ಅಥವಾ
(8) (6) (1) (0) (3) (3) (0) (0) (1) (0) (0) (1) (1) (0) ಅಂ (3) ಅಃ (3) (19) (0) (1) (1) (0) (0) (0) (2) (0) (0) (0) (0) (0) (0) (0) (5) (0) (0) (1) (7) (6) (0) (10) (2) (13) (0) (1) (0) (1) (1) (2) (0) (5) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಭವಸಾಗರವೆಂಬ ಸಮುದ್ರದಲ್ಲಿ, ಸಾಕಾರವೆಂಬ ಹಡಗು, ಚೇತನವೆಂಬ ಅಶ್ವಕಟ್ಟಿ ಬರುತ್ತಿರಲಾಗಿ, ತ್ರಿವಿಧದ ಬಲುಗಿರಿಯ ಹೊಯಿದು, ಹಡಗೊಡೆಯಿತ್ತು. ಲಾಯದ ಅಶ್ವ ನೀರನೊಡಗೂಡಿತ್ತು. ಹಡಗಿನ ಸೆಟ್ಟಿ ಪರಪತಿಗಡಹಿಲ್ಲಾಯೆಂದು ಕುದುರೆಯನೊಡಗೂಡಿದ. ಅರ್ಕೇಶ್ವರಲಿಂಗವ ಕೇಳುವ ಬನ್ನಿ.
--------------
ಮಧುವಯ್ಯ
ಭಕ್ತಿ ಜ್ಞಾನ ವೈರಾಗ್ಯವೆಂಬ ಮಧರವ ಮರೆಯದಿರಿ. ಅರಿವ ನೀಗಾಡಲು ಬೇಡ. ಹೊರವೇಷವ ಹಸನಿಸಿ, ಮೂರುಮಲದಂದವನೆಂದಿಗೂ ಸಂದ್ಥಿಸದಿರೆಂದು ಅರ್ಕೇಶ್ವರಲಿಂಗ ಕೂಗುತಿರ್ದ.
--------------
ಮಧುವಯ್ಯ