ಅಥವಾ

ಒಟ್ಟು 3 ಕಡೆಗಳಲ್ಲಿ , 3 ವಚನಕಾರರು , 3 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಲ್ಲಮನ ಸಂಗ, ಅಜಗಣ್ಣನ ಸಂಗ, ಕಕ್ಕಯ್ಯನ ಸಂಗ, ಚಿಕ್ಕಯ್ಯನ ಸಂಗ, ಎಲ್ಲರ ಸಂಗ, ಯತಿಗಳ ಸಂಗ, ಜತಿಗಳ ಸಂಗ, ಮಾನ್ಯರ ಸಂಗ, ಮುಖ್ಯರ ಸಂಗ. ಸಂಗಯ್ಯಾ, ಎನ್ನ ಸಂಗ, ಎನ್ನ ಬಸವಯ್ಯನ ಸಂಗ.
--------------
ನೀಲಮ್ಮ
ಯತಿಗಳ ವ್ರತಿಗಳ ಧೃತಿಗೆಡಿಸಿತ್ತು ಮಾಯೆ. ಕಲಿಗಳ ಛಲಿಗಳ ಬಲುಹ ಮುರಿಯಿತ್ತು ಮಾಯೆ. ಹರಿ ಬ್ರಹ್ಮ ರುದ್ರಾದಿಗಳೆಲ್ಲರ ತರಕಟ ಕಾಡಿತ್ತು ಮಾಯೆ. ಹೋ! ಹೋ!! ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗದಲ್ಲಿ ಮಾಯಾಮರ್ಕಟ ವಿಧಿಯೇ!
--------------
ಚಂದಿಮರಸ
ಸರ್ಪಕಡಿದು ಸತ್ತ ಹೆಣನೆದ್ದು ಸುಳಿದಾಡುವುದ ಕಂಡೆ. ಎಡೆ ಐದರೊಳಿಪ್ಪ ಅಗಳಿಗೊಂದೊಂದು ಭೂತನ ಕಂಡೆ. ಭೂತನ ಗೆಣೆವಿಡಿದ ಕಾಗೆಯಕುಳ ತಿಂಬುದ ಕಂಡೆ. ಮಡುವಿಗೆ ಜಾಲವಬೀಸುವ ಮಾಯದ ಜಾಲಗಾರ ಚಂದ್ರಸೂರ್ಯರ ಒಡಲಂ ಹೊಕ್ಕು ನೆಗೆದಾಡದ ಮುನ್ನ ಉಡುಪತಿ ಗಾದ ಬಿದ್ದ, ಕಸಪತಿ ತೊದಳಿಗನಾದ, ಗಂಧಪತಿ ದಂದುಗಕ್ಕೊಳಗಾದ, ಮುನ್ನ ಸ್ಪರುಷನಪತಿ ಪರಿಯಟಂಗೊಂಡ. ಇಂತೀ ಎಳೆದಾಟ ಮುಂದುಗೊಳ್ಳದ ಮುನ್ನ ಯತಿಗಳ ಯತಿತನ ಹಾರಿತ್ತು ; ಸಿದ್ಧರ ಸಿದ್ಧತ್ವ ಕೆಟ್ಟಿತ್ತು . ಶಿವಯೋಗಿಗಳ ಯೋಗತ್ವ ಕೆಡುವುದ ಕಂಡೆನಿದೇನು ಚೋದ್ಯ ಹೇಳಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
-->