ ಶ್ರೀಗುರು ಆತನ Zõ್ಞಕಮಧ್ಯದಲ್ಲಿ ಕುಳ್ಳಿರಿಸುವುದು. ಇನ್ನು ನಾಲ್ಕೂ ಕಲಶದ ಪ್ರತ್ಯೇಕ ಪ್ರಧಾನ ದೇವತೆಗಳಂ ಕುಳ್ಳಿರಿಸಿ ಗುರುಕಲಶವಂ ಸ್ಥಾಪ್ಯವಂ ಮಾಡುವ ಕ್ರಮವೆಂತೆಂದಡೆ- ಚೌಕಮಧ್ಯೇ ಸುಮಾಂಗಲ್ಯಂ ಷೋಡಶಂ ಕಲಶಂ ತಥಾ ಭಾಸುರಂ ತಂಡುಲಂ ತಸ್ಯ ಪಂಚಸೂತ್ರಂ ತಥೈವ ಚ ತೇಷು ತೀರ್ಥಾಂಬುಪೂರ್ಣೇಷು ನಿದಧ್ಯಾದಾಮ್ರಪಲ್ಲವಾನ್ ದೂರ್ವಾಂಕುರಸುಪೂಗಾನಿ ನಾಗವಲ್ಲೀದಲಾನ್ಯಪಿ ಓಂ ತತ್ಪುರುಷಾಯ ನಮಃ ತತ್ಪುರುಷವಕ್ತ್ರಾಯ ನಮಃ ಓಂ ಅಘೋರರಾಯ ನಮಃ ಅಘೋರವಕ್ತ್ರಾಯ ನಮಃ ಓಂ ಸದ್ಯೋಜಾತಾಯ ನಮಃ ಸದ್ಯೋಜಾತವಕ್ತ್ರಾಯ ನಮಃ ಓಂ ವಾಮದೇವಾಯ ನಮಃ ವಾಮದೇವವಕ್ತ್ರಾಯ ನಮಃ ಓಂ ಈಶಾನಾಯ ನಮಃ ಈಶಾನವಕ್ತ್ರಾಯ ನಮಃ ಓಂ ತತ್ಪುರುಷ ಅಘೋರ ಸದ್ಯೋಜಾತ ವಾಮದೇವ ಈಶಾನ ವಕ್ತ್ರೇಭ್ಯೋ ನಮಃ ಎಂದು ಈ ಮಂತ್ರದಿಂದ ಗುರುಕಲಶಕ್ಕೆ ಪಂಚಸೂತ್ರಂಗಳನಿಕ್ಕಿ ಪಂಚಪಲ್ಲವಂಗಳನಿಕ್ಕಿ ಪಂಚಮುಖಂಗಳನಿಕ್ಕಿ ಗುರುಕಲಶವಂ ಸ್ಥಾಪ್ಯವಂ ಮಾಡುವುದು. ಇನ್ನು ಜಲಶುದ್ಧವಂ ಮಾಡುವ ಕ್ರಮವೆಂತೆಂದಡೆ - ಓಂ ನಮಃ ಶಿವಾಯ ನಮಸ್ತೇ ಅಸ್ತು ಭಗವನ್ ವಿಶ್ವೇಶ್ವರಾಯ ಮಹಾದೇವಾಯ ತ್ರ್ಯಂಬಕಾಯ ತ್ರಿಪುರಾಂತಕಾಯ ತ್ರಿಕಾಲಾಗ್ನಿಕಾಲಾಯ ಕಾಲಾಗ್ನಿರುದ್ರಾಯ ನೀಲಕಂಠಾಯ ಮೃತ್ಯುಂಜಯಾಯ ಸರ್ವೇಶ್ವರಾಯ ಸದಾಶಿವಾಯ ಶ್ರೀಮನ್ಮಹಾದೇವಾಯ ನಮಃ ಓಂ ನಿಧನಪತಯೇ ನಮಃ ನಿಧನಪತಾಂತಿಕಾಯ ನಮಃ ಓಂ ಊಧ್ರ್ವಾಯ ನಮಃ ಊಧ್ರ್ವಲಿಂಗಾಯ ನಮಃ ಓಂ ಹಿರಣ್ಯಾಯ ನಮಃ ಹಿರಣ್ಯಲಿಂಗಾಯನಮಃ ಓಂ ಸುವರ್ಣಾಯ ನಮಃ ಸುವರ್ಣಲಿಂಗಾಯ ನಮಃ ಓಂ ದಿವ್ಯಾಯ ನಮಃ ದಿವ್ಯಲಿಂಗಾಯ ನಮಃ ಓಂ ಭವಾಯ ನಮಃ ಭವಲಿಂಗಾಯ ನಮಃ ಓಂ ಶಿವಾಯ ನಮಃ ಶಿವಲಿಂಗಾಯ ನಮಃ ಓಂ ಜ್ಯೇಷಾ*ಯ ನಮಃ ಜ್ಯೇಷ*ಲಿಂಗಾಯ ನಮಃ ಓಂ ಶ್ರೇಷಾ*ಯ ನಮಃ ಶ್ರೇಷ*ಲಿಂಗಾಯ ನಮಃ ಓಂ ಜ್ವಲಾಯ ನಮಃ ಜ್ವಲಲಿಂಗಾಯ ನಮಃ ಓಂ ಸ್ಥೂಲಾಯ ನಮಃ ಸ್ಥೂಲಲಿಂಗಾಯ ನಮಃ ಓಂ ಸೂಕ್ಷ್ಮಾಯ ನಮಃ ಸೂಕ್ಷ್ಮಲಿಂಗಾಯ ನಮಃ ಓಂ ಶೂನ್ಯಾಯ ನಮಃ ಶೂನ್ಯಲಿಂಗಾಯ ನಮಃ ಓಂ ನೇತ್ರಾಯ ನಮಃ ನೇತ್ರಲಿಂಗಾಯ ನಮಃ ಓಂ ಶ್ರೋತ್ರಾಯ ನಮಃ ಶ್ರೋತ್ರಲಿಂಗಾಯ ನಮಃ ಓಂ ಘ್ರಾಣಾಯ ನಮಃ ಘ್ರಾಣಲಿಂಗಾಯ ನಮಃ ಓಂ ಪ್ರಾಣಾಯ ನಮಃ ಪ್ರಾಣಲಿಂಗಾಯ ನಮಃ ಓಂ ವ್ಯೋಮಾಯ ನಮಃ ವ್ಯೋಮಲಿಂಗಾಯ ನಮಃ ಓಂ ಆತ್ಮಾಯ ನಮಃ ಆತ್ಮಲಿಂಗಾಯ ನಮಃ ಓಂ ಪರಮಾಯ ನಮಃ ಪರಮಲಿಂಗಾಯ ನಮಃ ಓಂ ಶರ್ವಾಯ ನಮಃ ಶರ್ವಲಿಂಗಾಯ ನಮಃ ಓಂ ಶಾಂತಾಯ ನಮಃ ಶಾಂತಲಿಂಗಾಯ ನಮಃ ಓಮೇತತ್ಸೋಮಸ್ಯ ಸೂರ್ಯಸ್ಯ ಸರ್ವಲಿಂಗಂ ಸ್ಥಾಪಯತಿ ಪಾಣಿಮಂತ್ರಂ ಪವಿತ್ರಮ್ ಓಂ ನಮಸ್ತೇ ಸರ್ವೋ ವೈ ರುದ್ರಸ್ತಸ್ಮೈ ರುದ್ರಾಯ ನಮೋsಸ್ತು ನಮೋ ಹಿರಣ್ಯಬಾಹವೇ ಹಿರಣ್ಯವರ್ಣಾಯ ಹಿರಣ್ಯರೂಪಾಯ ಹಿರಣ್ಯಪತಯೇ ಅಂಬಿಕಾಪತಯೇ ಉಮಾಪತಯೇ ಪಶುಪತಯೇ ನಮೋ ನಮಃ ಋತಂ ಸತ್ಯಂ ಪರಬ್ರಹ್ಮ ಪುರುಷಂ ಕೃಷ್ಣಪಿಂಗಲಂ ಊಧ್ರ್ವರೇತಂ ವಿರೂಪಾಕ್ಷಂ ವಿಶ್ವರೂಪಾಯ ವೈ ನಮೋ ನಮಃ ಓಂ ಸದ್ಯೋಜಾತಂ ಪ್ರಪದ್ಯಾಮಿ ಸದ್ಯೋಜಾತಾಯ ವೈ ನಮೋ ನಮಃ ಭವೇ ಭವೇ ನಾತಿಭವೇ ಭವಸ್ವ ಮಾಂ ಭವೋದ್ಭವಾಯ ನಮಃ ಓಂ ವಾಮದೇವಾಯ ನಮೋ ಜ್ಯೇಷಾ*ಯ ನಮಃ ಶ್ರೇಷಾ*ಯ ನಮೋ ರುದ್ರಾಯ ನಮಃ ಕಾಲಾಯ ನಮಃ ಕಲವಿಕರಣಾಯ ನಮೋ ಬಲವಿಕರಣಾಯ ನಮೋ ಬಲಾಯ ನಮೋ ಬಲಪ್ರಮಥನಾಥಾಯ ನಮಃ ಸರ್ವಭೂತದಮನಾಯ ನಮೋ ಮನೋನ್ಮನಾಯ ನಮಃ ಓಂ ಅಘೋರೇಭ್ಯೋsಥ ಘೋರೇಭ್ಯೋ ಘೋರಘೋರತರೇಭ್ಯಃ ಸರ್ವೇಭ್ಯಸ್ಯರ್ವ ಸರ್ವೇಭ್ಯೋ ನಮಸ್ತೇ ಅಸ್ತು ರುದ್ರರೂಪೇಭ್ಯಃ ಶ್ರೀ ಸದಾಶಿವಾಯ ನಮಃ ಓಂ ತತ್ಪುರುಷಾಯ ವಿದ್ಮಹೇ ಮಹಾದೇವಾಯ ಧೀಮಹಿ ತನ್ನೋ ರುದ್ರಃ ಪ್ರಚೋದಯಾತ್ ಓಮೀಶಾನಃ ಸರ್ವವಿದ್ಯಾನಾಮೀಶ್ವರಃ ಸರ್ವಭೂತಾನಾಂ ಬ್ರಹ್ಮಾಧಿಪತಿಬ್ರಹ್ಮಣೋsಧಿಪತಿಬ್ರ್ರಹ್ಮಾ ಶಿವೋ ಮೇ ಅಸ್ತು ಸದಾಶಿವೋಂ ಕದ್ರುದ್ರಾಯ ಪ್ರಚೇತಸೇ ಮೀಡುಷ್ಟಮಾಯ ತವ್ಯಸೇ ವೋಚೇಮ ಶಂತಮಗ್‍ಂ ಹೃದೇ ಏಕಃ ಶಿವ ಏವಾನ್ಯರಹಿತಾಯ ತೇ ನಮೋ ನಮಃ ಓಂ ವಿಶ್ವಂ ಭೂತಂ ಭುವನಂ ಚಿತ್ರಂ ಬಹುಧಾಜಾತಂ ಜಾಯಮಾನಂ ಚ ಯತ್ ಓಂ ಶಂ ಚ ಮೇ ಮಯಶ್ಚ ಮೇ ಪ್ರಿಯಂ ಚ ಮೇ[s] ಸುಕಾಮಶ್ಚ ಮೇ ಕಾಮಶ್ಚ ಮೇ ಸೌಮನಶ್ಚ ಮೇ ಭದ್ರಂ ಚ ಮೇ ಶ್ರೇಯಶ್ಚ ಮೇ ವಸ್ಯಶ್ಚ ಮೇ ಯಶಶ್ಚ ಮೇ ಭಗಶ್ಚ ಮೇ ದ್ರವಿಣಂ ಚ ಮೇ ಯಂತಾ ಚ ಮೇ ಧರ್ತಾ ಚ ಮೇ ಕ್ಷೇಮಶ್ವಮೇ ಧೃತಿಶ್ಚಮೇ ವಿಶ್ವಂ ಚ ಮೇ ಮಹಶ್ಚಮೇ ಸಂವಿಚ್ಚ ಮೇ ಜ್ಞಾತ್ರಂ ಚ ಮೇ ಸೂಶ್ಚ ಮೇ ಪ್ರಸೂಶ್ಚ ಮೇ ಸೀರಂ ಚ ಮೇ ಲಯಶ್ಚಯ ಮೇ ಅಮೃತಂ ಚ ಮೇ ಯಕ್ಷ್ಮಂಚ ಮೇ[s] ಮೃತಂ ಚ ಮೇ ನಾಮಯಶ್ಚ ಮೇ ಜೀವಾತು ಶ್ಚ ಮೇ ದೀರ್ಘಾಯುತ್ವಂ ಚ ನಮಿತ್ರಂ ಚ ಮೇS ಭಯಂ ಚಮೇ ಸುಗಂಧಂ ಚ ಮೇ ಶಯನಂ ಚ ಮೇ ಸೂಷಾ ಚ ಮೇ ಸುದಿನಂ ಚ ಮೇ ಓಂ ಸಹನಾವವತು ಸಹ £õ್ಞ ಭುನಕ್ತು ಸಹ ವೀರ್ಯಂ ಕರವಾವಹೈ ತೇಜಸ್ವಿನಾವಧೀತಮಸ್ತು ಮಾ ವಿದ್ವಿಷಾವಹೈ ಓಂ ಶಾಂತಿಃ ಶಾಂತಿಃ ಶಾಂತಿಃ ಎಂದೀ ಮಂತ್ರದಿಂದ ಜಲಶುದ್ಧವಂ ಮಾಡುವುದು. ಇನ್ನು ಜಂಗಮಕ್ಕೆ ಪಾದಾರ್ಚನೆಯಂ ಮಾಡುವ ಕ್ರಮವೆಂತೆಂದಡೆ_ ಅಂಗುಷಾ*ಗ್ರೇ ಅಷ್ಟಷಷ್ಟಿ ತೀರ್ಥಾನಿ ನಿವಸಂತಿ ವೈ ಸಪ್ತಸಾಗರಪಾದಾಧಸ್ತದೂಧ್ರ್ವೇ ಕುಲಪರ್ವತಾಃ ಚರಸ್ಯ ಪಾದತೀರ್ಥೇನ ಲಿಂಗಮಜ್ಜನಮುತ್ತಮವಮ್ ತತ್ಪ್ರಸಾದಂ ಮಹಾದೇವಿ ನೈವೇದ್ಯಂ ಶುಭಮಂಗಲಮ್ ಈ ಮಂತ್ರದಿಂದ ಪಾದಾರ್ಚನೆಯಂ ಮಾಡುವುದು. ಇನ್ನು ಕುಮಾರಠಾವನು ಜಲಾಭಿವಾಸವ ಮಾಡುವ ಕ್ರಮವೆಂತೆಂದಡೆ_ ಜ್ವಾಲಾಮಾಲಾವೃತಾಂಗಾಯ ಜ್ವಲನಸ್ತಂಭರೂಪಿಣೇ ನಮಃ ಶಿವಾಯ ಶಾಂತಾಯ ಬ್ರಹ್ಮಣೇ ಲಿಂಗಮೂರ್ತಯೇ ಎಂದೀ ಮಂತ್ರದಿಂದ ಕುಮಾರಠಾವನ್ನು ಜಲಾಧಿವಾಸವ ಮಾಡಿಸುವುದು. ಇನ್ನು ಆ ಶಿಷ್ಯನ ಹಸ್ತವಂ ಶೋಧಿಸುವ ಕ್ರಮವೆಂತೆಂದಡೆ_ ಓಂ ತ್ರಾತ್ವಿಯಂ ಶಕ್ತಿಃ ಶ್ರೀಕರಂ ಚ ಪವಿತ್ರಂ ಚ ರೋಗಶೋಕಭಯಾಪಹವರಿï ಮನಸಾ ಸಹ ಹಸ್ತೇಭ್ಯೋ ಪದ್ಭ್ಯಾಮುದ್ಧರಣಾಯ ಚ ಎಂದೀ ಮಂತ್ರದಿಂದ ಶಿಷ್ಯನ ಹಸ್ತವಂ ಶೋಧಿಸುವುದು. ಇನ್ನು ವಿಭೂತಿಯ ಧರಿಸುವ ಕ್ರಮವೆಂತೆಂದಡೆ_ ಮೂಧ್ರ್ನಿ ಲಲಾಟೇ ಕರ್ಣೇ ಚ ಚಕ್ಷುಷೋಘ್ರ್ರಾಣಕೇ ತಥಾ ಆಸ್ಯೇ ದ್ವಾಭ್ಯಾಂ ಚ ಬಾಹುಭ್ಯಾಂ ತನ್ಮೂಲತನವಸ್ತಥಾ ಮಣಿಬಂಧೇ ಚ ಹೃತ್ಪಾಶ್ರ್ವೇ ನಾಭೌ ಮೇಢ್ರೇ ತಥೈವ ಚ ಉರೌ ಚ ಜಾನುಕೇ ಚೈವ ಜಂಘಾ ಪೃಷೆ*ೀ ತಥೈವ ಚ ಪಾದೇ ದ್ವಾತ್ರಿಂಶತಿಶ್ಚೈವ ಪಾದಸಂಧೌ ಯಥಾ ಕ್ರಮಾತ್ ಇತ್ಯುದ್ಧೂಳನಂ ಸ್ನಾನಂ ಧಾರಣಂ ಮೋಕ್ಷಕಾರಣಮ್ ಎಂದೀ ಮಂತ್ರದಿಂದ ಆ ಶಿಷ್ಯನ ಮೂವತ್ತೆರಡು ಸ್ಥಾನಗಳಲ್ಲಿ ವಿಭೂತಿಯಂ ಧರಿಸುವುದು. ಇನ್ನು ರುದ್ರಾಕ್ಷಿಯಂ ಧರಿಸುವ ಕ್ರಮವೆಂತೆಂದಡೆ_ ಓಂ ಹ್ರೂಂ ಶ್ರೂಂ ಭ್ರೂಂ ರೂಂ ಬ್ರೂ_ ಪ್ರರೂಮಪಿ ಸ್ರೀಯಂ ಕ್ಷೇಕ್ಷಮಪಿಕ್ಷೂ ಹ್ರೀಂ ನಮೋಂತಿ ಮಯಯೇ ಇತಿ ಪೂರ್ವೋಕ್ತ ಮಂತ್ರಾನಂತರೇ ಪ್ರಾಣನಾಯಮ್ಯ ಸಮಸ್ತ ಪಾಪಕ್ಷಯಾರ್ಥಂ ಶಿವಜ್ಞಾನಾವಾಪ್ತ್ಯರ್ಥಂ ಸಮಷ್ಟಿಮಂತ್ರೈಃ ಸಹ ಧಾರಣಂ ಕರಿಷ್ಯೇ ಇತಿ ಸಂಕಲ್ಪ್ಯ_ ಶಿರಸಾ ಧಾರಯೇತ್ಕೋಟಿ ಕರ್ಣಯೋರ್ದಶಕೋಟಿಭಿಃ ಶತಕೋಟಿ ಗಳೇ ಬದ್ಧಂ ಸಹಸ್ರಂ ಬಾಹುಮೂಲಯೋಃ ಅಪ್ರಮಾಣಫಲಂ ಹಸ್ತೇ ರುದ್ರಾಕ್ಷಂ ಮೋಕ್ಷಸಾಧನವರಿï ಎಂದೀ ಮಂತ್ರದಿಂದ ಆ ಶಿಷ್ಯನ ಹಸ್ತಂಗಳಲ್ಲಿ ರುದ್ರಾಕ್ಷಿಯಂ ಧರಿಸುವುದು, ಇನ್ನು ಜಲಾಧಿವಾಸದೊಳಗಣ ಕುಮಾರಠಾವಂ ತೆಗೆಯುವ ಕ್ರಮವೆಂತೆಂದಡೆ_ ಮಹಾದೇವಾಯ ಮಹತೇ ಜ್ಯೋತಿಷೇSನಂತತೇಜಸೇ ನಮಃ ಶಿವಾಯ ಶಾಂತಾಯ ಬ್ರಹ್ಮಣೇ ಲಿಂಗಮೂರ್ತಯೇ ಎಂದೀ ಮಂತ್ರದಿಂದ ಜಲಾಧಿವಾಸದೊಳಗಣ ಕುಮಾರಠಾವಂ ತೆಗೆಯುವದು. ಇನ್ನು ಶಿಲೆಯ ಪೂವಾಶ್ರಯವಂ ಕಳೆವ ಪರಿಯೆಂತೆಂದಡೆ_ ವಿಶ್ವತಶ್ಚಕ್ಷುರುತ ವಿಶ್ವತೋಮುಖೋ ವಿಶ್ವತೋಬಾಹುರುತ ವಿಶ್ವತಃಸ್ವಾತ್ ಸಂಬಾಹುಭ್ಯಾಂ ದಮತಿ ಸಂಪದಂ ತ್ರಯೀ_ ದ್ರ್ಯಾವಾಭೂಮೀ ಜನಯನ್ ದೇವ ಏಕಃ ಎಂದೀ ಮಂತ್ರದಿಂದ ಆ ಶಿಲೆಯ ಪೂರ್ವಾಶ್ರಯವಂ ಕಳೆವುದು. ಇನ್ನು ಆ ಶಿಲೆಗೆ ಪ್ರಾಣ ಪ್ರತಿಷೆ*ಯಂ ಮಾಡುವ ಕ್ರಮವೆಂತೆಂದಡೆ_ ಓಂ ವಿಶ್ವಾಧಿಕೋ ರುದ್ರೋ ಮಹರ್ಷಿಃ ಸರ್ವೋ ಹ್ಯೇಷ ರುದ್ರ ಸ್ತಸ್ಮೈ ರುದ್ರಾಯ ತೇ ಅಸ್ತು ನಮೋ ರುದ್ರೋ ವೈ ಕ್ರೂರೋ_ ರುದ್ರಃ ಪಶುನಾಮಧಿಪತಿಸ್ತಥಾ ದೇವಾ ಊಧ್ರ್ವಬಾಹವೊ_ ರುದ್ರಾ ಸ್ತುನ್ವಂತಿ ಯಸ್ಮಾತ್ಪರಂ ನಾಪರಮಸ್ತಿ ಕಿಂಚಿದ್ಯಸ್ಯಾನಾ ಣೀಯೋ ನ ಧ್ಯೇಯಃ ಕಿಂಚಿತ್ ಶಿವ ಏಕೋ ಧ್ಯೇಯಃ ಎಂದೀ ಮಂತ್ರದಿಂದ ಆ ಶಿಲೆಗೆ ಪ್ರಾಣಪ್ರತಿಷೆ*ಯಂ ಮಾಡುವುದು. ಇನ್ನು ದೇವರಿಗೆ ಸ್ನಪನಕ್ಕೆರೆಯುವ ಕ್ರಮವೆಂತೆಂದಡೆ_ ಸಪುಷ್ಪಶೀರ್ಷಕಂ ಲಿಂಗಂ ತಥಾ ಸ್ನಪನಮಾಚರೇತ್ ಪಯೋಧಧ್ಯಾಜಮಧ್ವಿಕ್ಷುರಸೈರ್ಮೂಲೇನ ಪಂಚಭಿಃ ಓಮನಂತ ಶುಚಿರಾಯುಕ್ಷ ಭಕ್ತಂ ತಿಸ್ತರತಾತ್ ಪರಮಂ ನಿಯಮುಚ್ಯತೇರ್ಮರಾತಸ್ಯ ಅವಿರಸ ಭುವನಂ ಜ್ಯೋತಿರೂಪಕವರಿï ಎಂದೀ ಮಂತ್ರದಿಂದ ದೇವರಿಗೆ ಸ್ನಪನಕ್ಕೆರೆವುದು. ಇನ್ನು ದೇವರಿಗೆ ವಸ್ತ್ರವಂ ಸಮರ್ಪಿಸುವುದೆಂತೆಂದಡೆ - ವ್ಯೋಮರೂಪ ನಮಸ್ತೇSಸ್ತು ವ್ಯೋಮತ್ಮಾಯ ಪ್ರಹರ್ಷಿಣೇ ವಾಸಾಂಸಿ ಚ ವಿಚಿತ್ರಾಣಿ ಸರವಂತಿ ಮೃದೂನಿ ಚ ಶಿವಾಯ ಗುರವೇ ದತ್ತಂ ತಸ್ಯ ಪುಣ್ಯಫಲಂ ಶೃಣು ಏವಂ ತದ್ವಸ್ತ್ರತಂತೂನಾಂ ಪರಿಸಂಖ್ಯಾತ ಏವ ಹಿ ತಾವದ್ವರ್ಷಸಹಸ್ರಾಣಿ ರುದ್ರಲೋಕೇ ಮಹೀಯತೇ ಎಂದೀ ಮಂತ್ರದಿಂದ ದೇವರಿಗೆ ವಸ್ತ್ರವಂ ಸಮರ್ಪಿಸುವುದು. ಇನ್ನು ದೇವರಿಗೆ ಗಂಧವಂ ಸಮರ್ಪಿಸುವ ಕ್ರಮವೆಂತೆಂದಡೆ- ಚಂದನಾಗರುಕರ್ಪೂರತಮಾಲದಳಕುಂಕುಮಂ ಉಶೀರಕೋಷ*ಸಂಯುಕ್ತಂ ಶಿವಗಂಧಾಷ್ಟಕಂ ಸ್ಮೃತವಮ್ ಆಚಮಾನಸ್ತು ಸಿದ್ಧಾರ್ಥಂ ಅವಧಾರ್ಯ ಯಥೈವ ಚ ಅಷ್ಟಗಂಧಸಮಾಯುಕ್ತಂ ಪುಣ್ಯಪ್ರದಸಮನ್ವಿತವಮ್ ಎಂದೀ ಮಂತ್ರದಿಂದ ದೇವರಿಗೆ ಗಂಧಮಂ ಸಮರ್ಪಿಸುವುದು. ಇನ್ನು ದೇವರಿಗೆ ಅಕ್ಷತೆಯನರ್ಪಿಸುವ ಕ್ರಮವೆಂತೆಂದಡೆ ಅಭಿನ್ನಶಂಖವಚ್ಚೈವ ಸುಶ್ವೇತವ್ರೀಹಿತಂಡುಲವಮ್ ಸ್ಮೃತಂ ಶಿವಾರ್ಚನಾಯೋಗ್ಯಂ ನೇತರಂ ಚ ವರಾನನೇ ಗಂಧಾಕ್ಷತಸಮಾಯುಕ್ತಂ ಶಿವಮುಕ್ತೇಶ್ಚಕಾರಣಮ್ ಸರ್ವವಿಘ್ನವಿನಿರ್ಮುಕ್ತಂ ಶಿವಲೋಕೇ ಮಹೀಯತೇ ಎಂದೀ ಮಂತ್ರದಿಂದ ದೇವರಿಗೆ ಅಕ್ಷತೆಯಂ ಸಮರ್ಪಿಸುವುದು. ಇನ್ನು ದೇವರಿಗೆ ಪುಷ್ಪವಂ ಸಮರ್ಪಿಸುವ ಕ್ರಮವೆಂತೆಂದಡೆ - ಮಲ್ಲಿಕೋತ್ಪಲಪುನ್ನಾಗಕದಂಬಾಶೋಕಚಂಪಕಮ್ ಸೇವಂತಿಕರ್ಣಿಕಾರಾಖ್ಯಂ ತ್ರಿಸಂಧ್ಯಾರಕ್ತಕೇಸರೀ ಕದಂಬವನಸಂಭೂತಂ ಸುಗಂಧಿಂ ಚ ಮನೋಹರಮ್ ತತ್ವತ್ರಯಾತ್ಮಕಂ ದಿವ್ಯಂ ಪುಷ್ಪಂ ಶಂಭೋSರ್ಪಯಾಮಿ ತೇ ಎಂದೀ ಮಂತ್ರದಿಂದ ದೇವರಿಗೆ ಪುಷ್ಪವ ಸಮರ್ಪಿಸುವದು. ಇನ್ನು ದೇವರಿಗೆ ಧೂಪವ ಸಮರ್ಪಿಸುವ ಕ್ರಮವೆಂತೆಂದಡೆ- ಗುಗ್ಗುಲಂ ಘೃತಸಂಯುಕ್ತಂ ಲಿಂಗಮಭ್ಯಚ್ರ್ಯ ಸಂದಹೇತ್ ವನಸ್ಪತಿವಾಸನೋಕ್ತಂ ಗಂಧಂ ದದ್ಯಾತ್ತಮುತ್ತಮಮ್ ಅರ್ಪಣಾದೇವ ದೇವಾಯ ಭಕ್ತಪಾಪಹರಾಯ ಚ ಎಂಬೀ ಮಂತ್ರದಿಂದ ದೇವರಿಗೆ ಧೂಪವನರ್ಪಿಸುವುದು. ಇನ್ನು ದೇವರಿಗೆ ದೀಪವ ಸಮರ್ಪಿಸುವ ಕ್ರಮವೆಂತೆಂದಡೆ- ಸ್ವಪ್ರಕಾಶ ಮಹಾತೇಜ ಸರ್ವಾಂತಸ್ತಿಮಿರಾಪಹೆ ಸ ಬಾಹ್ಯಾಭ್ಯಂತರಂ ಜ್ಯೋತಿರ್ದೀಪೊSಯಂ ಪ್ರತಿಗೃಹ್ಯತಾಮ್ ಎಂಬೀ ಮಂತ್ರದಿಂದ ದೇವರಿಗೆ ದೀಪವನರ್ಪಿಸುವುದು. ಇನ್ನು ದೇವರಿಗೆ ನೈವೇದ್ಯವನರ್ಪಿಸುವ ಕ್ರಮವೆಂತೆಂದಡೆ- ಕ್ಷೀರವಾರಿದಿ[s]ಸಂಭೂತಮಮೃತಂ ಚಂದ್ರಸನ್ನಿಭಮ್ ನೈವೇದ್ಯಂ ಷಡ್ರಸೋಪೇತಂ ಶಾಶ್ವತಾಯ ಸಮರ್ಪಿತಮ್ ಎಂಬೀ ಮಂತ್ರದಿಂದ ದೇವರಿಗೆ ನೈವೇದ್ಯವ ಸಮರ್ಪಿಸುವುದು. ಇನ್ನು ದೇವರಿಗೆ ತಾಂಬೂಲವ ಸಮರ್ಪಿಸುವ ಕ್ರಮವೆಂತೆಂದಡೆ- ಪೂಗಸಂಭೂತಕರ್ಪೂರ ಚೂರ್ಣಪರ್ಣದ್ವಿಸಂಯುತಃ ತ್ರಯೋದಶಕಲಾತ್ಮಾನಂ ತಾಂಬೂಲಂ ಫಲಮುಚ್ಯತೇ ಎಂದೀ ಮಂತ್ರದಿಂದ ದೇವರಿಗೆ ತಾಂಬೂಲವ ಸಮರ್ಪಿಸುವುದು. ಇನ್ನು ದೇವರಿಗೆ ಮಂತ್ರಪುಷ್ಪವ ಸಮರ್ಪಿಸುವ ಕ್ರಮವೆಂತೆಂದಡೆ ತ್ರಿಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನವಮ್ ಉರ್ವಾರುಕಮಿವ ಬಂಧನಾನ್ಮುೃತ್ಯೋರ್ಮುಕ್ಷೀಯ ಮಾಮೃತಾತ್ ಎಂಬೀ ಮಂತ್ರದಿಂದ ದೇವರಿಗೆ ಮಂತ್ರಪುಷ್ಪವಂ ಸಮರ್ಪಿಸುವುದು. ಇನ್ನು ದೇವರಿಗೆ ನಮಸ್ಕಾರವಂ ಮಾಡುವ ಕ್ರಮವೆಂತೆಂದಡೆ- ಪಿÀಠಂ ಯಸ್ಯಾ ಧರಿತ್ರೀ ಜಲಧರಕಲಶಂ ಲಿಂಗಮಾಕಾಶಮೂರ್ತಿಂ ನಕ್ಷತ್ರಂ ಪುಷ್ಪಮಾಲ್ಯಂ ಗ್ರಹಗಣಕುಸುಮಂ ನೇತ್ರಚಂದ್ರಾರ್ಕವಹ್ನಿಮ್ ಕುಕ್ಷಿಂ ಸಪ್ತ ಸಮುದ್ರಂ ಭುಜಗಿರಿಶಿಖರಂ ಸಪ್ತಪಾತಾರಿಪಾದಂ ವೇದಂ ವಕ್ತ್ರಂ ಷಡಂಗಂ ದಶದಿಶಸನಂ ದಿವ್ಯಲಿಂಗಂ ನಮಾಮಿ ಎಂಬೀ ಮಂತ್ರದಿಂದ ದೇವರಿಗೆ ನಮಸ್ಕಾರವಂ ಮಾಡುವುದು. ಇನ್ನು ದೇವರಿಗೆ ಅನುಷಾ*ನವಂ ಮಾಡುವ ಕ್ರಮವೆಂತೆಂದಡೆ- ``ಏತೇಷಾಂ ಪುರುಷೋsಸ್ತು'' ಎಂದೀ ಮಂತ್ರದಿಂದ ದೇವರಿಗೆ ಅನುಷಾ*ನವಂ ಮಾಡುವುದು. ಇನ್ನು ಅನುಷಾ*ನವಂ ಮಾಡಿದ ಬಳಿಕ ಶ್ರೀಗುರುವು ಶಿಷ್ಯಂಗೆ ಉರಸ್ಥಲದ ಸಜ್ಜೆಯಲ್ಲಿ ಲಿಂಗವ ಧರಿಸುವ ಕ್ರಮವೆಂತೆಂದಡೆ- ಅಯಂ ಮೇ ಹಸ್ತೊ ಭಗವಾನ್ ಅಯಂ ಮೇ ಭಗವತ್ತರಃ ಅಯಂ ಮೇ ವಿಶ್ವಭೇಷಜಃ ಅಯಂ ಶಿವಾಭಿಮರ್ಶನಃ ಅಯಂ ಮಾತಾ ಅಯಂ ಪಿತಾ ಅಯಂ ಜೀವಾತುರಗಮತ್ ಇದಂ ತವ ಸಮರ್ಪಣಂ ಸುಬಂಧವೇ ನಿರೀಹಿ ಎಂದೀ ಮಂತ್ರದಿಂದ ಆ ಶಿಷ್ಯನ ಅಂಗದ ಮೇಲೆ ಲಿಂಗಪ್ರತಿಷೆ*ಯಂ ಮಾಡುವುದು. ಇನ್ನು ಆ ಶಿಷ್ಯನ ವಾಯುಪ್ರಾಣಿತ್ವವಂ ಕಳೆದು ಲಿಂಗಪ್ರಾಣಿಯ ಮಾಡುವ ಕ್ರಮವೆಂತೆಂದಡೆ- ಓಂ ಅಪಿ ಚ ಪ್ರಾಣಾಪಾನವ್ಯಾನೋದಾನಸಮಾನಾದಿ ತಚ್ಚೈತನ್ಯ ಸ್ವರೂಪಸ್ಯ ಪರಮೇಶ್ವರಸ್ಯ ಓಂ ಶ್ರದ್ಧಾಯಾಂ ಪ್ರಾಣೇನ ವಿಷ್ಣೋSಮೃತಂ ಜುಹೋಮಿ ಶಿವೋ ಮಾಂ ವಿಷಪ್ರದಾಹಾಯ ಪ್ರಾಣಾಯ ಸ್ವಾಹಾ ಓಂ ಶ್ರದ್ಧಾಯಾಮಪಾನೇನ ವಿಷ್ಣೋSಮೃತಂ ಜುಹೋಮಿ ಶಿವೋ ಮಾಂ ವಿಷಪ್ರದಾಹಾಯ ಅಪಾನಾಯ ಸ್ವಾಹಾ ಓಂ ಶ್ರದ್ಧಾಯಾಂ ವ್ಯಾನೇನ ವಿಷ್ಣೋSಮೃತಂ ಜುಹೋಮಿ ಶಿವೋ ಮಾಂ ವಿಷಪ್ರದಾಹಾಯ ವ್ಯಾನಾಯ ಸ್ವಾಹಾ ಓಂ ಶ್ರದ್ಧಾಯಾಮುದಾನೇನ ವಿಷ್ಣೋSಮೃತಂ ಜುಹೋಮಿ ಶಿವೋ ಮಾಂ ವಿಷಪ್ರದಾಹಾಯ ಉದಾನಾಯ ಸ್ವಾಹಾ ಓಂ ಶ್ರದ್ಧಾಯಾಂ ಸಮಾನೇನ ವಿಷ್ಣೋSಮೃತಂ ಜುಹೋಮಿ ಶಿವೋ ಮಾಂ ವಿಷಪ್ರದಾಹಾಯ ಸಮಾನಾಯ ಸ್ವಾಹಾ ಎಂದೀ ಮಂತ್ರದಿಂದ ಆ ಶಿಷ್ಯನ ವಾಯುಪ್ರಾಣಿತ್ವವ ಕಳೆದು ಲಿಂಗ ಪ್ರಾಣಿಯಂ ಮಾಡುವುದು. ಇನ್ನು ಆ ಶಿಷ್ಯಂಗೆ ಅಗ್ರೋದಕವನ್ನು ಸರ್ವಾಂಗದ ಮೇಲೆ ತಳಿವ ಕ್ರಮವೆಂತೆಂದಡೆ- ಶಿವಃ ಪಶ್ಯತಿ ಶಿವೋ ದೃಶ್ಯತೇ ಅಹೋರಾತ್ರಂ ಶಿವಸನ್ನಿಧಾವೈಕಮೇನಂ ಪ್ರಯುಜ್ಯತೇ ತ್ರೈಜಾತಾಮಿ ಯಜೇಕಂ ಆ ಸರ್ವೇಭ್ಯೋಹಿ ಕಾಮೇಭ್ಯೋ ಅಗ್ನೀನಾಂ ಪ್ರಯುಜ್ಯತೇ ಸರ್ವೇಭ್ಯೋ ಹಿ ಕಾಮೇಭ್ಯೋ ಅಗ್ನೀನಾಂ ಪ್ರಯುಜ್ಯತೇ ತ್ರೈಜಾತಾಮಿಯಜೇಕಂ ಅಭಿಚಾರನ್ ಇತಿ ಸರ್ವೋ ವೈ ಏಷ ಯಜ್ಞಃ ಯತ್ರೋಪಾತ್ತಯಜ್ಞಃ ಸರ್ವೇಷಾಮೇನಂ ಯಜ್ಞೇನ ಜಾಯತೇ ನ ದೇವತಾಭ್ಯಾಂ ಆ ಉಚ್ಯತೇ ದ್ವಾದಶಕಪಾಲ ಪೂರುಷೋ ಭವತಿ ತಂ ತೇ ಯಜೇತ ಕಪಾಲ ಸ್ತ್ರೀಸಾಮುದ್ರೈ- ತ್ರಯಂ ತ್ರಯೀ ಮೇ ಲೋಕಾ ಏಷಾಮ್- ಲೋಕಾನಾಮಪ್ಯುತ್ತರೋತ್ತರ ಜ್ಞೇಯೋ ಭವತಿ ಎಂದೀ ಮಂತ್ರದಿಂದ ಆ ಶಿಷ್ಯಂಗೆ ಸರ್ವಾಂಗದಲ್ಲಿ ಅಗ್ರೋದಕವಂ ತಳೆವುದು. ಇನ್ನು ಆ ಶಿಷ್ಯನ ಭಾಳದಲ್ಲಿವಿಭೂತಿಯ ಪಟ್ಟವಂ ಕಟ್ಟುವ ಕ್ರಮವೆಂತೆಂದಡೆ ಓಂ ತ್ರಿಪುಂಡ್ರಂ ಸತತಂ ತ್ರಿಪುಂಡ್ರಂ ಸರ್ವದೇವಲಲಾಟಪಟ್ಟತ್ರಿಪುಂಡ್ರಂ ಸಪ್ತಜನ್ಮಕೃತಂ ಪಾಪಂ ಭಸ್ಮೀಭೂತಂ ತತಃ ಕ್ಷಣಮ್ ಎಂದೀ ಮಂತ್ರದಿಂದ ಆ ಶಿಷ್ಯನ ಭಾಳದಲ್ಲಿ ವಿಭೂತಿ ಪಟ್ಟವಂ ಕಟ್ಟುವುದು. ಇನ್ನು ಆ ಶಿಷ್ಯನ ದುರಕ್ಷರವ ತೊಡೆವ ಕ್ರಮವೆಂತೆಂದಡೆ- ಐಶ್ವರ್ಯಕಾರಣಾಧ್ಭೂತಿರ್ಭಾಸನಾದ್ಭಸಿತಂ ತಥಾ ಸರ್ವಾಂಗಾಭ್ಯರ್ಚನಾದ್ಭಸ್ಮ ಚಾಪದಕ್ಷರಣಾತ್ ಕ್ಷರಂ ತತೋಭೂತಪ್ರೇತಪಿಶಾಚಬ್ರಹ್ಮರಾಕ್ಷಸ - ಅಪಸ್ಮಾರಭವಭೀತಿಭ್ಯೋ ಭೀಕಾರಣಾದ್ರಕ್ಷಾ ರಕ್ಷತೇ ಏತಾನಿ ತಾನಿ ಶಿವಮಂತ್ರ ಪವಿತ್ರಿತಾನಿ ಭಸ್ಮಾನಿ ಕಾಮದಹನಾಂಗ ವಿಭೂಷಿತಾನಿ ತ್ರೈಪುಂಡ್ರಕಾನಿ ರಚಿತಾನಿ ಲಲಾಟಪಟ್ಟೇ ಲುಂಪಂತಿ ದೈವಲಿಖಿತಾನಿ ದುರಕ್ಷರಾಣಿ ಎಂದೀ ಮಂತ್ರದಿಂದ ಆ ಶಿಷ್ಯನ ದುರಕ್ಷರವಂ ತೊಡೆವುದು. ಇನ್ನು ಆ ಶಿಷ್ಯನ ಲಲಾಟದಲ್ಲಿ ಲಿಂಗಲಿಖಿತವಂ ಬರೆವ ಕ್ರಮವೆಂತೆಂದಡೆ- ``ಓಂ ಓಂ ಓಂ ನಮಃ ಶಿವಾಯ ಸರ್ವಜ್ಞಾನಧಾಮ್ನೇಱಱ ಎಂದೀ ಮಂತ್ರದಿಂದ ಆ ಶಿಷ್ಯನ ಲಲಾಟದಲ್ಲಿ ಶಿವಲಿಖಿತಮಂ ಬರೆವುದು. ಇನ್ನು ಆ ಶಿಷ್ಯನ ಮಸ್ತಕದಲ್ಲಿ ಹಸ್ತವನಿರಿಸುವ ಕ್ರಮವೆಂತೆಂದಡೆ- ಉದ್ಯದ್ಭಾಸ್ಕರ ಕೋಟಿ ಪ್ರಕಾಶ ಮಹಾದರ್ಶನ ದಿವ್ಯಮೂರ್ತಿಭೀಷಣಮ್ ಭುಜಂಗಭೂಷಣಂ ಧ್ಯಾಯೇತ್ ದಿವ್ಯಾಯುಧಂ ರುದ್ರವರಿï ಸರ್ವೈಸ್ತಪಸ್ವಿಭಿಃ ಪ್ರೋಕ್ತಂ ಸರ್ವಜ್ಞೇಷು ಭಾಗಿನಮ್ ರುದ್ರಭಕ್ತಂ ಸ್ಮೃತಾಃ ಸರ್ವೇ ತ್ರಿಪುಂಡ್ರಾಂಕಿತಮಸ್ತಕಮ್ ಎಂದೀ ಮಂತ್ರದಿಂದ ಆ ಶಿಷ್ಯನ ಮಸ್ತಕದ ಮೇಲೆ ಹಸ್ತವನ್ನಿರಿಸುವುದು. ಇನ್ನು ಆ ಶಿಷ್ಯನ ಕರ್ಣದಲ್ಲಿ ಶಿವಮಂತ್ರವಂ ನಿರೂಪಿಸುವ ಕ್ರಮವೆಂತೆಂದಡೆ - ಕರ್ಣದ್ವಾರೇ ಯಥಾವಾಕ್ಯಂ ಸದ್ಗುರೋರ್ಲಿಂಗಮೀರ್ಯತೇ ಇಷ್ಟಪ್ರಾಣಸ್ತಥಾಭಾವೋ ತ್ರಿಧಾಮ್ನೈಕ್ಯಮಿದಂ ಶೃಣು ಕರ್ಣೇ ಶಿಷ್ಯಸ್ಯ ಶನಕೈಃ ಶಿವಮಂತ್ರಮುದೀರಯೇತ್ ಸ ತು ಬದ್ಧಾಂಜಲಿಃ ಶಿಷ್ಯೋ ಮಂತ್ರತದ್ಧ್ಯಾನಮಾನಸಃ ಎಂದೀ ಮಂತ್ರದಿಂದ ಆ ಶಿಷ್ಯನ ಕರ್ಣದಲ್ಲಿ ಶಿವಮಂತ್ರವಂ ನಿರೂಪಿಸುವುದು. ಇನ್ನು ಶತಪತ್ರದೊಳಗಣ ಮನಪ್ರಾಣದೊಳಗಿಪ್ಪ ಪ್ರಾಣಲಿಂಗಕ್ಕೊಂದು ಇಷ್ಟಲಿಂಗ ಸ್ಥಲಮಂ ತೋರಿಸಿ ಆ ಶಿಷ್ಯನಂ ಕೃತಕೃತ್ಯನಂ ಮಾಡಿದ ಶ್ರೀಗುರುವಿಂಗೆ ನಮೋ ನಮಃ ಎಂದು ಬದುಕಿದನಯ್ಯಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
``ಲಿಂಗ ಸೂತ್ರಾತ್ಮನೋರಪಿ, ವಿಶ್ವತಶ್ಚಕ್ಷುಂ, ಊಧ್ರ್ವರೇತಂ ವಿರೂಪಾಕ್ಷಃ, ಪುರುಷಂ ಕೃಷ್ಣಪಿಂಗಳಂ ಋತಗ್‍ಂ ಸತ್ಯಂ ಪರಬ್ರಹ್ಮಂ, ಲಿಂಗಂ ಮನಂ ತಮವ್ಯಕ್ತಮಚಿಂತ್ಯಂ, ಲಿಂಗಂ ಶಿವ ಪರಾತ್ಪರಮಧಿಷಾ*ನಾಂ ಸಮಸ್ತಸ್ಯಂ' ಎಂಬ ಶ್ರುತಿಯುಂಟಾಗಿ; ಜಗವೆಲ್ಲಾ ನೇತ್ರಂಗಳಾಗಿರ್ಪಾತನು ಶಿವನೆನಲಾ ಶ್ರುತಿ ಜಗವೆಲ್ಲಾ ನೇತ್ರಂಗಳಾಗಿದ್ದರೆ, ನೇತ್ರಂಗಳೊಳಗೆ ಉತ್ತಮ ಮಧ್ಯಮ ಕನಿಷ*ಂಗಳೇಕಾದವೆಂದಡೆ, ನೇತ್ರಕ್ಕೆ ನೇತ್ರವಾದ ಜಗನೇತ್ರಕ್ಕೆ ಪ್ರಕಾಶವಾಗಿ ತನ್ನ ತಾ ತೋರದಿದ್ದಂತೆ, ಜ್ಯೋತಿರ್ಲಿಂಗವನೆ ನೋಡಿದ ನೇತ್ರವು ಲಿಂಗನೇತ್ರವು. ಅದೀಗ ಉತ್ತಮವು. ಖಗಮೃಗ ಕ್ರಿಮಿಕೀಟ ಪತಂಗ ನೇತ್ರಂಗಳು ಉಭಯ ಕರ್ಮಂಗಳಿಲ್ಲವಾಗಿ ದೃಷ್ಟಿದೋಷವಿಲ್ಲ. ಅದು ಮಧ್ಯಮವೆನಿಸಿತ್ತು. ಅಪವಿತ್ರಜೀವಿಗಳಾದ ಭವಿಗಳ ನೇತ್ರವು ಉಭಯ ಕರ್ಮಕ್ಕನುಕೂಲವಾದ ಕಾರಣ, ಚರ್ಮಚಕ್ಷುವೆಂದು ತನ್ನ ತಾನರಿಯದ ಗಾಡಾಂಧಕಾರವೆಂದು, ವಿೂನನೇತ್ರವೆಂದು ವಿಷನೇತ್ರ ವಿಷಯನೇತ್ರವೆಂದು ಮನ್ಮಥನ ಕೈಗೆ ಸಿಲ್ಕಿದ ನೀಲೋತ್ಪಲಬಾಣವೆಂದು, ತಾಮಸಾಗ್ನಿಯೆಂದು, ನೇತ್ರೇಂದ್ರಿಯವೆಂದು, ಶಿವಲಾಂಛನಧಾರಿಗಳ ಕೆಡಿಸುವ ಮಹಾಪಾತಕದೃಷ್ಟಿಯೆಂದು, ವಿಷಯ ಗಾಳಿಯೆಂದು ಪೇಳಲ್ಪಟ್ಟಿತ್ತು. ಅವರಿಗಿಷ್ಟಲಿಂಗಧಾರಣವಿಲ್ಲದ ಕಾರಣ, ಕನಿಷ*ವೆಂದು ಪೇಳಲ್ಪಟ್ಟಿತ್ತು. ಇದು ಕಾರಣ, ಶಿವಭಕ್ತರವರ ನೋಡುವುದಿಲ್ಲ. ಅವರು ಸುಕರ್ಮ ದುಷ್ಕರ್ಮವೆಂಬ ಮಾಯಾ ರೂಪುಗಳಂ ಎದುರಿಟ್ಟು ನೋಡುತ್ತಿಹರಾಗಿ, ಶಿವಾರ್ಚನೆ ಶಿವಾರ್ಪಣವಂ ಮಾಡುವುದಿಲ್ಲ. ಅವರ ಬಹುಜನ್ಮಾಂತರದ ಮಹಾಪಾತಕಂಗಳು ಶಿವಭಕ್ತರು ತಮ್ಮ ಸೋಂಕವೆಂದು, ಮೇರುಗಿರಿಯಂ ಪಿಡಿದು ಘೋರಾಸ್ತ್ರ ಪ್ರಯೋಗದಿಂ ದಹಿಸಿ ಗುಹೇಶ್ವರಲಿಂಗವನೊಡಗೂಡುವರು ನೋಡಾ.
--------------
ಅಲ್ಲಮಪ್ರಭುದೇವರು
-->