ಅಥವಾ
(8) (6) (1) (0) (3) (3) (0) (0) (1) (0) (0) (1) (1) (0) ಅಂ (3) ಅಃ (3) (19) (0) (1) (1) (0) (0) (0) (2) (0) (0) (0) (0) (0) (0) (0) (5) (0) (0) (1) (7) (6) (0) (10) (2) (13) (0) (1) (0) (1) (1) (2) (0) (5) (1) (0)

ಅಂ ಪದದಿಂದ ಪ್ರಾರಂಭವಾಗುವ ವಚನಗಳು:

ಅಂಗೈಯದು ಹೆಂಗಳಾಗಿ, ನೋಡುವ ಕಂಗಳು ಪುರುಷನಾಗಿ ಉಭಯವನರಿವುದು, ಪ್ರಜಾಪತಿಯಾಗಿ. ಚಿದ್ಘನಶಕ್ತಿ ಯೋನಿಯಲ್ಲಿ ಕೂಡಿ, ಬಿಂದು ವಿಸರ್ಜನವಾಯಿತ್ತು. ಅದು ಲೀಯವಾಗಲ್ಪಟ್ಟುದು ಲಿಂಗವಾಯಿತ್ತು. ಅದು ಅಂಗೈಯಲ್ಲಿ ಅರಿಕೆ, ಕಂಗಳಿಂಗೆ ಕುರುಹು. ಮಂಗಳಮಯ ಅರ್ಕೇಶ್ವರಲಿಂಗವನರಿವುದಕ್ಕೆ ಇಷ್ಟದ ಗೊತ್ತೆ ? ಅರ್ಕೇಶ್ವರಲಿಂಗವು ತಾನು ತಾನೆ.
--------------
ಮಧುವಯ್ಯ
ಅಂಗೈಯಲ್ಲಿ ಬೇರು ಹುಟ್ಟಿ, ಮುಂಗೈಯಲ್ಲಿ ಮೊಳೆದೋರಿ, ಹಿಂಗಾಲಿನಲ್ಲಿ ಮರ ಬಲಿಯಿತ್ತು. ಮುಂಗಾಲಿನಲ್ಲಿ ಫಲ ಮೂಡಿ, ಅಂಗೈಯಲ್ಲಿ ಹಣ್ಣಾಯಿತ್ತು. ಕಂಗಳ ಕೂಸು ಹಣ್ಣ ಮೆದ್ದಿತ್ತು. ಕೂಸಿನ ಅಂಗವನರಿ, ಅರ್ಕೇಶ್ವರಲಿಂಗದ ಸಂಗವ ಮಾಡು.
--------------
ಮಧುವಯ್ಯ
ಅಂಗಜನ ಮನೆಯಲ್ಲಿ ಬಂದಬಂದವರೆಲ್ಲರೂ ಮಿಂದು ಉಂಡು ಉಟ್ಟು ಸಂದಣಿಗೊಳ್ಳುತ್ತಿದ್ದರೆ, ಅಂಗಜನ ಬಾಗಿಲ ಕಾವ ಕಂದಲೆಂಕರಿಗೇಕೆ ಅರ್ಕೆಶ್ವರಲಿಂಗದ ಒಲುಮೆ ?
--------------
ಮಧುವಯ್ಯ