ಅಥವಾ
(8) (6) (1) (0) (3) (3) (0) (0) (1) (0) (0) (1) (1) (0) ಅಂ (3) ಅಃ (3) (19) (0) (1) (1) (0) (0) (0) (2) (0) (0) (0) (0) (0) (0) (0) (5) (0) (0) (1) (7) (6) (0) (10) (2) (13) (0) (1) (0) (1) (1) (2) (0) (5) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಬಾಹ್ಯದಲ್ಲಿ ಶ್ರದ್ಧೆಭಾವ, ಭಾವದಲ್ಲಿ ಬಳಕೆ ನಾಸ್ತಿಯಾಗಿ, ಅಮಳಕಫಲ ಕರದಲ್ಲಿದ್ದಂತೆ ಕಲೆದೋರದಿರು, ಅರ್ಕೇಶ್ವರಲಿಂಗವನರಿವುದಕ್ಕೆ.
--------------
ಮಧುವಯ್ಯ
ಬಂಧುಗಳ ಬೆಂಬಳಿಯ ಕಳ್ಳನ ಹೆಂಡತಿಗೆ ಭಗ ಮೂರು, ಬಾಯಾರು, ಪೃಷ್ಠ ಎಂಬತ್ತನಾಲ್ಕುಲಕ್ಷ. ರೋಮ ಎಂಟುಕೋಟಿ. ಹಲ್ಲು ಹದಿನಾರು, ನಾಲಗೆ ಏಳು. ಕಿವಿ ಇಪ್ಪತ್ತೈದು, ನಾಡಿ ಶತದಶ. ಮೂಗು ಮೂವತ್ತೇಳು, ಕಾಲೆಂಟು. ಭುಜವೆರಡು, ಕೈವೊಂದೆ. ಹಿಂದೆ ಮುಂದೆ ನೋಡುವ ಕಣ್ಣು, ಅಬ್ಥಿಸಂದ್ಥಿಯೊಳಗೆ ಒಂದೆ ಅದೆ. ಅರ್ಕೇಶ್ವರಲಿಂಗವ ಕಾಣಬಾರದು.
--------------
ಮಧುವಯ್ಯ
ಬ್ರಹ್ಮನ ಬಾಯಲ್ಲಿ ಅದೆ, ವಿಷ್ಣುವಿನ ಕೈಯಲ್ಲಿ ಅದೆ, ರುದ್ರನ ಶಿರದಲ್ಲಿ ಅದೆ. ತಲೆ ಬಾಯ ನುಂಗಿ, ಕೈ ತಲೆಯೊಳಡಗಿ, ಕಣ್ಣು ಕಾಲಾಯಿತ್ತು, ಅರ್ಕೇಶ್ವರಲಿಂಗನನರಿವ ಭೇದದಿಂದ.
--------------
ಮಧುವಯ್ಯ
ಬೆಲ್ಲವ ಮೆಲುವಾತನ ಹಲ್ಲು ಕಹಿಯಾಗಿ, ಹಲ್ಲು ಕಲ್ಲಿನೊಳಗಾಗಿ, ಅಲ್ಲಿಯೆ ಅಡಗಿ ನೋಡುತ್ತದೆ. ಅದ ನಾವು ನೀವು ಎಲ್ಲರೂ ಅರಿವ ಬನ್ನಿ, ಅರ್ಕೇಶ್ವರಲಿಂಗವ ಬಲ್ಲವರಹರೆ.
--------------
ಮಧುವಯ್ಯ
ಬಾವಿಯ ನೆಳಲ ಬಗ್ಗಿ ನೋಡುವನಂತೆ, ಜೀವದಾಸೆ ನೋಟದ ಬೇಟ ಬಿಡದಂತೆ, ಸಂಸಾರದ ಘಾತಕತನ, ಅರಿವಿನ ಮಾತಿನ ಮಾಲೆ. ಉಭಯವ ನೇತಿಗಳೆಯದೆ ಅರಿಯಬಾರದು, ಅರ್ಕೇಶ್ವರಲಿಂಗವ.
--------------
ಮಧುವಯ್ಯ
ಬಲೆಯ ಮೀರಿದ ಮೃಗ ಸತ್ತಿತ್ತು. ಕೊಲ ಹೋದಾತ, ಹಲವು ಅರಿದ ತಲೆಯ ಕಂಡು, ಹೊಲಬುದಪ್ಪಿದ. ಅರ್ಕೇಶ್ವರಲಿಂಗವನರಿಯಿರಣ್ಣಾ.
--------------
ಮಧುವಯ್ಯ
ಬ್ರಹ್ಮನ ಹರಿದಾಟ, ವಿಷ್ಣುವಿನ ಕಾಲಾಟ, ರುದ್ರನ ಬಾಯಾಟ. ಈ ತ್ರಿವಿಧ ಸಿಬ್ಬುದ್ಧಿ ಹರಿದು, ಅಕ್ಕನ ಗುಕ್ಕಿನೊಳಗಾಗಬೇಡ. ಅರ್ಕೇಶ್ವರಲಿಂಗವನರಿಯಿರಣ್ಣಾ.
--------------
ಮಧುವಯ್ಯ
ಬಣ್ಣ ನುಂಗಿದ ಬಂಗಾರದಂತಾಯಿತ್ತು, ಈ ಅಂಗ. ಶಿಥಿಲವನವಗವಿಸಿದ ಸುರಾಳದಂತಾಯಿತ್ತು, ಈ ಅಂಗ. ಪಳುಕದ ಗಿರಿಯ ಉರಿ ನೆರೆದಂತಾಯಿತ್ತು, ಈ ಅಂಗ. ಸರಸಮಾಧಾನವನೆಯ್ದೆ ಬೆರೆದು ನೆರೆದಂತಾಯಿತ್ತು, ಈ ಅಂಗ. ಬಯಲು ಬಯಲೊಳಗಡಗಿ, ವಸ್ತು ವಸ್ತುವ ಕೂಡಿ, ಅರ್ಕೇಶ್ವರಲಿಂಗದಲ್ಲಿ ಒಪ್ಪಿ ಹೋಯಿತ್ತು, ಈ ಅಂಗ.
--------------
ಮಧುವಯ್ಯ
ಬಾಹ್ಯ ರಚನೆಯಲ್ಲಿ ಸತ್ಕಿøಯಾಮಾರ್ಗ, ಅಂತರಂಗ ಮಾರ್ಗದಲ್ಲಿ ಕರಣಂಗಳ ಸಂಚ ವಿಸಂಚವನರಿಯಬೇಕು. ಇದು ವಸ್ತುವ ಮುಂಚುವ ಭೇದ, ಅರ್ಕೇಶ್ವರಲಿಂಗನ ಸಂಚಿತದ ಅಂಗ.
--------------
ಮಧುವಯ್ಯ
ಬೆತ್ತಲೆಯ ಹುತ್ತದಲ್ಲಿ ಕತ್ತಲೆಯ ಹೆಡೆಯ ಸರ್ಪ, ತೆಕ್ಕೆ ಮಡಿಯಲರಿಯದೆ ಸಿಕ್ಕಿ, ಅದೇ ಹುತ್ತದ ಬಾಯಲ್ಲಿ ಕಪ್ಪೆ ಹರಿದು ಬಂದು, ಸರ್ಪನ ನುಂಗಿತ್ತು. ಹುತ್ತ ಬಚ್ಚಬಯಲಾಯಿತ್ತು, ಅರ್ಕೇಶ್ವರಲಿಂಗನ ಗೊತ್ತು.
--------------
ಮಧುವಯ್ಯ