ಅಥವಾ

ಒಟ್ಟು 10 ಕಡೆಗಳಲ್ಲಿ , 6 ವಚನಕಾರರು , 9 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂಗಸ್ಥಲ ಮೂರು, ಲಿಂಗಸ್ಥಲ ಮೂರು, ಜ್ಞಾನಸ್ಥಲ ಮೂರೆಂಬಲ್ಲಿ, ಆತ್ಮ ಹಲವು ರೂಪಾಗಿ ತೊಳಲುತ್ತಿದೆ ನೋಡಾ. ಅಂಗಸ್ಥಲದ ಲಿಂಗ, ಲಿಂಗಸ್ಥಲದ ಜ್ಞಾನ, ಜ್ಞಾನಸ್ಥಲದ ಸರ್ವಚೇತನಾದಿಗಳೆಲ್ಲ ಎಯ್ದುವ ಪರಿಯೆಂತು? ಎಯ್ದಿಸಿಕೊಂಬುವನಾರೆಂದು ನಾನರಿಯೆ. ಹಿನ್ನಿಗೆ ದಯವಾದಡೆ ಹರಿವುದಲ್ಲದೆ ಮುಮ್ಮೊನೆಗುಂಟೆ ಉಭಯ? ಪೂರ್ವಕ್ಕೆರಡು, ಉತ್ತರಕ್ಕೆ ಒಂದೆಂದಲ್ಲಿ, ನಿಶ್ಚಯವ ತಿಳಿಯಬೇಕು, ನಿ:ಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಭಕ್ತಿಸ್ಥಲವಾರು, ಮಹೇಶ್ವರಸ್ಥಲವಾರು, ಪ್ರಸಾದಿಸ್ಥಲವಾರು, ಪ್ರಾಣಲಿಂಗಿಸ್ಥಲವಾರು, ಶರಣಸ್ಥಲವಾರು, ಐಕ್ಯನ ಐಕ್ಯ ಆರೆಂಬಲ್ಲಿ, ನೇತಿಗಳೆದು ಸ್ಥಲನಿಂದ ಮತ್ತೆ ಐಕ್ಯನ ಆರುಕೂಟವಾವುದಯ್ಯಾ ? ಅದು ದರ್ಪಣದ ಭಾವದೊಪ್ಪ. ಅದು ಭಾಗೀರಥಿಯ ಅಪ್ಪುವಿನ ಭೇದ. ಇದು ಆರ ಭಾವಕ್ಕೂ ತಪ್ಪದ ಸ್ಥಲ. ಸಂದೇಹವುಳ್ಳನ್ನಕ್ಕ ಷಟ್ಸ್ಥಲ, ಸಂದೇಹ ನಿಂದು ಒಂದೆಂದಲ್ಲಿ ಏಕಸ್ಥಲ. ಏಕಸ್ಥಲ ಪ್ರತಿರೂಪಾಗಿ ಕರ್ತೃಭೃತ್ಯನೆಂಬ ಉಭಯರೂಪಾಯಿತ್ತು. ಉಭಯದ ರೂಪಿಂದ ಹಲವುಸ್ಥಲ ಒಲವರವಾಯಿತ್ತು. ಆ ಹೊಲಬ ತಿಳಿದು, ಸಲೆ ವಸ್ತು ಒಂದೆಂದಲ್ಲಿ ಸ್ಥಲಲೇಪ, ನಿಃಕಳಂಕ ಮಲ್ಲಿಕಾರ್ಜುನಲಿಂಗವೆಂಬ ಕುರುಹಡಗಿದಲ್ಲಿ.
--------------
ಮೋಳಿಗೆ ಮಾರಯ್ಯ
ಸರ್ವಮಯ ಆತ್ಮನೆಂದಲ್ಲಿ ರಕ್ಷಿಸಿ ಶಿಕ್ಷಿಸಿಹೆನೆಂಬುದೇನೊ? `ಅಣೋರಣೀಯಾನ್ಮಹತೋಮಹೀಯಾನ್' ಎಂಬಲ್ಲಿ ಬೇರೊಂದರಿತು ಕುರಿತು ಕಾಬುದೇನು? ಇದಿರಿಗೆ ತಾನಿಲ್ಲ, ತನಗೆ ಇದಿರಿಲ್ಲ ಎಂದಲ್ಲಿ ಗಜಬಜೆಯಲ್ಲಿ ಕುಜನವೇತಕ್ಕೆ? ಬೇರಿಗೆ ನೀರನೆರೆದಲ್ಲಿ ಶಾಖೆಗೆ ಸಂದುಂಟೆ? ಅಂಗ ಪ್ರಾಣಲಿಂಗ ಒಂದೆಂದಲ್ಲಿ ಅರ್ಪಿತಕ್ಕೆ ಹಿಂದು ಮುಂದಿಲ್ಲ. ನಿಜಗುಣಯೋಗಿಯ ಯೋಗಕ್ಕೆ ಮುನ್ನವೆ ಇಲ್ಲ.
--------------
ನಿಜಗುಣಯೋಗಿ
ಬಯಲು ಬಯಕೆಗೆ ಒಳಗಾದಲ್ಲಿ ಇಕ್ಕುವರಿನ್ನಾರೊ ? ಅರಿವ ಆತ್ಮ ಪ್ರಕೃತಿ ರೂಪಾದಲ್ಲಿ ಬೇಡಾ ಎಂದು ಬಿಡಿಸುವರಾರೊ ? ದೀಪವೊಂದರಲ್ಲಿ ಉದಿಸಿ, ಹಲವು ಜ್ಯೋತಿಯ ಕುರುಹಿಟ್ಟಂತೆ, ಆತ್ಮವೊಂದರಲ್ಲಿ [ಉದಿಸಿ] ಹಲವು ಇಂದ್ರಿಯಂಗಳಾದ ಸಂದನರಿಯದೆ, ಅವ ಬಂದಬಂದಂತೆ ಆಡುವ ಸಂದೇಹಿಗಳಿಗುಂಟೆ, ನಿಜಾಂಗದ ನಿಜ ? ಈ ದ್ವಂದ್ವವನಳಿದು ಒಂದೆಂದಲ್ಲಿ, ಅದು ನಿಜದ ಸಂಗ. ಆ ಸಂಗವ ಹಿಂಗಿದಲ್ಲಿ, ಕಾಮಧೂಮ ಧೂಳೇಶ್ವರನು ಒಂದರವನೂ ಅಲ್ಲ.
--------------
ಮಾದಾರ ಧೂಳಯ್ಯ
ರೂಪೆಂಬುದನರಿದು ಸಂಕಲ್ಪಕ್ಕೊಳಗಾಗದೆ, ಶೂನ್ಯವೆಂಬುದನರಿದು ಸಂಚಾರಕ್ಕೀಡಾಗದೆ, ಉಭಯಮಾರ್ಗವ ತಿಳಿದು ಸಂದೇಹವೆಂಬ ಸಂಕಲ್ಪದಲ್ಲಿ ನಿಲ್ಲದೆ, ನಿಜ ಒಂದೆಂದಲ್ಲಿ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಆತ್ಮ ಒಂದೆಂದಲ್ಲಿ, ಇಂದ್ರಿಯಂಗಳು ಹಲವು ತೆರನಾದವು ನೋಡಾ. ವಾಯು ಒಂದೆಂದಡೆ, ಒಂಬತ್ತು ಸಂಧಿಸಿದವು ನೋಡಾ. ಇಂದ್ರಿಯ ಒಂದೆಂದಡೆ, ನಾಲ್ಕು ಸಂದಣಿಸಿದವು ನೋಡಾ. ಮದ ಒಂದೆಂದಡೆ, ಏಳು ಸಂಭ್ರಮಿಸುತಿವೆ ನೋಡಾ. ಕಳೆ ಒಂದೆಂದಡೆ, ಹದಿನೈದು ಹಿಂಗದಿವೆ ನೋಡಾ. ಇಂತೀ ಸ್ಥೂಲತನು ಒಂದೆಂದಡೆ, ಸೂಕ್ಷ್ಮಕಾರಣ ದ್ವಂದ್ವವಾಗಿವೆ ನೋಡಾ. ಜೀವ ಒಂದೆಂದಡೆ, ಪರಮಾತ್ಮನೆಂದು ತ್ರಿವಿಧ ಸಂಗವಾಗಿದೆ ನೋಡಾ. ಅರಿದೆನೆಂಬಲ್ಲಿ ಹಿಂದೊಂದು ಮರವೆ, ಮರೆದೆನೆಂಬಲ್ಲಿ ಮುಂದೊಂದರಿವು. ಇಂತೀ ದಂಪತಿ ಸಂಗವುಳ್ಳನ್ನಕ್ಕ ಏನನಹುದೆಂಬೆ, ಏನನಲ್ಲಾ ಎಂಬೆ ! ನುಡಿದಡೆ ಸಮಯಕ್ಕೆ ದೂರ, ಸುಮ್ಮನಿದ್ದಡೆ ಸ್ವಾನುಭಾವಕ್ಕೆ ದೂರ. ಆರೆಂದಡೂ ಎನಲಿ, ಆವ ಸ್ಥಲದಲ್ಲಿ ನಿಂದಡೂ ಭಕ್ತಿಸ್ಥಲವೆ. ವಸ್ತುವ ನೆಮ್ಮುವುದಕ್ಕೆ ವಿಶ್ವಾಸ. ಇದು ಸಂಗನಬಸವಣ್ಣನ ಕಟ್ಟು, ಬ್ರಹ್ಮೇಶ್ವರಲಿಂಗವ ಮುಟ್ಟುವ ಗೊತ್ತು.
--------------
ಬಾಹೂರ ಬೊಮ್ಮಣ್ಣ
ಇಷ್ಟದಲ್ಲಿ ನೋಟ, ಜ್ಞಾನದಲ್ಲಿ ಕೂಟ ಏಕಾರ್ಥವಾದಲ್ಲಿ ಕಾಯವೆಂಬ ಕದಳಿಯ ಬಿಟ್ಟುದು ಭಾವವೆಂಬ ಕುರುಹ ಮರೆದುದು. ಇಂತೀ ಉಭಯ ನಿರ್ಭಾವವಾದಲ್ಲಿ ಇಹಪರವೆಂಬ ಹೊಲಬುಗೆಟ್ಟಿತ್ತು, ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನು ಒಂದೆಂದಲ್ಲಿ
--------------
ಮೋಳಿಗೆ ಮಹಾದೇವಿ
ವಸ್ತುವ ಕುರಿತು ಇಷ್ಟವ ನೋಡಬೇಕಲ್ಲದೆ, ಇಷ್ಟವ ಕುರಿತು ವಸ್ತುವ ನೋಡಬಹುದೆ? ಹಿಡಿತೆಯ ಹಿಡಿದು ಇರಿಯಬೇಕಲ್ಲದೆ, ಮೊನೆಯ ಹಿಡಿದು ಇರಿದವರುಂಟೆ? ನೆನಹ ರೂಪಿನಲ್ಲಿ ಅನುಕರಿಸಬಹುದಲ್ಲದೆ, ರೂಪ ನೆನಹಿನಲ್ಲಿ ಅನುಕರಿಸಬಹುದೆ? ತಿಟ್ಟವ ಲಕ್ಷಿಸುವುದು ಲೆಕ್ಕಣಿಕೆಯಿಲ್ಲದೆ, ಆ ತಿಟ್ಟ ಲೆಕ್ಕಣಿಕೆಯ ಲಕ್ಷಿಸಬಹುದೆ? ಇಂತೀ ದ್ವಂದ್ವವನರಿದು, ಉಭಯದ ಸಂದಿನ ಬೆಸುಗೆ ಒಂದೆಂದಲ್ಲಿ, ಐಕ್ಯಾನುಭಾವ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ನಾನಾ ಜೀವದ ನೋವು ಒಂದೆಂದಲ್ಲಿ, ಮರಣಕ್ಕೆ ನಾನಾ ಭೇದಂಗಳುಂಟು. ಯೋನಿಯ ಕೂಟದ ಸುಖವೊಂದೆಂದಲ್ಲಿ, ಯೋಗ ನಾನಾ ಭೇದಂಗಳುಂಟು. ನಾನಾ ಸ್ಥಳಂಗಳ ಭೇದಿಸಿ, ವೇಧಿಸಿ, ಮೆಟ್ಟಿ ನೋಡಲಿಕ್ಕೆ ಇಂದ್ರಿಯಂಗಳಿಗೆ ಭಿನ್ನರೂಪಾಗಿ ತೋರುತ್ತಿಹವು. ಅದೇತರ ಗುಣವೆಂದು ನಿರಾಕರಿಸಿ ನೋಡಲಿಕ್ಕೆ ಅದಂತೆ ಇದ್ದಿತ್ತು. ಅಂತೆಯಿದ್ದ ಮೇಲೆ ಅಂತೆಯಿಂತೆಯೆನಲಿಲ್ಲ ಆ ಗುಣ ಚಿಂತನೆಗೆ ಹೊರಗು, ಕಾಮಧೂಮ ಧೂಳೇಶ್ವರನು.
--------------
ಮಾದಾರ ಧೂಳಯ್ಯ
-->