ಅಥವಾ
(8) (6) (1) (0) (3) (3) (0) (0) (1) (0) (0) (1) (1) (0) ಅಂ (3) ಅಃ (3) (19) (0) (1) (1) (0) (0) (0) (2) (0) (0) (0) (0) (0) (0) (0) (5) (0) (0) (1) (7) (6) (0) (10) (2) (13) (0) (1) (0) (1) (1) (2) (0) (5) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಊರೊಳಗಣ ದೇವಾಲಯದಲ್ಲಿ ಐವರು ಹೊಲೆಯರು ಹೊಕ್ಕು, ದೇವರ ಪೂಜಿಸುತ್ತೈದಾರೆ. ಹೊಲೆಯರು ಮುಟ್ಟಿ ದೇವಾಲಯ ಹೊರಗಾಯಿತ್ತು, ದೇವರೊಳಗದೆ. ಕುಲಜರು ಹೊಲಬುದಪ್ಪಿ ಹೊಲೆ ಒಳಗಾಯಿತ್ತು, ಅರ್ಕೇಶ್ವರಲಿಂಗವನರಿದ ಕಾರಣ.
--------------
ಮಧುವಯ್ಯ
ಊರೆಲ್ಲರೂ ಕೂಡಿ, ಬೇಟೆಗೆ ಹೋಗಿ, ಹಾರುವನ ಕೊಂದರು. ತಲೆವುಳಿದು, ಕಾಲ ಕಂಡಿಸಿ, ಕರುಳಡಗಿತ್ತು. ಬೇಟೆ ಬೆಲೆಯಾದುದಿಲ್ಲ. ಕೇಳುವ ಬನ್ನಿ, ಅರ್ಕೇಶ್ವರಲಿಂಗವ.
--------------
ಮಧುವಯ್ಯ
ಊರ ಸುತ್ತಿ ಬಂದಡೆ ಬಾಗಿಲಲ್ಲಿ ಹೋಗುವ ತೆರನಂತೆ, ಅರಿದು ಓಡಲಾಗದವಂಗೆ ಬೇರೊಂದು ತೆರನಿಲ್ಲ. ಉರಿ ಧರಿಸಿದ ಸರದಂತೆ ಅಲ್ಲಿಯೇ ಲೇಪ, ಅರ್ಕೇಶ್ವರಲಿಂಗದಲ್ಲಿಯೇ.
--------------
ಮಧುವಯ್ಯ