ಅಥವಾ

ಒಟ್ಟು 8 ಕಡೆಗಳಲ್ಲಿ , 5 ವಚನಕಾರರು , 6 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒಳ್ಳಿಹ ಮೈಲಾರನ ಒಳಗೆಲ್ಲ ಸಣಬು, ಹೊರಗಣ ಬಣ್ಣ ಕರ ಲೇಸಾುತ್ತಯ್ಯಾ. ಶ್ವಾನನ ನಿದ್ರೆ, ಅಜ್ಞಾನಿಯ ತಪದಂತೆ ಆುತ್ತಯ್ಯಾ ಎನ್ನ ಮತಿ, ಕೂಡಲಸಂಗಮದೇವಾ. 281
--------------
ಬಸವಣ್ಣ
ಬೆಲ್ಲದ ಪುತ್ಥಳಿಯ ಕೈಯಲ್ಲಿ ಹಿಡಿದು ಎಲ್ಲಿ ಚುಂಬಿಸಿದಡೂ ಇನಿದಹುದು. ಒಳ್ಳಿಹ ಬೇವಿನ ಹಣ್ಣ ಮೆಲ್ಲನೆ ಚುಂಬಿಸಿದಡೆ ಇನಿದಹುದೆ? ಎಲ್ಲ ವಿದ್ಯೆಯನೂ ಬಲ್ಲೆವೆಂದೆಂಬರು, ಅವರು ಅ(ಸ?)ಲ್ಲದೆ ಹೋದರಯ್ಯಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಆಳು ಸಿಕ್ಕಿದಲ್ಲಿ ಕೈದುವಿನ ಒರೆಯ ತೆಗೆಯಬೇಕಲ್ಲದೆ, ಅವಧಿಗೆ ಬಂದಲ್ಲಿ ಒದಗಬೇಕಲ್ಲದೆ, ಬಯಲ ಚಿಪ್ಪಿರಿದು ಬೆಲ್ಲವ ಮೆದ್ದೆನೆಂದಡೆ ಮೆಚ್ಚುವರೆ? ಗೆಲ್ಲದ ಜೂಜು, ಕೊಲ್ಲದ ಅರಿಗಳ ಬಲ್ಲವರು ಮೆಚ್ಚುವರೆ? ಸೊಲ್ಲಿನ ಮಾತಿಂಗೆ ನೆರೆ ಬಲ್ಲವರು ಸಿಕ್ಕುವಡೆ, ಗೆಲ್ಲ ಗೂಳಿತನವೆ? ಬರಿಯ ಚೀರದ ಪಸರಕ್ಕೆ ಲಲ್ಲೆಯ ಮಾತೇ ಒಳ್ಳಿಹ ನಿಃಕಳಂಕ ಮಲ್ಲಿಕಾರ್ಜುನನ ಸಂಗ.
--------------
ಮೋಳಿಗೆ ಮಾರಯ್ಯ
ಮುನ್ನಿನ ಆದ್ಯರ ಪಥಂಗಳು ಇನ್ನಾರಿಗೂ ಅಳವಡವು ನೋಡಾ. ಬಲ್ಲೆನಾಗಿ ಒಲ್ಲೆನು ಅವರ, ಸಲ್ಲರು ಶಿವಪಥಕ್ಕೆ. ಒಳ್ಳಿಹ ಮೈಲಾರನ ಸಿಂಗಾರದಂತೆ, ವೇಶಿಯ ಬಾಯ ಎಂಜಲನುಂಬ ದಾಸಿಯ ಸಂಸಾರದಂತೆ, ಕೂಡಲಸಂಗನ ಶರಣರನರಿಯದೆ ಉಳಿದ ಭಂಗಿತರ.
--------------
ಬಸವಣ್ಣ
ಕಳ್ಳನ ಕೈಯಲ್ಲಿ ಒಂದು ಒಳ್ಳಿಹ ರತ್ನವ ಕಂಡಡೆ ಎಲ್ಲರೂ ಬಂದು ತಲೆವಿಡಿವರಯ್ಯಾ. ಆ ರತ್ನವ ರತ್ನವ್ಯವಹಾರಿ ಕೊಟ್ಟು ಕೊಂಡಡೆ ಆರೂ ಬಾಯಲೆತ್ತಲಮ್ಮರು. ಶೈವ ಗುರುವಿನ ಕೈಯಲ್ಲಿ ಸಾಹಿತ್ಯವಾದ ಲಿಂಗವನು ವೀರಶೈವ ಗುರುವಿನ ಕೈಯಲ್ಲಿ ಕೊಟ್ಟು ಮರಳಿ ಕೊಂಡಡೆ ಆತ ಇಹಲೋಕ ಪೂಜ್ಯನು, ಪರಲೋಕ ಪೂಜ್ಯನು. ನಿಮ್ಮಾಣೆ, ನಿಮ್ಮ ಪ್ರಮಥರಾಣೆ ತಪ್ಪದು ರೇಕಣ್ಣಪ್ರಿಯ ನಾಗಿನಾಥಾ.
--------------
ಬಹುರೂಪಿ ಚೌಡಯ್ಯ
ಭಕ್ತರ ಮಠಕ್ಕೆ ಬಂದು ಒಳಹೊರಗೆಂಬುದು ಶೀಲವೆ ? ಎನ್ನ ಲಿಂಗಕ್ಕೆ ಒಳ್ಳಿಹ ಅಗ್ಘಣಿಯ ತನ್ನಿ ಎಂಬುದು ಶೀಲವೆ ? ಎನ್ನ ಲಿಂಗಕ್ಕೆ ಒಳ್ಳಿಹ ಪುಷ್ಪವ ತನ್ನಿ ಎಂಬುದು ಶೀಲವೆ ? ಎನ್ನ ಲಿಂಗಕ್ಕೆ ಒಳ್ಳಿಹ ಓಗರ ಮಾಡಿ ಎಂಬುದು ಶೀಲವೆ ? ಪಂಚೇಂದ್ರಿಯ ಸಪ್ತಧಾತು ಅರಿಷಡ್ವರ್ಗವ ಕೊಂದಾತನು ಕೊಡಲಚೆನ್ನಸಂಗನಲ್ಲಿ ಆತನೆ ಶೀಲವಂತನು.
--------------
ಚನ್ನಬಸವಣ್ಣ
-->